ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಪಾವನಧಾಮದ ಮುಖ್ಯಸ್ಥರಾದ ಪ್ರತಿಮಾ ಸಹೋದರಿ ಮಾತನಾಡಿ, ಮನುಷ್ಯ ಸನ್ನಡತೆ ಹಾಗೂ ಸದಾಚಾರಿಯಾಗಿ ಬದುಕಲು ಮುಂದಾದಲ್ಲಿ ಸಮಾಜ ಪಾವನಮಯವಾಗುತ್ತದೆ. ಅಲ್ಲಿ ಶಾಂತಿ, ಸಹಬಾಳ್ವೆ, ಸತ್ಯ, ಸಮಾಧಾನ ತನ್ನಿಂದ ತಾನೆ ನೆಲೆಯೂರಿ ಮನುಷ್ಯ ನೆಮ್ಮದಿಯೆಡೆಗೆ ಸಾಗುತ್ತಾನೆ. ಇದರಿಂದ ದೇಶ ಪಾವನವಾಗುತ್ತದೆ ಎಂದರು. ಮಾನವನ ಅವಿವೇಕಿತನದಿಂದ ಅನಾಚಾರ ಹೆಚ್ಚುತ್ತಿದೆ. ಅಹಂಕಾರ ಆತನ ಅವನತಿಗೆ ಕಾರಣವಾಗುತ್ತಿದೆ. ಸಂಸ್ಕೃತಿ, ಸಂಸ್ಕಾರದಿಂದ ದೂರ ನಡೆದು ಹೋಗುತ್ತಿರುವ ನಮಗೆ ಸದಾ ನಿರ್ವಿಕಾರಿಯಾಗಿ ಬದುಕಲು ವಿಕಾರಿ ಗುಣಗಳಿಂದ ದೂರಾಗಬೇಕೆಂದು ಸಲಹೆ ನೀಡಿದರು. ನ್ಯಾಯವಾದಿ ಪ್ರಭಾಕರ ಕೋರವಾರ ಮಾತನಾಡಿ, ಕೆಲವೇ ವರ್ಷಗಳಲ್ಲಿ ಆರಂಭವಾಗಲಿರುವ ಸತ್ಯಯುಗದಲ್ಲಿ ಮತ್ತೆ ಶ್ರೀಕೃಷ್ಣ ಮೊದಲ ವ್ಯಕ್ತಿಯಾಗಿ ಈ ಭೂಮಿ ಮೇಲೆ ಜನ್ಮ ತಾಳುತ್ತಾನೆ. ಆಗ ಮತ್ತೆ ಸಮೃದ್ಧ ಜಗತ್ತು ಪ್ರಾಪ್ತವಾಗುತ್ತದೆ. ಆದ್ದರಿಂದ ಇಂದಿನಿಂದಲೇ ನಾವು ಸತ್ಯಯುಗದ ವಾತಾವರಣ ನಿರ್ಮಿಸಲು ಸಜ್ಯನಿಕರಾಗಿ ಬದುಕುವುದನ್ನು ರೂಢಿ ಮಾಡಿಕೊಳ್ಳಬೇಕಿದೆ ಎಂದರು. ಈ ಸಂದರ್ಭದಲ್ಲಿ ನೂಪುರ ನೃತ್ಯ ಅಕಾಡೆಮಿ ಮುಖ್ಯಸ್ಥೆ ಉಷಾ ಪ್ರಭಾಕರ ಹಾಗೂ ತಂಡದಿಂದ ಬಾಲಕೃಷ್ಣ ವೇಷದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಂಭುಲಿಂಗ ಕುದುರೆ, ವೀರಬಸಪ್ಪ, ಲಕ್ಷ್ಮೀಕಾಂತ, ಅಶೋಕ, ಮಾರುತಿ ಹಾಗೂ ಇತರರರಿಂದ ಜಾನಪದ ನೃತ್ಯ, ಶೀತಲ ಪಾಂಚಾಳರ ಸುಮಧುರ ಕಂಠದಿಂದ ಹೊರಬಂದ ಹಾಡುಗಳು ಜನಮನ ತಣಿಸಿದವು. ಪುಟಾಣಿಗಳ ನೃತ್ಯ ರೂಪಕಗಳು ಮನಸೂರೆಗೊಂಡವು. ಮಂಗಲಾ, ಶ್ವೇತಾ, ವಿಜಯಲಕ್ಷ್ಮೀ, ರೇಣುಕಾ, ಸುಮ್ಮತಿ, ಮಹಾನಂದಾ,
ಜಗದೀಶ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
Advertisement