Advertisement
ರೆಡ್ಡಿ ತಮ್ಮ ತವರು ಜಿಲ್ಲೆ ಬಳ್ಳಾರಿಗೆ ಹೋಗಲು ಸುಪ್ರಿಂಕೋರ್ಟ್ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ, ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ಪ್ರಭಾವ ಬೀರಲು ಬೆಂಗಳೂರಿನ “ಪಾರಿಜಾತ’ ಅಪಾಟ್ ìಮೆಂಟ್‌ನಿಂದ ನಿವಾಸವನ್ನು ರಾಂಪುರಕ್ಕೆ ಸ್ಥಳಾಂತರಿಸಲು ಸದ್ದಿಲ್ಲದೆ ಸಿದಟಛಿತೆ ನಡೆಸಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ಬಿರುಗಾಳಿಯಂತೆ ರಾಜ್ಯ ರಾಜಕಾರಣ ಪ್ರವೇಶಿಸಿದ್ದ ರೆಡ್ಡಿ ಹಾಗೂ ಇವರ ಕುಟುಂಬ ಬಿಸಿಲುನಾಡಿನಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿತ್ತು. ರೆಡ್ಡಿ ತಮ್ಮರಾಜಕೀಯ ತಂತ್ರಗಾರಿಕೆ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಇಡೀ ಜಿಲ್ಲೆಯಲ್ಲಿ ಇಂದಿಗೂ ಜನಾರ್ದನ ರೆಡ್ಡಿಯವರ ಹಿಡಿತ ಬಿಗಿಯಾಗಿಯೇ ಇದೆ. ಆದರೆ, ಜಿಲ್ಲೆ ಪ್ರವೇಶಿಸಲಾರದ ಅನಿವಾರ್ಯತೆಯಿಂದ
ಈಗ ತಮ್ಮ ನಿವಾಸವನ್ನೇ ಬದಲಿಸಿಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಂದು ದಿನ ಬಳ್ಳಾರಿಗೆ ತೆರಳಬೇಕೆಂದರೂ ನ್ಯಾಯಾಲಯದ ಅನುಮತಿ ಕಡ್ಡಾಯವಾಗಿದೆ. ಬಿಜೆಪಿಗೆ ಮತ್ತೆ ಬಲ ತುಂಬಲು ಹಾಗೂ ತೆರೆಮರೆಯಲ್ಲಿ ರಾಜಕೀಯ ನಡೆಸಲು ರೆಡ್ಡಿ ಅವರು ತಮ್ಮ ನಿವಾಸವನ್ನು ಬದಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.