Advertisement

ಚಿತ್ತಾಪುರ ಪೊಲೀಸರಿಂದ ಜನಜಾಗೃತಿ ಜಾಥಾ

03:40 PM Feb 01, 2021 | Team Udayavani |

ಚಿತ್ತಾಪುರ: ಇತ್ತೀಚೆಗೆ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಳವಾಗುತ್ತಿವೆ. ಈ ಅವಘಡಗಳಿಂದ ಜೀವಹಾನಿ ಸಂಭವಿಸುತ್ತಿವೆ. ಅವುಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಿಎಸ್‌ಐ ಮಂಜುನಾಥ ರೆಡ್ಡಿ ಹೇಳಿದರು. ಪಟ್ಟಣದಲ್ಲಿ ಸ್ಥಳೀಯ ಪೊಲೀಸ್‌ ಇಲಾಖೆ ವತಿ ಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ದಿನಾಚರಣೆ ಅಂಗವಾಗಿ ಪೊಲೀಸ್‌ ಠಾಣೆ ಸಿಬ್ಬಂದಿ ಕೈಗೊಂಡಿದ್ದ ಬೈಕ್‌ ಜನ ಜಾಗೃತಿ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು.

Advertisement

ಬೈಕ್‌ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ವಿ ಧಿಸುವ ದಂಡ ಮತ್ತು ಅದರ ಸಾಧಕ-ಬಾಧಕ ವಿವರಿಸಿದ ಅವರು, ವಾಹನದೊಂದಿಗೆ ಇರಬೇಕಾದ ಅಗತ್ಯ ಕಾಗದ ಪತ್ರಗಳು, ಹೆಲ್ಮೆಟ್‌ ಮತ್ತು ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ತಿಳಿವಳಿಕೆ ನೀಡಿದರು. ಈ ರೀತಿಯ ಹಲವು ಕಾರ್ಯಕ್ರಮಗಳನ್ನು ಫೆ.17ರ ವರೆಗೆ ಠಾಣೆ ವ್ಯಾಪ್ತಿಯ ವಿವಿಧೆಡೆ ಹಮ್ಮಿಕೊಂಡುಸಂಚಾರಿ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ  ಮೂಡಿಸಲಾಗುವುದು ಎಂದರು.

ಇದನ್ನೂ ಓದಿ:ಹಣ್ಣುಗಳಲ್ಲೇ ಶ್ರೇಷ್ಠವಾದದ್ದು ಮೊಸುಂಬಿ – ನಿಮಗಿದು ಗೊತ್ತೇ?

ಪಟ್ಟಣದ ಪೊಲೀಸ್‌ ಠಾಣೆಯಿಂದ ಕಪಡಾ ಬಜಾರ್‌, ಭುವನೇಶ್ವರಿ ವೃತ್ತ, ಅಂಬೇಡ್ಕರ್‌ ವೃತ್ತ, ಬಸ್‌ನಿಲ್ದಾಣ, ಬಸವೇಶ್ವರ ವೃತ್ತ, ಲಾಡಿjಂಗ್‌ ಕ್ರಾಸ್‌, ರೈಲ್ವೆ ಸ್ಟೇಷನ್‌, ನಾಗಾವಿ ವೃತ್ತದಲ್ಲಿ ಬೈಕ್‌ ಜಾಥಾ ಸಂಚರಿಸಿತು. ಇದೆ ವೇಳೆ ಸಾರ್ವಜನಿಕರಿಗೆ ಕರಪತ್ರ ವಿತರಿಸ ಲಾಯಿತು. ಜಾಥಾದಲ್ಲಿ ಎಎಸ್‌ಐ ಚಂದ್ರಾಮಪ್ಪ, ಸಿಬ್ಬಂದಿಗಳಾದ ಮಹೇಶರೆಡ್ಡಿ, ಮಲ್ಲೇಶಿ, ಅಯ್ಯಣ್ಣ, ಶಿವಕುಮಾರ, ತಿಮ್ಮಯ್ಯ, ರಮೇಶ, ಎಕ್ಬಾಲ್‌ ಪಾಶಾ, ಶಂಕರಗೌಡ, ಶಿವಯ್ಯ, ಮುಕು¤ಮ ಪಟೇಲ್‌ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next