Advertisement
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೀಡಿ, ಪೆನ್ ಡ್ರೈವ್ ಇದೆ ಎಂದು ಹೆಸರಿಸೋ ಪ್ರಯತ್ನ ಮಾಡುತ್ತೀರಾ? ನನ್ನ ಜೊತೆ ಹುಡುಗಾಟ ಆಡ್ತಾ ಇದೀರಾ? ಚೆಲ್ಲಾಟ ಆಡ್ತೀರಾ? ಎಸ್ಐಟಿ ಅಧಿಕಾರಿಗಳು ಆರೋಪ ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ರೈತರ ಸಾಲಮನ್ನಾ ಮಾಡುವುದಿಲ್ಲ ಎಂದು ಹೇಳಿದೆ. ಹಾಗಾಗಿ ರಾಜ್ಯ ಸರ್ಕಾರವೇ ರೈತರ ಸಾಲ ಮನ್ನಾ ಮಾಡಲಿ ಎಂದು ಒತ್ತಾಯಿಸಿದ ಕುಮಾರಸ್ವಾಮಿ, ರೈತರ ಸಾಲಮನ್ನಾ ಮಾಡಿದ್ರೆ ಅದು ಫ್ಯಾಶನ್. ಹಾಗಾದ್ರೆ ಕಾರ್ಪೋರೇಟ್ ಕುಳಗಳ ಸಾಲ ಮನ್ನಾ ಮಾಡಿದ್ರೆ ಅದು ಏನು? ಇದರಿಂದ ದೇಶದ ಆರ್ಥಿಕ ಸ್ಥಿತಿ ಉದ್ಧಾರವಾಗುತ್ತ ಎಂದು ವೆಂಕಯ್ಯ ನಾಯ್ದು ಹೇಳಿಕೆಗೆ ತಿರುಗೇಟು ನೀಡಿದರು.