Advertisement

ನೋಟ್‌ ಬ್ಯಾನ್‌ ಸುತ್ತ “ಜನ್‌ಧನ್‌”

09:47 AM Nov 16, 2019 | mahesh |

ಇದು ಕಾಮನ್‌ ಮ್ಯಾನ್‌ ಮತ್ತು ರಾಯಲ್‌ ಮ್ಯಾನ್‌ ಕುರಿತಾದ ಕಥೆ…

Advertisement

– ಹೀಗೆ ಹೇಳಿ ಹಾಗೊಂದು ಸಣ್ಣ ನಗೆ ಬೀರಿದರು ನಿರ್ದೇಶಕ ನಾಗಚಂದ್ರ. ಅವರು ಹೇಳಿದ್ದು, “ಜನ್‌ಧನ್‌’ ಚಿತ್ರದ ಬಗ್ಗೆ. ಹೌದು, “ಜನ್‌ಧನ್‌’ ಈಗ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಶೀರ್ಷಿಕೆ ಹೇಳುವಂತೆ, ಇದು ಅಪನಗಧೀಕರಣ ಕುರಿತಾದ ಕಥೆ ಒಳಗೊಂಡಿದೆ. ಆ ಕುರಿತು ಹೇಳಿಕೊಂಡ ನಾಗಚಂದ್ರ, “ಪ್ರಧಾನ ಮಂತ್ರಿಗಳು ನೋಟ್‌ ಬ್ಯಾನ್‌ ಘೋಷಣೆ ಮಾಡಿದ ಬಳಿಕ ಆದಂತಹ ಘಟನೆಗಳೇ ಚಿತ್ರದ ಜೀವಾಳ. ಅದೆಷ್ಟೋ ಜನರು ಕಪ್ಪುಹಣ ಕಳೆದುಕೊಂಡರು, ಆ ಮೂಲಕ ಮುಗ್ಧರನ್ನು ಹೇಗೆಲ್ಲಾ ಬಳಸಿಕೊಂಡರು ಎಂಬ ಸುತ್ತ ಸಿನಿಮಾ ಮೂಡಿಬಂದಿದೆ. ಇಲ್ಲೂ ಪ್ರೀತಿ, ಪ್ರೇಮ ವಿಷಯದ ಜೊತೆಗೆ ಒಂದಷ್ಟು ಮಾನವೀಯ ಅಂಶಗಳಿವೆ. ಸಂದರ್ಭಕ್ಕೆ ತಕ್ಕ ಫೈಟ್‌ಗಳೂ ಇವೆ. ಈಗ ಚಿತ್ರ ರೆಡಿಯಾಗಿದ್ದು, ನವೆಂಬರ್‌ ಅಂತ್ಯ ಇಲ್ಲವೇ ಡಿಸೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವುದಾಗಿ ಹೇಳಿಕೊಂಡರು ನಿರ್ದೇಶಕ ನಾಗಚಂದ್ರ.

ನಾಯಕ ಸುನೀಲ್‌ ಅವರಿಗೆ ಇದು ಮೊದಲ ಚಿತ್ರ. ಎಲ್ಲಾ ಯುವನಟರಂತೆ ಅವರೂ ಸಾಕಷ್ಟು ಸೈಕಲ್‌ ತುಳಿದು ಈಗ “ಜನ್‌ಧನ್‌’ ಚಿತ್ರಕ್ಕೆ ಹೀರೋ ಆಗಿದ್ದಾರೆ. “ಎಂಎಸ್ಸಿ ಓದಿರುವ ನಾನು, ಈ ರಂಗಕ್ಕೆ ಆಸೆಯಿಂದಲೇ ಬಂದೆ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡಿದ್ದೆ. ಆದರೆ, ಅಷ್ಟೇ ತಾಳ್ಮೆ ಇಟ್ಟುಕೊಂಡ ಫ‌ಲದಿಂದ “ಜನ್‌ಧನ್‌’ ಚಿತ್ರಕ್ಕೆ ಹೀರೋ ಆಗಿದ್ದೇನೆ. ಹಾಗಂತ, ನಾನಿಲ್ಲಿ ಹೀರೋ ಅಲ್ಲ, ಕಥೆ, ಚಿತ್ರಕಥೆಯೇ ಇಲ್ಲಿ ಹೀರೋ. ನಾನು ಹೊಸಬನಾಗಿದ್ದರೂ, ಕಥೆಯಲ್ಲಿ ಗಟ್ಟಿತನವಿದೆ. ನುರಿತ ತಂತ್ರಜ್ಞರ ತಂಡವಿದೆ. ನಮ್ಮಂತಹ ಹೊಸಬರನ್ನು ಬೆಳೆಸಿ’ ಎಂದರು ಸುನೀಲ್‌.

ನಾಯಕಿ ರಚನಾ ಅವರಿಗೆ ಈ ಚಿತ್ರ ವಿಶೇಷವಂತೆ. “ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ್ದು ಮರೆಯದ ಅನುಭವ ಎಂದ ಅವರು, ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ತಿಳಿದುಕೊಳ್ಳಲು ಸಾಧ್ಯವಾಯ್ತು. ಇದು ಎಲ್ಲಾ ವರ್ಗ ನೋಡುವಂತಹ ಚಿತ್ರ’ ಎಂದರು ರಚನಾ.

ಅಂದು “ಜನ್‌ಧನ್‌’ ಚಿತ್ರದ ಹಾಡುಗಳನ್ನು ಹೊರತರಲಾಯಿತು. ಲಹರಿ ಆಡಿಯೋ ಸಂಸ್ಥೆಯ ವೇಲು ಆಡಿಯೋ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದರು. “ಮೊದಲ ಸಲ ಮೂವರು ಸಂಗೀತ ನಿರ್ದೇಶಕರು ಸಂಗೀತ ನೀಡಿರುವ ಆಡಿಯೋ ಬಿಡುಗಡೆ ಮಾಡುತ್ತಿದ್ದೇವೆ. ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದಾರೆ. ಎಲ್ಲರಿಗೂ ಇದು ತಲುಪಬೇಕು’ ಎಂದರು ವೇಲು.

Advertisement

ಧರ್ಮ ಕೀರ್ತಿರಾಜ್‌ ಅವರು ಅಂದು ಚಿತ್ರತಂಡಕ್ಕೆ ಶುಭಕೋರಿದರು. “ನಿರ್ದೇಶಕರು ಒಳ್ಳೆಯ ಕಥೆ ಹೆಣೆದು ಚಿತ್ರ ಮಾಡಿದ್ದಾರೆ. ನಾಯಕನಿಗೆ ಮೊದಲ ಚಿತ್ರ ಗೆಲುವು ಕೊಡಲಿ’ ಎಂದರು ಧರ್ಮ.

ಚಿತ್ರದಲ್ಲಿ ಮೊದಲ ಸಲ “ಗೊರವನಹಳ್ಳಿ’ ಲಕ್ಷ್ಮೀ ಪ್ರಸಾದ್‌ ಹಾಡಿದ್ದಾರೆ. ಜಯಲಕ್ಷ್ಮೀ ಅವರಿಲ್ಲಿ ನಟಿಸಿದ್ದು, ಚಿತ್ರಕ್ಕೆ ಲಕ್ಷ್ಮಿ ಒಲಿಯಲಿ ಎಂದರು. ಸಂಗೀತ ನಿರ್ದೇಶಕರಾದ “ಟಾಪ್‌ಸ್ಟಾರ್‌’ ರೇಣು, ವಿಕ್ಕಿ, ಸಾಯಿ ಲಕ್ಷ್ಮಣ್‌, ಸೌಂದರ್‌ರಾಜ್‌, ಹಾಡು ಬರೆದ ಯಲ್ಲಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next