* ಕಾಲ ಕಾಲಕ್ಕೆ ಹೆಲ್ಮೆಟ್ ಅನ್ನು ಸ್ವಚ್ಛಗೊಳಿಸುತ್ತಿರಬೇಕು. ಒಳಗಿನ ಕುಶನ್ ಪ್ಯಾಡ್‌ಗಳನ್ನು ತೆಗೆಯುವ ಹಾಗಿದ್ದರೆ, ಅದನ್ನು ತೆಗೆದೇ ನೀರಿನಲ್ಲಿ ತೊಳೆಯಿರಿ. ಹೀಗೆ ಪ್ರತ್ಯೇಕವಾಗಿ ತೊಳೆದ ನಂತರ ಅದನ್ನು ಬಿಸಿಲಲ್ಲಿ ಒಣಗಿಸಿ.
* ಹೆಲ್ಮೆಟ್ ಅನ್ನು ನಿಮ್ಮೊಡನೆಯೇ ಇರಿಸಿಕೊಳ್ಳಬೇಕು. ಎಲ್ಲೆಂದರಲ್ಲಿ ಬಿಟ್ಟು ತೆರಳುವುದರಿಂದ ಹೆಲ್ಮೆಟ್ ಕಳವು ಸೇರಿದಂತೆ ಹಾನಿಯುಂಟಾಗ ಬಹುದು. ಹೆಲ್ಮೆಟ್ ಅನ್ನು ದ್ವಿಚಕ್ರವಾಹನದ ಬಳಿಯೇ ಬಿಟ್ಟು ಹೋಗುವ ಹಾಗಿದ್ದರೆ ಲಾಕ್ ಮಾಡುವುದನ್ನು ಮರೆಯದಿರಿ.
* ಹೆಲ್ಮೆಟ್ ನ ಮೇಲ್ಮೆ„ಯಲ್ಲಿ ನೀರು ಬಹಳ ಕಾಲ ಉಳಿಯದಂತೆ ಎಚ್ಚರ ವಹಿಸಿ. ಹೆಲ್ಮೆಟ್ ನೀರಿನಲ್ಲಿ ತೊಯ್ದರೂ ಒರೆಸಿ ಒಣಗಿಸಿ. ಇದರಿಂದ ರಸ್ಟ್ ಹಿಡಿಯುವುದನ್ನು ತಡೆಗಟ್ಟಬಹುದು. ಬೈಕ್ ನಲ್ಲಿ ಒಣಗಿದ ಬಟ್ಟೆಯನ್ನು ಇಟ್ಟುಕೊಳ್ಳುವುದರಿಂದ, ಸವಾರ ಎಲ್ಲಿದ್ದರೂ ಹೆಲ್ಮೆಟ್ ಅನ್ನು ಒರೆಸಿ ನೀರನ್ನು ಹೋಗಲಾಡಿಸಬಹುದು.
* ಹೆಲ್ಮೆಟ್‌ಗೆ ಮುಂಭಾಗದಲ್ಲಿ ಘಾಸಿಯಾಗದಂತೆ ಎಚ್ಚರ ವಹಿಸಿ. ವೈಸರ್‌ಗೆ ಧಕ್ಕೆಯಾಗುವುದರಿಂದ ಗೀರುಗಳು ಉಂಟಾಗುತ್ತವೆ. ಅವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ವೈಸರ್ ಮೇಲೆ ಗೀರುಗಳು ಬೀಳುವುದರಿಂದ, ವಾಹನ ಚಲಾಯಿ ಸುವಾಗ ವೈಸರ್ ಮೂಲಕ ವೀಕ್ಷಿಸಲು ಕಷ್ಟವಾಗುತ್ತದೆ. ಆಗ ವೈಸರ್ ಅನ್ನು ಬದಲಾಯಿಸಬೇಕಾಗುತ್ತದೆ.
* ಹೆಲ್ಮೆಟ್ ಅನ್ನು ನೆಲದ ಮೇಲೆ ಬೀಳಿಸಬಾರದು. ಏಕೆಂದರೆ ಇದರಿಂದ ಹೆಲ್ಮೆಟ್‌ನ ಕಾರ್ಯಕ್ಷಮತೆ ಕುಗ್ಗುತ್ತದೆ. ರಸ್ತೆ ಮೇಲೆ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅದು ಪೂರ್ತಿ ರಕ್ಷಣೆ ನೀಡಲು ಸಾಧ್ಯವಾಗದೇ ಹೋಗಬಹುದು.
* ಹೆಲ್ಮೆಟ್ ಆರಿಸುವಾಗ ತಲೆಗಿಂತ ಚಿಕ್ಕದಾದುದನ್ನು ಆರಿಸಬಾರದು. ಚಿಕ್ಕ ಹೆಲ್ಮೆಟ್ ಒಳಗೆ ಕಷ್ಟಪಟ್ಟು ತಲೆಯನ್ನು ತೂರಿಸುವುದರಿಂದ ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ಹೀಗಾಗಿ ತುಂಬಾ ಬಿಗಿಯೂ ಅಲ್ಲದ, ಜಾರಿ ಬಿದ್ದುಹೋಗುವಂತೆಯೂ ಇರದ ಹೆಲ್ಮೆಟ್ ಅನ್ನು ಖರೀದಿಸಬೇಕು.
* ಹೆಲ್ಮೆಟ್‌ನ ಒಳಭಾಗವನ್ನು ತೊಳೆಯುವಾಗ ಶ್ಯಾಂಪೂ ಬಳಸಬಹುದು. ಇದರಿಂದ ದೀರ್ಘಕಾಲದ ಕೊಳೆ ಬಿಟ್ಟು ಹೋಗುವುದಲ್ಲದೆ ಹೆಲ್ಮೆಟ್ ಸುಗಂಧವನ್ನೂ ಬೀರುವುದು.