Advertisement

ಜಂತ್ರ -ನಂದಳಿಕೆ ಕೂಡು ರಸ್ತೆಗೆ ಇನ್ನೂ ಆಗದ ಡಾಮರು

12:19 AM Jul 08, 2019 | Team Udayavani |

ಬೆಳ್ಮಣ್‌: ನಂದಳಿಕೆಯ ಗೋಳಿಕಟ್ಟೆಯಿಂದ ಬೆಳ್ಮಣ್‌ ಗ್ರಾಮದ ಜಂತ್ರವನ್ನು ಸಂಪರ್ಕಿಸುವ ರಸ್ತೆಯ ಅರ್ಧ ಭಾಗ ಡಾಮರು ಕಾಣದೆ ಜಲ್ಲಿ ಕಲ್ಲುಗಳು ಎದ್ದ ರೀತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.

Advertisement

ನಂದಳಿಕೆ ಪಂಚಾಯತ್‌ ವ್ಯಾಪ್ತಿಗೆ ಬರುವ ಗೋಳಿಕಟ್ಟೆಯಿಂದ ಸುಮಾರು 500 ಮೀ. ವರೆಗೆ ಡಾಮರೀಕರಣ ನಡೆಸಲಾಗಿದ್ದು ಉಳಿದಂತೆ ಬಳಿಕ ಬೆಳ್ಮಣ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ 250 ರಿಂದ 300 ಮೀ. ಉದ್ದಕ್ಕೆ ಡಾಮರು ಹಾಕಿಲ್ಲ. ಮಳೆ ಸಂದರ್ಭ ನೀರು ರಸ್ತೆಯಲ್ಲೇ ಹರಿದು ವಾಹನ ಸಂಚಾರ, ಕಾಲ್ನಡಿಗೆಗೂ ಪ್ರಯೋಜನಕ್ಕಿಲ್ಲದಾಗಿದೆ. ಈ ರಸ್ತೆಗೆ ಇನ್ನೂ ಡಾಮರೀಕರಣ ಆಗದಿರುವ ಬಗ್ಗೆ ನಂದಳಿಕೆ ಹಾಗೂ ಬೆಳ್ಮಣ್‌ ಭಾಗದ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ನಂದಳಿಕೆಯಿಂದ ಶಿರ್ವ ಉಡುಪಿಗೆ ಹತ್ತಿರ
ನಂದಳಿಕೆ ಗೋಳಿಕಟ್ಟೆಯಿಂದ ಜಂತ್ರವನ್ನು ತಲುಪುವ ಈ ರಸ್ತೆ ಶಿರ್ವ ಮೂಲಕ ಉಡುಪಿ ತಲುಪಲು ಬಲು ಹತ್ತಿರದ ರಸ್ತೆಯಾಗಿದೆ. ನಂದಳಿಕೆಯಿಂದ ಶಿರ್ವ, ಜಂತ್ರ, ಕಟಪಾಡಿ, ಉಡುಪಿ ಕಡೆಯತ್ತ ಪ್ರಯಾಣ ಬೆಳೆಸಲು ಇದು ಹತ್ತಿರದ ರಸ್ತೆಯಾದ ಪರಿಣಾಮ ಬಹುತೇಕ ವಾಹನಗಳು ಇದೇ ರಸ್ತೆ¿ ುನ್ನು ಅವಲಂಬಿಸಿದೆ. ಆದರೆ ಡಾಮರು ಇಲ್ಲದ್ದರಿಂದ ಸಂಕಟ ಅನುಭವಿಸಬೇಕಾಗಿದೆ. ರಸ್ತೆಯ ತುಂಬ ದೊಡ್ಡ ಗಾತ್ರದ ಕಲ್ಲುಗಳು ಗೋಚರಿಸುತ್ತಿವೆ. ಟಾರು ಹಾಕಿ ಅದೆಷ್ಟೋ ವರ್ಷಗಳು ಕಳೆದಿದ್ದು ಮತ್ತೆ ಡಾಮರೀಕರಣದ ಯೋಗ ಇನ್ನೂ ಬಂದಿಲ್ಲ. ಮಳೆಗಾಲದಲ್ಲಿ ಅಸಂಖ್ಯಾತ ಹೊಂಡಗಳೂ ಸೃಷ್ಟಿಯಾಗಿವೆ.

ಪ್ರತಿಭಟನೆ ಎಚ್ಚರಿಕೆ
ಪ್ರತಿ ಗ್ರಾಮಸಭೆಯಲ್ಲಿ ಈ ರಸ್ತೆ ಅಭಿವೃದ್ಧಿ ಬಗ್ಗೆ ಗ್ರಾಮಸ್ಥರು ಧ್ವನಿ ಎತ್ತುತ್ತಲೇ ಇದ್ದಾರೆ. ಆದರೆ ಸ್ಥಳೀಯಾಡಳಿತ ತಲೆಕೆಡಿಸಿಕೊಂಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಗಾಲಕ್ಕೆ ಮುನ್ನ ಈ ರಸ್ತೆ ದುರಸ್ತಿ ನಡೆಯದಿದ್ದಲ್ಲಿ ಪ್ರತಿಭಟನೆ ನಡೆಸುವು ದಾಗಿ ನಂದಳಿಕೆ ಹಾಗೂ ಬೆಳ್ಮಣ್‌ನ ಗ್ರಾಮಸ್ಥರು ಹೇಳಿದ್ದಾರೆ.

ಶಾಸಕರಿಂದ ಅನುದಾನ ಮೀಸಲು

ಕಾರ್ಕಳ ಶಾಸಕ ಸುನಿಲ್ ಕುಮಾರ್‌ ಅವರು ಈಗಾಗಲೇ ರಸ್ತೆ ಡಾಮರೀಕರಣಕ್ಕೆ ಅನುದಾನ ಮೀಸಲಿರಿಸಿದ್ದಾರೆ. ಮಳೆ ಮುಗಿದ ಕೂಡಲೇ ಡಾಮರೀಕರಣ ನಡೆಸಲಾಗುವುದು.
– ಜನಾರ್ದನ ತಂತ್ರಿ, ಬೆಳ್ಮಣ್‌ ಗ್ರಾ.ಪಂ. ಸದಸ್ಯ
Advertisement

ಪರ್ಯಾಯ ವ್ಯವಸ್ಥೆ
ನಂದಳಿಕೆ ಹಾಗೂ ಬೆಳ್ಮಣ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಬರುವುದರಿಂದ ಎರಡೂ ಪಂಚಾಯತ್‌ಗಳು ರಸ್ತೆ ಕಾಮಗಾರಿ ನಡೆಸಬೇಕಿದೆ. ರಸ್ತೆಯ ಒಂದು ಕಡೆ ಖಾಸಗಿ ವ್ಯಾಪ್ತಿಗೆ ಬರುವುದರಿಂದ ಅದು ಪಂಚಾಯತ್‌ಗೆೆ ಹಸ್ತಾಂತರ ಆಗದೇ ಏನೂ ಮಾಡುವಂತಿಲ್ಲ. ಸದ್ಯ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. -ಪ್ರಕಾಶ್‌, ಬೆಳ್ಮಣ್‌ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next