Advertisement

ಜನ್ಮಕುಂಡಲಿಯಲ್ಲಿ ಕ್ರೌರ್ಯ ಇರಲು ಸಾಧ್ಯವೇ? ಇದ್ದರೆ ಏನಾಗುತ್ತದೆ?

05:59 AM Apr 23, 2016 | |

ನಿತ್ಯದ ನಮ್ಮ ಬದುಕಿನಲ್ಲಿ ನಾವು ಗಮನಿಸಬಹುದು. ಶಾಂತ ಸ್ವಭಾವ ಹಾಗೂ ಒರಟುತನ ತುಂಬಿದ ಎರಡೂ ವರ್ಗದ ಜನರನ್ನು ಪ್ರಧಾನವಾಗಿ ನಮ್ಮ ಮಾನವೀಯತೆ ತುಂಬುದ ಗುಣವಾಗಲಿ ಮೃಗೀಯವಾದ ಮನೋಧರ್ಮವಾಗಲಿ ನಮ್ಮ ಜನ್ಮಕುಂಡಲಿಯೊಳಗಿನ ಗ್ರಹಗಳನ್ನು ಅವಲಂಬಿಸಿಯೇ ಇರುತ್ತದೆ ಎಂಬುದು ಗಮನಾರ್ಹ. ಜೊತೆಗೆ ಈ ರೀತಿಯ ಸಾತ್ವಿಕತೆಯಾಗಲೂ ಕ್ರೌರ್ಯವೇ ಪ್ರಧಾನವಾದ ಗುಣಧರ್ಮವಾಗಲೀ, ನಮಗೆ ಸಂಪ್ರಾಪ್ತಗೊಳ್ಳುವುದು ಸೌಮ್ಯ ತಾರೆಗಳಾದ ಚಂದ್ರ, ಬುಧ, ಶುಕ್ರ ಅಥವಾ ಕೇತುಗಳಿಂದ ಇದ್ದೀತು. ಸೌಮ್ಯ ತಾರೆಗಳು ಸೌಮ್ಯಗುಣಗಳನ್ನೇ ನೀಡುತ್ತವೆಂಬುದಾಗಲೀ, ಕ್ರೂರ ಗ್ರಹಗಳು ಕ್ರೌರ್ಯವನ್ನೇ ಧಾರೆ ಎರೆಯುತ್ತವೆ ಎಂಬುದಾಗಲೀ ಒಂದು ನಿಯಮವೇನಲ್ಲ. 

Advertisement

ಜಗತ್ತನ್ನೇ ತಲ್ಲಣದಲ್ಲಿ ದೂಡಿದ ಹಿಟ್ಲರ್‌
ನಾವು ಸಾಮಾನ್ಯವಾಗಿ ಹಿಟ್ಲರ್‌ನನ್ನು ಕ್ರೂರಿಯಾಗಿ ಪರಿಗಣಿಸುತ್ತೇವೆ. ನಿಜ ಹೇಳಬೇಕೆಂದರೆ ಈತ ಪುಕ್ಕಲು ಸ್ವಭಾವದ ವ್ಯಕ್ತಿ. ಉತ್ತಮವಾದ ಗಜಕೇಸರಿ ಯೋಗವು ಧೈರ್ಯಸ್ಥಾನದಲ್ಲಿ ಕೂಡಿ ಬಂದಿದ್ದರೂ ಯೋಗದ ದೊಡ್ಡ ಸಿದ್ಧಿಗೆ ಕೇತು ದೋಷವೊಂದು ಅಂಟಿಕೊಂಡಿತು. ಮೂರನೆಯ ಮನೆಯಾದ ಧೈರ್ಯಸ್ಥಾನದಲ್ಲಿ ಸುಖಸ್ಥಾನ ಹಾಗೂ ಪೂರ್ವಪುಣ್ಯಸ್ಥಾನಾಧಿಪತಿಯಾದ ಶನೈಶ್ಚರ ಸ್ವಾಮಿ ಬೇರು ಬಿಟ್ಟಿರುವುದೂ ಕೂಡಾ ಭಾಗ್ಯದ ವಿಷಯದಲ್ಲಿ ಬಂದೇ ತೀರುವ  ಕೆಲವು ದುರ್ದೈವದ ವಿಚಾರಗಳನ್ನು ಇದು ಪ್ರತಿನಿಧಿಸುತ್ತದೆ. ಏಕೆಂದರೆ ಕರ್ಮಸ್ಥಾನದಲ್ಲಿ ಶನೈಶ್ಚರನಿರುವುದು ವ್ಯಕ್ತಿತ್ವದ ವಿಷಯದಲ್ಲಿನ ಏರುಪೇರುಗಳಿಗ ಕಾರಣನಾಗಿರುವುದನ್ನು ಅನಿವಾರ್ಯವಾಗಿಸುತ್ತದೆ.

ಹಿಟ್ಲರ್‌ ವಿಚಾರದಲ್ಲಿ ಶನೈಶ್ಚರನ ಈ ದುಷ್ಕೃತ್ಯಕ್ಕೆ ಇಂಬು ದೊರಕಿದ್ದು ಅವನ ಸಾತ್ವಿಕ ವ್ಯಕ್ತಿತ್ವಕ್ಕೆ ಕ್ರೂರತ್ವವನ್ನು ಬಿತ್ತುವ ಹಾಗೇ, ಕುಜ ಗ್ರಹವು ಶುಕ್ರನೊಟ್ಟಿಗೆ ಅದೂ ತನ್ನದೇ ಆದ ಸ್ವಂತ ಮನೆಯಲ್ಲಿನ  ಶಕ್ತಿಯ ಅಟ್ಟಹಾಸವನ್ನು ಪ್ರದರ್ಶಿಸಲು ಪೂರಕವಾಗುವ ಶಕ್ತಿಯೊಂದಿಗೆ ಸಾಮಿಪ್ಯ ದೊರಕಿಸಿಕೊಂಡದ್ದು ಸ್ತ್ರೀಯರ ಕುರಿತಾದ ಆಸಕ್ತಿ ಕೂಡಾ ವಿಸ್ತಾರವಾದ ವಿಷಯಾಸಕ್ತತನವನ್ನು ದೊರಕಿಸಿಕೊಟ್ಟಿತು. ಬುದ್ಧಿಯೋಗಕ್ಕೆ ಕಾರಣವಾದ ಬುಧಯೋಗ ಕೂಡಿ ಬಂದದ್ದು ಕೂಡಾ ಇದೇ ಶುಕ್ರ ಹಾಗೂ ಕುಜರು ಒಗ್ಗೂಡಿದ ಪ್ರಾರಬ್ಧದ ಮನೆಯಲ್ಲೇ. ಇವೆಲ್ಲವೂ ಒಗ್ಗೂಡಿ ಮಾರಕನಾದ ಸೂರ್ಯನಿಂದ ವ್ಯಯಸ್ಥಾನದ ಅಧಿಪತಿಯಾದ ಬುಧನಿಂದ ದುಬುìದ್ಧಿ ಸಂಚಯಿಸಿಕೊಂಡಿತ್ತು. ಬುಧರು ನೀಡಿದ ದುಬುìದ್ಧಿಗಳು ಹೇರಳವಾಗಿದ್ದರೂ ಮಂಗಳನಿಂದಾಗಿ ವಾಕ್‌ ಚಾತುರ್ಯದ್ದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜನಾಂಗೀಯ ವಿಚಾರವನ್ನು ತನ್ನ ದೇಶದ ಜನರ ಮೇಲೆ ತನ್ನ  ವಿಚಾರಗಳನ್ನು ಒತ್ತಾಯ ಪೂರ್ವಕವಾಗಿ ಹೇರಿದ್ದ. ನಾಝಿಗಳೇ ಪರಮ ಶ್ರೇಷ್ಠ ಜನಾಂಗವೆಂದು ಪ್ರತಿಪಾದಿಸಿದ ಯಹ್ಯೂದಿಗಳನ್ನು ದ್ವೇಷಿಸಿದ ಜನಾಂಗ ದ್ವೇಷದ ಪರಾಕಾಷ್ಟತೆಯಿಂದಾಗಿ ಲಕ್ಷಾಂತರ ಯಹೂದಿಗಳನ್ನು ನಿರ್ದಯವಾಗಿ ಸಾಯಿಸಿದ. ಎರಡನೇ ಮಹಾಯುದ್ಧವನ್ನು ಅನಿವಾರ್ಯವಾಗಿಸಿ ಇಡೀ ಜಗತ್ತು ಯುದ್ಧದ ದುಷ್ಪರಿಣಾಮ ಎದುರಿಸಿ ತತ್ತರಿಸುವಂತೆ ಮಾಡಿದ. ಕೊನೆಗೂ ಸೋಲು ಶನೈಶ್ಚರನ ಅಷ್ಟಮ ಶನಿಕಾಟದಲ್ಲಿ ಅನಿವಾರ್ಯವಾದಾಗ ಆತ್ಮಹತ್ಯೆಗೆ ಶರಣಾದ. 

ಸಾತ್ವಿಕತೆಯ ಸಾಕಾರವಾಗಿದ್ದ ರಾಜೀವ್‌ ಗಾಂಧಿ 
ರಾಜೀವ್‌ ಗಾಂಧಿ ಯಾವತ್ತೂ ಕ್ರೂರಿಯಾಗಿರಲಿಲ್ಲ. ಆಗಲಿಕ್ಕೂ ಸಾಧ್ಯ ವಿರಲಿಲ್ಲ. ಜನ್ಮಭಾವದಲ್ಲಿ ಬುಧ, ಗುರು, ಶುಕ್ರ, ಚಂದ್ರರೆಲ್ಲಾ ಒಗ್ಗೂಡಿದ್ದು ಬಹುದೊಡ್ಡ ರಾಜಯೋಗವನ್ನು ಒದಗಿಸಿಕೊಟ್ಟಿತ್ತು. ಲಾಭದಲ್ಲಿ ಕಳತ್ರಸ್ಥಾನದ ಅಧಿಪತಿ

ಶನೈಶ್ಚರ ಸ್ವಾಮಿ ಇದ್ದುದು ಉತ್ತಮವಾದ ಸಾತ್ವಿಕತೆಯನ್ನು ಇನ್ನೊಬ್ಬರ ಕಾಲೆಳೆಯುವ ಕ್ರಿಯೆಯೇ ಜಾಣತನದ ಮುತ್ಸದ್ದಿತನದ ರಾಜಕಾರಣ ಎಂದು ಆಗಿಹೋದ ರಾಜಕಾರಣಿಗಳ ವೈಪರೀತ್ಯಗಳು ಆತ್ಮನಾಶಕ ಧೋರಣೆಯನ್ನು ಪಡೆದಂತಾದ ಭಾರತದ ರಾಜಕೀಯದ ಸಂದರ್ಭದಲ್ಲಿ ರಾಜೀವರು ಉಪಯೋಗಕ್ಕೆಬರಲಿಲ್ಲ. ಚಂದ್ರನಿಗೆ ಕ್ಷೀಣತ್ವ ದೊರಕಿದ್ದರಿಂದ ರಾಜೀವ್‌ ತನಗೆ ತಾನೇ ದೊಡ್ಡವಿಮರ್ಶಕರಾದರು. ಈ ರೀತಿಯ ಆತ್ಮವಿಮರ್ಶೆ ಒಬ್ಬ ಸಾತ್ವಿಕನಿಗೆ ಅನಿವಾರ್ಯ ವಾದರೂ ಇದು ಜಾಸ್ತಿ ಆದಾಗ ದೂರ್ಥರು ಇದರ ಲಾಭ ಪಡೆಯುತ್ತಾರೆ. ರಾಹುವಿನ ಆತಂಕಕಾರಕ ಉಪಸ್ಥಿತಿ ವ್ಯಯಸ್ಥಾನದಲ್ಲಿದ್ದುದು ಮಾರಕವಾದ ಶನೈಶ್ಚರ ಮಾರಕವಾದ ಬಾಂಬ್‌ ಸ್ಫೋಟದ ಸಂದರ್ಭದಲ್ಲಿ ಅಪಘಾತದ ಸ್ಥಳವಾದ ಛಿದ್ರಸ್ಥಾನದಲ್ಲಿದ್ದುದು ಶನೈಶ್ಚರನಿಗೆ ರಾಹುವಿನ ಕುಮ್ಮಕ್ಕು ಕೂಡಾ ಸಿಕ್ಕಿದ್ದು ದುರಂತದ ಆ ಸ್ಫೋಟದಲ್ಲಿ ರಾಜೀವ್‌ ಪ್ರಾಣಕ್ಕೆ ಧಕ್ಕೆ ಬಂದೇ ಬಂತು.

Advertisement

ನಿಜಕ್ಕೂ ಉತ್ತಮ ಆಡಳಿತವನ್ನು ಒದಗಿಸುವ ಅದ್ಭುತ ಶಕ್ತಿ ಒದೊಮ್ಮೆ ರಾಜೀವ್‌ 1991 ರ ಆ ಅವಘಡದಲ್ಲಿ ಬದುಕಿ ಇದ್ದಿದ್ದರೆ ರಾಜೀವರಿಗೆ ಒದಗಿ ಬರುತ್ತಿತ್ತು. ಅವರು ಬೋಫೋರ್ಸ್‌ ಹಗರಣದಲ್ಲಿ ಕಳಂಕ ಹೊತ್ತುಕೊಳ್ಳಬೇಕಾಗಿ ಬಂದದ್ದು ರಾಜಕಾರಣದ ಅನುಭವದ ಅಭಾವದಿಂದಲೇ ಹೊರತು ಅವರ ವ್ಯಕ್ತಿತ್ವದ ದೋಷದಿಂದಲ್ಲ. ಈಗ ಬದುಕಿದಿದ್ದರೆ ಬುಧ ದಶಾ ಸಂದರ್ಭ ಅವನ ಜೊತೆಗಿರುವ ಆತ್ಮಕಾರಕ ಪ್ರಬಲ ಸೂರ್ಯನಿಂದಾಗಿ ಹೊಸದೇ ಒಂದು ಶಕೆಯತ್ತ ಭಾರತವನ್ನು ಒಯ್ಯಲು ಸಾಧ್ಯವಾಗುತ್ತಿತ್ತು. ಯೋಗಕಾರಕ ಮಂಗಳ ವಾಕ್‌ ಸ್ಥಾನದಲ್ಲಿದ್ದು ಅವರ ವರ್ಚಸ್ಸಿಗೆ ದೊಡ್ಡ ತೂಕ ತರಲು ಸಾಧ್ಯವಾಗುತ್ತಿತ್ತು. ಆದರೆ ಸೂರ್ಯನೆ ಕೊರಳಿಗೆ ರಾಜೀವ್‌ ಹುಟ್ಟಿದ ದಿನವೇ ಉರುಳೊಂದನ್ನು ಹೊಸೆದಿದ್ದ ಶನೈಶ್ಚರ ಛಿದ್ರಸ್ಥಾನಕ್ಕೆ ಬಂದಾಗಲೇ ಶುರುಗೊಂಡ ತನ್ನ ದಶಾದ ತನ್ನದೇ ಭುಕ್ತಿಯಲ್ಲಿ ಛಿದ್ರಸ್ಥಾನಾಧಿಪತಿಕಾರಿಯಾಗಿದ್ದ ತನ್ನ ಘಾತಕತನವನ್ನು ಪ್ರದರ್ಶಿಸಿ ಆಗಿತ್ತು. ಆತ್ಮಕಾರಕ ಸೂರ್ಯ ದುರ್ಬಲನಾಗಿ ಶನೈಶ್ಚರನ ಕ್ರೂರ ದೃಷ್ಟಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗಿರಲಿಲ್ಲ. ರಾಜೀವರ ಪತ್ನಿ ಸೋನಿಯಾಗೂ ಆಗ ಅಷ್ಟಮ ಶನಿಕಾಟ ಅಸಾಧ್ಯವಾಗಿತ್ತು. ಬಾಳಸಂಗಾತಿಗೆ ತೊಂದರೆ ಆಗಲೇ ಬಾಕಾಗಿದ್ದ ಸ್ಥಳಕ್ಕೆ ಶನೈಶ್ಚರ ಕಾಲಿರಿಸಿದ್ದ.

ಕ್ರೌರ್ಯ ಮತ್ತು ಸಾತ್ವಿಕತೆ
ರಾಜೀವರನ್ನು ಮುಗಿಸಲು ಸಂಚು ಹೂಡಿದ್ದ ಎಲ್‌ಟಿಟಿಇಯ ಪರಮೋತ್ಛ ನಾಯಕನಾದ . ಪ್ರಭಾಕರನ್‌ಗೆ ಆಗ ರಕ್ತದಾಹದ ಕಾಲ. ರಾಹುನೊಟ್ಟಿಗಿನ ಸೂರ್ಯ ಹಾಗೂ ಶನೈಶ್ಚರನ ಜೊತೆಯಿಂದಾಗಿ ಯಾರದೇ ರಕ್ತವನ್ನು ಹೀರುವ ಒತ್ತಡಕ್ಕೆ ಸುಲಭವಾದ ಜಯ ಸಿಗುವಂತೆ ಸೂರ್ಯನ ರಾಹುಕೇತುಗಳ ಜೋಡಣೆ ಇತ್ತು. ಭಾಗ್ಯದಲ್ಲಿದ್ದ ಜನ್ಮಭಾವದ ಅಧಿಪತಿ ಶುಕ್ರನ ದಶಾಕಾಲದಲ್ಲಿ ಪ್ರಭಾಕರನ್‌ ಮಿಂಚಿದ್ದ. ಆದರೆ ನಾಶವನ್ನು ಒದಗಿಸಲೇ ಬೇಕಾದ ಕೇಮದ್ರುಮ ಯೋಗವನ್ನು ಹೊಂದಿದ್ದ ಚಂದ್ರನ ದಶಾಕಾಲ ಬಂದಾಗ ಎಲ್ಲರನ್ನೂ ಕಂಗೆಡಿಸಿದ್ದ ಪ್ರಭಾಕರನ್‌ ಶ್ರೀಲಂಕಾ ಯೋಧರ ಗುಂಡಿಗೆ ಬಲಿಯಾಗಿದ್ದ. 

ಅನಂತಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next