ಹೈದರಾಬಾದ್: ಲೈಂಗಿಕ ಕಿರುಕುಳದ ಆರೋಪದ ಮೇಲೆ ಖ್ಯಾತ ನೃತ್ಯ ಸಂಯೋಜಕ (Choreographer) ಜಾನಿ ಮಾಸ್ಟರ್ (Jani Master) ಅವರನ್ನು ಗೋವಾದಲ್ಲಿ ಪೊಲೀಸರು ಗುರುವಾರ (ಸೆ.19ರಂದು) ಬಂಧಿಸಿದ್ದಾರೆ.
21 ವರ್ಷದ ಯುವತಿಯೊಬ್ಬಳು ನೃತ್ಯ ಸಂಯೋಜಕ ಜಾನಿ ಮಾಸ್ಟರ್ (ಶೇಕ್ ಜಾನಿ ಬಾಷಾ) ಮೇಲೆ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದಳು. ಈ ಸಂಬಂಧ ಸೈಬರಾಬಾದ್‌ನ ನರಸಿಂಗಿ ಪೊಲೀಸರು ಬುಧವಾರ (ಸೆ.18ರಂದು) ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: BBK11: ಚೈತ್ರಾ ಕುಂದಾಪುರ To ಕೆಜಿಎಫ್ ಬಾಬು.. ಬಿಗ್ ಬಾಸ್ ಸ್ಪರ್ಧಿಗಳ ಹೊಸ ಪಟ್ಟಿ ವೈರಲ್
ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಜಾನಿ ಮಾಸ್ಟರ್ ತಲೆ ಮರೆಸಿಕೊಂಡಿದ್ದರು. ಗೋವಾದಲ್ಲಿ ವಿಶೇಷ ಕಾರ್ಯಾಚರಣೆ ತಂಡದ ಪೊಲೀಸರು ಜಾನಿ ಅವರನ್ನು ಬಂಧಿಸಿದ್ದಾರೆ.
ಪತಿಯನ್ನು ಬಂಧಿಸಿದ ವಿಚಾರ ಸುದ್ದಿಯಾಗುತ್ತಿದ್ದಂತೆ ಜಾನಿ ಅವರ ಪತ್ನಿ ಆಯೇಷಾ ಪೊಲೀಸ್ ಠಾಣೆಗೆ ಬಂದು ರಾದ್ಧಾಂತ ಮಾಡಿದ್ದಾರೆ. ಹೈದ್ರಾಬಾದ್‌ನ ನರಸಂಗಿ ಠಾಣೆಗೆ ಬಂದ ಅವರು ನನ್ನ ಪತಿ ಜಾನಿ ಎಲ್ಲಿದ್ದಾರೆ. ಅವರನ್ನು ನೋಡಬೇಕೆಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಪೊಲೀಸರು ನಿಮ್ಮ ಪತಿಯನ್ನು ಗೋವಾದಲ್ಲಿ ಬಂಧಿಸಲಾಗಿದೆ. ಇಲ್ಲಿಗೆ ಕರೆತರಲು ಇನ್ನೂ ಸಮಯವಿದೆ ಎಂದು ಹೇಳಿ ವಾಪಾಸ್ ಕಳುಹಿಸಿದ್ದಾರೆ. ಈ ವೇಳೆ ನೆರೆದಿದ್ದ ಮಾಧ್ಯಮದವರ ಮೇಲೂ ಜಾನಿ ಪತ್ನಿ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಕಿಡಿಕಾಡಿದ್ದಾರೆ.
21 ವರ್ಷದ ಯುವತಿ ದೂರಿನಲ್ಲಿ ಜಾನಿ ಅವರ ಜತೆ ಅವರ ಪತ್ನಿಯೂ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಕೃತ್ಯ ನಡೆದಾಗ ಯುವತಿ ಅಪ್ರಾಪ್ತರಾಗಿದ್ದ ಕಾರಣ ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್ ಸ್ಟಾರ್
ದೂರಿನಲ್ಲಿ ಏನಿದೆ?:
ದೂರು ನೀಡಿದ ಯುವತಿ ಕೂಡ ನೃತ್ಯ ಸಂಯೋಜಕಿಯಾಗಿದ್ದು, ಕಳೆದ ಕೆಲ ತಿಂಗಳಿನಿಂದ ಈಕೆ ಜಾನಿ ಮಾಸ್ಟರ್ ಜೊತೆಗೆ ಕೆಲಸ ಮಾಡುತ್ತಿದ್ದಳು. ಜಾನಿ ಮಾಸ್ಟರ್ ಹೊರಾಂಗಣ ಚಿತ್ರೀಕರಣದ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.
ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಚಿತ್ರೀಕರಣದ ಸಮಯದಲ್ಲಿ ಜಾನಿ ಮಾಸ್ಟರ್ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರು ನಾರ್ಸಿಂಗಿಯಲ್ಲಿರುವ ತನ್ನ ನಿವಾಸದಲ್ಲಿ ಹಲವಾರು ಬಾರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರೆ ಹೇಳಿದ್ದಾಳೆ.