Advertisement

ಜನಪ್ರಿಯ ಯಕ್ಷಗಾನ ಕಲಾ ಮಂಡಲ:ಯಕ್ಷಗಾನ ಪ್ರದರ್ಶನ

10:47 AM Oct 27, 2017 | |

ಮುಂಬಯಿ: ಜನಪ್ರಿಯ ಯಕ್ಷಗಾನ ಕಲಾ ಮಂಡಲ ಮುಂಬಯಿ ಕಲಾವಿದರಿಂದ ಯಕ್ಷಗಾನ ಪ್ರದರ್ಶವು ಅ. 22ರಂದು ನಡೆಯಿತು. ದಹಿಸರ್‌ ಪೂರ್ವದ ಸುಧೀಂದ್ರ ನಗರ, ಶ್ರೀ ಕಾಶೀ ಮಠದ ಶ್ರೀ ವಿಟuಲ ರಕುಮಾಯಿ ಮಂದಿರದ 2ನೇ ಮಹಡಿಯಲ್ಲಿ ಮಹಿಷಾಸುರ ವಧೆ ಎಂಬ ಯಕ್ಷಗಾನ ಬಯಲಾಟವು ಕೊಂಕಣಿ ಭಾಷೆಯಲ್ಲಿ ಪ್ರದರ್ಶನಗೊಂಡಿತು.

Advertisement

ಇದೇ ಸಂದರ್ಭದಲ್ಲಿ ಜರಗಿದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಕುಂದಾಪುರ ಶ್ರೀನಿವಾಸ ಪ್ರಭು, ದಹಿಸರ್‌ ಶ್ರೀ ಕಾಶೀ ಮಠದ ಅಧ್ಯಕ್ಷ ಮೋಹನ್‌ದಾಸ್‌ ಮಲ್ಯ, ಜನಪ್ರಿಯ ಯಕ್ಷಗಾನ ಕಲಾ ಮಂಡಲ ಮುಂಬಯಿ ಇದರ ಅಧ್ಯಕ್ಷ ಮೇಲ್‌ಗ‌ಂಗೊಳ್ಳಿ ರವೀಂದ್ರ ಪೈ ಅವರು ಉಪಸ್ಥಿತರಿದ್ದರು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು, ಸ್ಥಳೀಯ ಸಮಾಜ ಸೇವಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಯಕ್ಷಗಾನ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next