Advertisement
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ-ಚಿರಾಗ್ ಶೆಟ್ಟಿ ಕೂಡ ಓಟ ಮುಂದುವರಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್. ಪ್ರಣಯ್ ದ್ವಿತೀಯ ಸುತ್ತಿನಲ್ಲಿ ಎಡವಿದ್ದಾರೆ.
ಗುರುವಾರದ ದ್ವಿತೀಯ ಸುತ್ತಿನ ಮುಖಾಮುಖೀಯಲ್ಲಿ ಪಿ.ವಿ. ಸಿಂಧು ಭಾರೀ ಹೋರಾಟ ನಡೆಸಿ ಜಪಾನಿನ ಅಯಾ ಒಹೊರಿ ಅವರನ್ನು 11-21, 21-10, 21-13 ಅಂತರದಿಂದ ಹಿಮ್ಮೆಟ್ಟಿಸಿದರು. ಒಂದು ಗಂಟೆ ಕಾಲ ಇವರ ಸ್ಪರ್ಧೆ ಸಾಗಿತು. ಮೊದಲ ಗೇಮ್ ಕಳೆದುಕೊಂಡ ಬಳಿಕ ತಿರುಗಿ ಬಿದ್ದ ಸಿಂಧು, ಮುಂದಿನೆರಡು ಗೇಮ್‌ಗಳಲ್ಲಿ ಜಪಾನೀ ಆಟಗಾರ್ತಿಯ ಮೇಲುಗೈಗೆ ಯಾವ ಅವಕಾಶವನ್ನೂ ನೀಡಲಿಲ್ಲ. ಇದರೊಂದಿಗೆ ಒಹೊರಿ ವಿರುದ್ಧ ಸಿಂಧು 8-0 ಅಜೇಯ ದಾಖಲೆ ಕಾಯ್ದುಕೊಂಡಂತಾಯಿತು. ಕ್ವಾ. ಫೈನಲ್‌ನಲ್ಲಿ ಸಿಂಧು 4ನೇ ಶ್ರೇಯಾಂಕದ ಜಪಾನಿ ಆಟಗಾರ್ತಿ ಯಮಾಗುಚಿ ಸವಾಲನ್ನು ಎದುರಿಸ ಬೇಕಿದೆ. ಇತ್ತೀಚೆಗಷ್ಟೇ “ಇಂಡೋನೇಶ್ಯ ಓಪನ್ ಫೈನಲ್’ನಲ್ಲಿ ಅವರು ಸಿಂಧು ವಿರುದ್ಧ ಜಯ ಸಾಧಿಸಿದ್ದರು. ಇದಕ್ಕೆ ಸಿಂಧು ಸೇಡು ತೀರಿಸಿಕೊಳ್ಳುವರೇ ಎಂಬುದೊಂದು ಕುತೂಹಲ.
Related Articles
Advertisement
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ-ಚಿರಾಗ್ ಶೆಟ್ಟಿ 3 ಗೇಮ್‌ಗಳ ಹೋರಾಟದ ಬಳಿಕ ಚೀನದ ಕೈ ಕ್ಸಿಯಾಂಗ್ ಹುವಾಂಗ್-ಚೆಂಗ್ ಲಿಯು ಅವರನ್ನು 15-21, 21-11, 21-19 ಅಂತರದಿಂದ ಸೋಲಿಸಿದರು. ಇವರಿನ್ನು ಕ್ವಾ. ಫೈನಲ್‌ನಲ್ಲಿ ಜಪಾನಿನ ಟಕೆಶಿ ಕಮುರ-ಕೀಗೊ ಸೊನೊಡ ವಿರುದ್ಧ ಸೆಣಸಲಿದ್ದಾರೆ.
ಪ್ರಣೀತ್-ಸುಗಿಯಾರ್ಟೊ ಫೈಟ್ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಬಿ. ಸಾಯಿಪ್ರಣೀತ್ ಜಪಾನಿನ ಕಂಟಾ ತ್ಸುನೆಯಾಮಾ ಅವರನ್ನು 21-13, 21-16 ಅಂತರದಿಂದ ಪರಾಭವಗೊಳಿಸಿದರು. ಮುಕ್ಕಾಲು ಗಂಟೆ ಕಾಲ ಇವರ ಆಟ ಸಾಗಿತು. ಸಾಯಿ ಪ್ರಣೀತ್ ಇಂಡೋನೇಶ್ಯದ ಟಾಮಿ ಸುಗಿಯಾರ್ಟೊ ಅವರನ್ನು ಎದುರಿಸಲಿದ್ದಾರೆ. ಮೊದಲ ಸುತ್ತಿನಲ್ಲಿ ಕೆ. ಶ್ರೀಕಾಂತ್ ಅವರನ್ನು ಮಣಿಸಿದ್ದ ಎಚ್.ಎಸ್. ಪ್ರಣಯ್ ಆಟ ದ್ವಿತೀಯ ಸುತ್ತಿನಲ್ಲಿ ಮುಗಿದಿದೆ. ಅವರನ್ನು ಡೆನ್ಮಾರ್ಕ್‌ನ ರಾಸ್ಮಸ್ ಜಿಮೆR 21-9, 21-15 ಅಂತರದಿಂದ ಪರಾಭವಗೊಳಿಸಿದರು.