Advertisement
ತಾಲೂಕಿನ ಊರ್ಡಿಗೆರೆ ಹೋಬಳಿಯಲ್ಲಿ ಹಮ್ಮಿಕೊಂಡಿದ್ದ ಜನತಾದರ್ಶನದಲ್ಲಿ ಮಾತನಾಡಿದ ಅವರು, ಹೇಮಾವತಿ ನೀರಿನಿಂದ ವಂಚಿತವಾಗಿದ್ದ ಊರ್ಡಿಗೆರೆ ಹೋಬಳಿಯ ಮೈದಾಳ ಕೆರೆಗೆ 27 ಕೋಟಿವೆಚ್ಚದಲ್ಲಿ ಹೇಮಾವತಿ ನೀರನ್ನು ಈ ವರ್ಷವೇ ಹರಿಸಲಾಗುವುದು, ಇದರಿಂದ ಮೂರು ಸಾವಿರ ಎಕರೆಗೆನೀರಾವರಿ ದೊರಕಿದಂತೆ ಆಗುತ್ತದೆ ಎಂದರು.
Related Articles
Advertisement
ಮೂರು ಕೋಟಿ ನೀಡಲಿ: ಬೇಸಿಗೆ ಹೆಚ್ಚುತ್ತಿರುವಹಿನ್ನೆಲೆಯಲ್ಲಿ ಕುಡಿಯವ ನೀರಿನ ಬವಣೆ ನೀಗಿಸಲು ಸರ್ಕಾರ ಮೂರು ಕೋಟಿ ಅನುದಾನವನ್ನುಮೀಸಲಿಡಬೇಕು, ಕೊಳವೆಬಾವಿ ಸಮಸ್ಯೆ ಹಾಗೂಅಂತರ್ಜಲ ಇಲ್ಲದ ಗ್ರಾಮಗಳಲ್ಲಿ ನೀರು ಪೂರೈಸಲು ಸಹಕಾರಿಯಾಗಲಿದ್ದು, ಅನುದಾನವನ್ನು ಟಾಸ್ಕ್ಫೋರ್ಸ್ ಗೆ ಮೀಸಲಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುವುದಾಗಿ ಹೇಳಿದರು.
ಅನುದಾನ ಮೀಸಲಿಡಿ: ಗ್ರಾಮಾಂತರ ಕ್ಷೇತ್ರಯಲ್ಲಾಪುರ, ಸ್ವಾಂದೇನಹಳ್ಳಿ ಗ್ರಾಮಗಳಲ್ಲಿ ನೀರಿನಸಮಸ್ಯೆ ಉಂಟಾಗಿರುವ ಬಗ್ಗೆ ಮಾಹಿತಿ ಇದ್ದು,ಯಲ್ಲಾಪುರದಲ್ಲಿ ಅಂತರ್ಜಲ ಇಲ್ಲ, ಈಗಾಗಲೇ ಬೇಸಿಗೆ ಆರಂಭ ಗೊಳ್ಳುತ್ತಿದ್ದು ಕುಡಿಯುವ ನೀರಿನಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅನುದಾನ ಮೀಸಲಿಡುವುದು ಅಗತ್ಯವಾಗಿದೆ ಎಂದು ಹೇಳಿದರು
ಜನತಾ ದರ್ಶನದಲ್ಲಿ 600ಕ್ಕೂ ಹೆಚ್ಚು ಅರ್ಜಿ ಇತ್ಯರ್ಥ : ತಾಲೂಕು ಕಚೇರಿಯಲ್ಲಿ ನಡೆಸಿದ ಜನತಾದರ್ಶನದಲ್ಲಿ 1400ಕ್ಕೂ ಹೆಚ್ಚು ಅರ್ಜಿಗಳುಸಲ್ಲಿಕೆಯಾಗಿದ್ದು, ಅದರಲ್ಲಿ 600ಕ್ಕೂ ಹೆಚ್ಚು ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ, ಉಳಿದ ಅರ್ಜಿಗಳನ್ನು 15 ದಿನದಲ್ಲಿ ಇತ್ಯರ್ಥಪಡಿಸಲಾಗುವುದು, ಹೆಬ್ಬೂರು ಹೋಬಳಿಯಲ್ಲಿಸಲ್ಲಿಕೆಯಾದ 1500 ಅರ್ಜಿಗಳಲ್ಲಿ 800 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ,
ಊರ್ಡಿಗೆರೆ ಹೋಬಳಿ ಜನತಾದರ್ಶನದಲ್ಲಿ 2000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು,ಪಿಂಚಣಿಗೆ ಅರ್ಜಿ ಸಲ್ಲಿಸಿದವರಿಗೆ ಸ್ಥಳದಲ್ಲಿಯೇಆದೇಶ ಪ್ರತಿ ನೀಡಲಾಗುತ್ತಿದೆ ಶಾಸಕ ಗೌರಿಶಂಕರ್‌ಹೇಳಿದರು. ಜನತಾ ದರ್ಶನದಲ್ಲಿ ಸಲ್ಲಿಕೆಯಾದಅರ್ಜಿಗಳು ಕಾನೂನಾತ್ಮಕವಾಗಿದ್ದ 45 ದಿನದೊಳಗೆಬಗೆಹರಿಸಲು ಕ್ರಮವಹಿಸಲಾಗುವುದು, ತಾಲೂಕು ಅಧಿಕಾರಿಗಳ ಸಹಕಾರದಿಂದ ಖಾತೆ ಬದಲಾವಣೆ,ಪಹಣಿ ತಿದ್ದುಪಡಿಯಂತಹ ರೈತರ ಸಮಸ್ಯೆಗಳನ್ನು ಅತಿಶೀಘ್ರವಾಗಿ ಬಗೆಹರಿಸಲು ಜನತಾದರ್ಶನಸಹಕಾರಿಯಾಗಿದ್ದು, ಡಿಸೆಂಬರ್ ಅಂತ್ಯದೊಳಗೆಸಮಸ್ಯೆಗಳಿಂದ ತಾಲೂಕು ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನತಾದರ್ಶನದಲ್ಲಿತಹಶೀಲ್ದಾರ್ ಮೋಹನ್‌ಕುಮಾರ್, ಕಂದಾಯಅಧಿಕಾರಿ ಮಹೇಶ್, ಬಿಇಒ ಹನುಮಾನಾಯ್ಕ,ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಪ್ಪ, ಯುವ ಜೆಡಿಎಸ್ ಅಧ್ಯಕ್ಷ ವಿಷ್ಣುವರ್ಧನ, ಯುವಜೆಡಿಎಸ್ ಕಾರ್ಯಾಧ್ಯಕ್ಷ ಸುವರ್ಣಗಿರಿ ಕುಮಾರ್,ಬೆಳಗುಂಬ ವೆಂಕಟೇಶ್,ಹರಳೂರು ಸುರೇಶ್,ರವಿ, ನಂದೀಶ್ ಇದ್ದರು.