Advertisement
4 ಗಂಟೆ ಸುಮಾರಿಗೆ ಆಗಮಿಸಿದ ರಾಹುಲ್ ಗಾಂಧಿ ಜನರತ್ತ ಕೈ ಬೀಸಿ ನೇರವಾಗಿ ವೇದಿಕೆಯತ್ತ ತೆರಳಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಶಾಸಕ ಮೊಯಿದಿನ್ ಬಾವಾ ಅವರು ರಾಹುಲ್ ಅವರಿಗೆ ಪರಿಚಯ ಮಾಡಿಕೊಟ್ಟರು. ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ರಾಹುಲ್ ಅವರನ್ನು ಹತ್ತಿರಲ್ಲಿ ಕಾಣುವ ಭಾಗ್ಯ ದೊರೆಯಲಿಲ್ಲ.
ರಾಹುಲ್ ಅವರು ಸುರತ್ಕಲ್‌ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬುದೇ ಸ್ಥಳೀಯ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಲು ಕಾರಣವಾಯಿತು. ಮಂಗಳವಾರ ಮಧ್ಯಾಹ್ನವೇ ಸುರತ್ಕಲ್ ಪೇಟೆಯಲ್ಲಿ ಕಾರ್ಯಕರ್ತರು ಜಮಾಯಿಸಿ ರಾಹುಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಮೊದಿನ್ ಬಾವಾ ಪರ ಘೋಷಣೆ ಕೂಗುತ್ತಿದ್ದರು. ಸುರತ್ಕಲ್ ನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮುಖ್ಯಮಂತ್ರಿ ಹಾಗೂ ರಾಹುಲ್ ಶ್ಲಾಘಿಸುತ್ತಿದ್ದಂತೆ ಕಾರ್ಯಕರ್ತರು ಮತ್ತಷ್ಟು ಘೋಷಣೆ ಕೂಗಿದರು. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಮುಖಂಡರು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಉಪ ಘಟಕದ ಪದಾ ಧಿಕಾರಿಗಳು ಭಾಗವಹಿಸಿದ್ದರಲ್ಲದೆ ನಾಲ್ಕು ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಿದ್ದರು.
Related Articles
Advertisement
ಮೇಲ್ಸೇತುವೆಯಲ್ಲಿ ಸಂಚಾರ ರಾಜ್ಯದ ಎಐಡಿಜಿಪಿ ಕಮಲ್ ಪಂತ್ ಅವರು ಭದ್ರತೆಯ ನೇತೃತ್ವ ವಹಿಸಿದ್ದರು. ಸುರತ್ಕಲ್ ಕಾರ್ಯಕ್ರಮದ ಸಂದರ್ಭ ಕೆಳಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿ ಸಲಾಗಿತ್ತು. ಎಲ್ಲ ವಾಹನಗಳು ಹೆದ್ದಾರಿಯ ಮೇಲ್ಸೇತುವೆಯಲ್ಲಿ ಹೋಗುವಂತೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಟ್ರಾಫಿಕ್ ಜಾಂ ರಾಹುಲ್ ಸುರತ್ಕಲ್ ಬಿಟ್ಟು ತೆರಳುವವರೆಗೂ ಇತ್ತು. ಸುರತ್ಕಲ್ ಕೃಷ್ಣಾಪುರ ಕಡೆ ತೆರಳುವ ವಾಹನಗಳನ್ನು ಒಳರಸ್ತೆಯಾಗಿ ಬಿಡಲಾಯಿತು.