ದಿನದಿಂದ ದಿನಕ್ಕೆ ಕಿರುಚಿತ್ರಗಳನ್ನು ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ತರಹದ ಕಿರುಚಿತ್ರಗಳ ಮೂಲಕ ದೊಡ್ಡ ಕನಸು ಕಾಣುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ “ಜಂಗಮ ವಾಣಿ’. ಹೀಗೊಂದು ಕಿರುಚಿತ್ರ ನಿರ್ಮಾಣವಾಗಿದೆ. ಈ ಕಿರುಚಿತ್ರವನ್ನು ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕ ಮನು ಕಾಟ್ ಅವರದು.
ಯುವ ಪೀಳಿಗೆ ಮೊಬೈಲ್ ಗೆ ಹೆಚ್ಚು ಹೊಂದಿಕೊಂಡಿದ್ದಾರೆ. ಇದರಿಂದ ಅವರಿಗೆ ಅನುಕೂಲವೂ ಉಂಟು. ಅನಾನುಕೂಲವೂ ಉಂಟು. ಮೊಬೈಲ್‌ನ್ನು ಅವಶ್ಯಕತೆಗೂ ಹೆಚ್ಚು ಬಳಿಸಿದರೆ ಏನೆಲ್ಲಾ ಆಗಬಹುದು ಎಂಬುದನ್ನು 14 ನಿಮಿಷಗಳ ಜಂಗಮವಾಣಿ ಕಿರುಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಮನು ಕಾಟ್. ಮನು ಅವರು ಈಗ ತಮ್ಮದೆ ಆದ ಚಿರಾಗ್ ಇವೆಂಟ್ಸ್ ಪ್ರೊಡಕ್ಷನ್ಸ್ ಮೂಲಕ ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಕೂಡ ಇವರದೆ.
ಇದನ್ನೂ ಓದಿ:ಬಾಲಿವುಡ್ ನಟಿ ಅನನ್ಯ ಪಾಂಡೆ ನಿವಾಸದ ಮೇಲೆ ಎನ್ ಸಿಬಿ ದಾಳಿ, ಫೋನ್, ಲ್ಯಾಪ್ ಟಾಪ್ ವಶಕ್ಕೆ
“ನನಗೆ ಚಿತ್ರ ನಿರ್ದೇಶಕನಾಗುವ ಹಂಬಲವಿದೆ. ಅದರ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರ ನಿರ್ದೇಶಿಸಿದ್ದೇನೆ. ಈ ಕಿರುಚಿತ್ರ ಬರೀ ಯೂಟ್ಯೂಬ್‌ನಲ್ಲಷ್ಟೇ ಅಲ್ಲದೆ, ಆನೇಕಲ್‌ನ ಕೆಲವು ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ಮನು.
ಚಿತ್ರದಲ್ಲಿ ಪ್ರೇರಣಾ ನಟಿಸಿದ್ದಾರೆ. “ನಾನು ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೇನೆ. ನನ್ನ ಅಭಿನಯದ ಮೊದಲ ಕಿರುಚಿತ್ರವಿದು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು’ ಎನ್ನುವುದು ಪ್ರೇರಣಾ ಮಾತು.