Advertisement

ಜನ್ಸಾಲೆ: ವಿದ್ಯುತ್‌ ಕಂಬಕ್ಕೆ ರಿಕ್ಷಾ ಢಿಕ್ಕಿ

12:30 AM Apr 24, 2019 | sudhir |

ಸಿದ್ದಾಪುರ: ಜನ್ಸಾಲೆಯಿಂದ ಬಡಾಬಾಳು ಕಡೆಗೆ ಸಾಗುತ್ತಿದ್ದ ರಿಕ್ಷಾ ಮಂಗಳವಾರ ಜನ್ಸಾಲೆ ಶಾಲೆಯ ಹತ್ತಿರ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ರಿûಾ ಚಾಲಕ ಜನ್ಸಾಲೆ ಚಂದ್ರಶೇಖರ ಅವರು ಮತದಾನ ಮಾಡಲು ಜನರನ್ನು ಕರೆತಂದು ಜನ್ಸಾಲೆ ಶಾಲೆಯ ಬಳಿ ಬಿಟ್ಟು ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ರಿûಾದಲ್ಲಿ ಪ್ರಯಾಣಿಕರು ಇಲ್ಲದಿರುವುದರಿಂದ ಚಾಲಕನಿಗೆ ಮಾತ್ರ ಗಾಯವಾಗಿದೆ. ವಿದ್ಯುತ್‌ ಕಂಬ ತುಂಡಾಗಿ ಬಿದ್ದಿದೆ. ಆ ಹೊತ್ತಿಗೆ ಸಂಚಾರ ಕಡಿಮೆ ಇದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next