Advertisement
ವಿಶ್ವದ 13ನೇ ರ್‍ಯಾಂಕಿಂಗ್ ಆಟಗಾರನಾಗಿರುವ ಲಕ್ಷ್ಯ ಸೇನ್ 21-15, 21-19 ಅಂತರದಿಂದ ಆತಿಥೇಯ ಜಪಾನ್‌ನ ಕೋಕಿ ವಟನಾಬೆ ಅವರನ್ನು ಕೆಡವಿದರು. ಇದು ಲಕ್ಷ್ಯ ಸೇನ್ ಕಾಣುತ್ತಿರುವ ಸತತ 3ನೇ ಸೆಮಿಫೈನಲ್. ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಕೂಟಗಳಲ್ಲೂ ಅವರು ಉಪಾಂತ್ಯ ತಲುಪಿದ್ದರು.
ಆದರೆ ಎಚ್.ಎಸ್. ಪ್ರಣಯ್‌ಗೆ ಸೆಮಿಫೈನಲ್ ಅದೃಷ್ಟ ಇರಲಿಲ್ಲ. ಅವರು ವಿಶ್ವದ ನಂ.1 ಆಟಗಾರ, ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಮೊದಲ ಗೇಮ್ ಗೆದ್ದು, ದ್ವಿತೀಯ ಗೇಮ್‌ನಲ್ಲಿ 7-1ರ ಮುನ್ನಡೆ ಸಾಧಿಸಿದ ಹೊರತಾಗಿಯೂ ಸೋಲಿನತ್ತ ಜಾರಿದರು. ಅಕ್ಸೆಲ್ಸೆನ್ ಈ ಪಂದ್ಯವನ್ನು 19-21, 21-18, 21-8 ಅಂತರದಿಂದ ಗೆದ್ದರು. ಪುರುಷರ ಡಬಲ್ಸ್‌ನಲ್ಲಿ ಚಿರಾಗ್-ಸಾತ್ವಿಕ್ ಕೂಡ 3 ಗೇಮ್‌ಗಳ ಹೋರಾಟ ನಡೆಸಿ ಸೋಲಿನತ್ತ ಹೊರಳಬೇಕಾಯಿತು. ಚೈನೀಸ್ ತೈಪೆಯ ಒಲಿಂಪಿಕ್ ಚಾಂಪಿಯನ್ಸ್ ಲೀ ಯಾಂಗ್-ವಾಂಗ್ ಚಿ ಲಾನ್ 21-15, 23-25, 21-16ರಿಂದ ಭಾರತೀಯ ಜೋಡಿಯನ್ನು ಪರಾಭವಗೊಳಿಸಿದರು.