ಕಾಸರಗೋಡು: ತಡೆಹಿಡಿದಿರುವ ಕ್ಷೇಮ ಪಿಂಚಣಿ ಶೀಘ್ರ ವಿತರಣೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನತಾದಳ ಯು.ಡಿ.ಎಫ್. ವಿಭಾಗದ ನೂರಾರು ಕಾರ್ಯಕರ್ತರು ಸೆಕ್ರಟರಿಯೇಟ್ ಮುಂಭಾಗದಲ್ಲಿ ಧರಣಿ ನಡೆಸಿದರು. ತಡೆದಿಟ್ಟಿರುವ ಕ್ಷೇಮ ಪಿಂಚಣಿಯನ್ನು ಶೀಘ್ರ ವಿತರಿಸಬೇಕು. ಸ್ಥಳೀಯಾಡಳಿತ ಸಂಸ್ಥೆಗಳ ಆಘೋಷಿತ ಕ್ಷೇಮ ಪಿಂಚಣಿ ವಿತರಣೆ ನಿಷೇಧ ಹಿಂದೆಗೆಯಬೇಕು. ಬ್ಯಾಂಕ್‌ಗಳ ಮೂಲಕ ವಿತರಿಸಬೇಕಾಗಿರುವ ಕ್ಷೇಮ ಪಿಂಚಣಿಯನ್ನು ಅಂಚೆ ಕಚೇರಿಗಳ ಮೂಲಕ ವಿತರಿಸಬೇಕೆಂಬು ವುದು ಪ್ರಮುಖ ಬೇಡಿಕೆಗಳಾಗಿವೆ.
ಅಸಂಘಟಿತರ ಕಡೆಗಣಿಸಬೇಡಿ: ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ| ಜೋರ್ಜ್ ಜೋಸೆಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಅಸಂಘಟಿತ, ಅತ್ಯಂತ ದುರ್ಬಲರಾದ ಒಂದು ವಿಭಾಗವನ್ನು ಕಡೆಗಣಿಸಿ, ಸಚಿವರು ಹಾಗೂ ಶಾಸನ ಸಭಾ ಸದಸ್ಯರ ವೇತನವನ್ನು ಇಮ್ಮಡಿಯಾಗಿ ಹೆಚ್ಚಿಸಿರುವುದನ್ನು ಯಾವತ್ತೂ ನ್ಯಾಯೀಕರಿಸಲು ಸಾಧ್ಯವಿಲ್ಲ ಎಂದರು.
ಧರಣಿ ಉದ್ಘಾಟನೆ: ಜೆ.ಡಿ.ಯು. ರಾಜ್ಯಾಧ್ಯಕ್ಷ ನ್ಯಾಯವಾದಿ ಜೋನ್ ಧರಣಿ ಮುಷ್ಕರ ಉದ್ಘಾಟಿಸಿ, ಪಕ್ಷದ ಹೋರಾಟ ರಾಜ್ಯದ ಅತ್ಯಂತ ದುರ್ಬಲರಿಗಾಗಿ ಆಗಿದೆ. ಶೀಘ್ರವೇ ಬಾಕಿ ಮೊತ್ತ ಸಹಿತ ಎಲ್ಲ ಪಿಂಚಣಿಯನ್ನು ವಿತರಿಸಬೇಕು ಎಂದರು. ಪಕ್ಷದ ಉಪಾಧ್ಯಕ್ಷ ಮುಳವನ್ ರಾಧಾಕೃಷ್ಣನ್, ಸಿನಿಮೋಲ್, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶಹೀದ್ ಅಹ್ಮದ್, ಚೋಲಕ್ಕರ ಮುಹಮ್ಮದ್ ಮಾಸ್ಟರ್, ರಾಜ್ಯ ಸಮಿತಿ ಸದಸ್ಯ ಜಿ.ಬಿ. ಭಟ್, ಕಾಸರಗೋಡು ಜಿಲ್ಲಾ ಅಧ್ಯಕ್ಷ ಎಂ.ಎಚ್. ಜನಾರ್ಧನ್ ಶುಭಾಶಂಸನೆಗೈದರು. ಅಜೇಯನ್ ನೆಲ್ಲಿಯಲ್ ಸ್ವಾಗತಿಸಿದರು. ನ್ಯಾಯವಾದಿ ಮೋಹನ್‌ದಾಸ್ ವಂದಿಸಿದರು.
ನೇತಾರರಾದ ಗಿರೀಶ್ ಕುನ್ನತ್ ಕಾಸರಗೋಡು, ವಿ. ಗೋಪಾಲನ್ ಕೋಝಿಕ್ಕೋಡ್, ಎಂ.ಎಂ. ಕಬೀರ್, ಎಂ.ವಿ. ಲೋರನ್ಸ್, ಟಿ.ಎನ್. ಶಾಜಿ, ಆರ್.ವಿ.ಅನ್ವರ್, ತಂಬಿ ಚೆಲ್ಲಾತ್, ಸಿ.ಎನ್. ಪ್ರಸನ್ನ ಕುಮಾರ್, ಟೋಮಿ ಚೆರಿಯನ್, ಕೆ.ಟಿ. ಜೋಸಫ್, ಜೀಕಬ್ ಥೋಮಸ್, ನ್ಯಾಯವಾದಿ ಸಿರಿಯಕ್, ಮಂಗಲತ್ತ್ ಹರಿಕುಮಾರ್ ಧರಣಿ ನೇತೃತ್ವ ವಹಿಸಿದ್ದರು.