Advertisement

ವಿಜ್ಞಾನದ ಜತೆಗೆ ಆಧ್ಯಾತ್ಮ, ಜಾನಪದವೂ ಸಾಗಲಿ: ಶ್ರೀ

12:28 PM Mar 15, 2021 | Team Udayavani |

ರಾಮನಗರ: ವಿಜ್ಞಾನದಿಂದ ಮಾತ್ರ ಜೀವನ ಸಾಧ್ಯವಿಲ್ಲ. ಆಧ್ಯಾತ್ಮ ಮತ್ತು ಜಾನಪದ ಉಳಿದರಷ್ಟೇ ಜೀವನ ಸಾರ್ಥಕ ಎಂದು ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಪರಿಷತ್‌ನ ಮಹಾಪೋಷಕರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

Advertisement

ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್‌, ರಾಜ್ಯ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಪ್ರವಾಸಿ ಜಾನಪದ ಲೋಕೋತ್ಸವದಲ್ಲಿ ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಎಂಬ ನಾಣ್ಣುಡಿ ಇದೆ. ಗಾದೆಗಳಲ್ಲಿ ಜೀವನದ ಸಾರವಿದೆ.ಗಾದೆಗಳು ಜಾನಪದ ಮೂಲದಿಂದ ಬಂದಿವೆ ಎಂದು ಜಾನಪದದ ಸಂಸ್ಕೃತಿ, ಕಲೆ, ಸಾಹಿತ್ಯ, ಆಚಾರ, ವಿಚಾರ ಗಳ ಬಗ್ಗೆ ಹೇಳಿದರು.

ವಿಜ್ಞಾನದ ಹೆಸರಿನಲ್ಲಿ ಆಧ್ಯಾತ್ಮ ಕಡೆಗಣಿಸುವುದುಸರಿಯಲ್ಲ. ವಾಸ್ತವದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕತೆ ವಿಭಿನ್ನವಾಗಿದೆ. ವಿಜ್ಞಾನದ ಹೆಸರಿನಲ್ಲಿ ವೈಜ್ಞಾನಿಕತೆಯನ್ನುಪ್ರತಿಪಾದಿಸಲಾಗುತ್ತಿದೆ. ವೈಜಾnನಿಕತೆ ತಪ್ಪಲ್ಲ. ಆದರೆ ಬೆಳಕನ್ನೇ ಹೀರಿ, ಕತ್ತಲೆ ಕೊಡುವುದು ವೈಜ್ಞಾನಿಕತೆಯಾಗ ಬಾರದು. ಆಧ್ಯಾತ್ಮದಿಂದ ನೆಮ್ಮದಿ ಹಾಗೂ ಆನಂದ ಪಡೆ ಯಬಹುದು. ವಿಜ್ಞಾನದ ಜತೆಗೆ ಜನಪದ ಕರೆದೊಯ್ಯಬೇಕಾಗಿದೆ. ಕಲೆ ಉಳಿದರಷ್ಟೇ ಮನುಷ್ಯ ಉಳಿಯಲು ಸಾಧ್ಯ ಎಂದರು.

ವಿಜ್ಞಾನದ ಆವಿಷ್ಕಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ಮುಂದೊಂದು ದಿನ ಇಡೀ ಮಾನವ ಕುಲವೇ ನಶಿಸಿ ಹೋದರೆ ಎಂಬ ಉದ್ದೇಶದಲ್ಲಿ ವಿಜ್ಞಾನಿಗಳುಅಮೇ ಜಾನ್‌ ಅರಣ್ಯದಲ್ಲಿ ಮಾನವನ ಮೂಲ ಬೆಳೆಯಲು ಆಸಕ್ತಿ ತೋರಿಸಿದ್ದಾರೆ ಎಂದರು. ರಾಜ್ಯದ ವಿವಿಧ ಜಿಲ್ಲೆಗಳ 39 ವಿವಿಧ ಜಾನಪದ ಪ್ರಕಾರಗಳ ಕಲಾವಿದರಿಗೆ ಶ್ರೀಗಳು ಪ್ರಶಸ್ತಿ ನೀಡಿ ಗೌರವಿಸಿದರು.

Advertisement

ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ಟಿ.ತಿಮ್ಮೇ ಗೌಡ, ಜನಪದ ಪರಿಷತ್‌ನ ಟ್ರಸ್ಟಿ ಆದಿತ್ಯ ನಂಜರಾಜ್‌, ಆದಿಚುಂಚನಗಿರಿ ರಾಮನಗರ ಶಾಖಾ ಮಠದಮುಖ್ಯಸ್ಥ ಶ್ರೀಅನ್ನದಾನೇಶ್ವರ ಸ್ವಾಮಿ, ಸಾಹಿತಿ ರಾಮ ಚಂದ್ರೇಗೌಡ ಮತ್ತಿತರರಿದ್ದರು.

ಪ್ರವಾಸಿ ಲೋಕೋತ್ಸವದ ಅಂತಿಮ ದಿನವಾದ ಭಾನುವಾರ ಜಾನಪದ ಲೋಕದಲ್ಲಿ ನಡೆದ ಜನಪದಗೀತೋತ್ಸವದಲ್ಲಿ ಹಳೆ ಬೇರು ಹೊಸ ಚಿಗುರು ಗೋಷ್ಠಿ ನಡೆಯಿತು. ಮೈಸೂರು ನಗಾರಿ, ಕಂಸಾಳೆ, ನೃತ್ಯ, ಹಲಿಗೆ ಮಜಲು ಯರವನ ದುಡಿ ಪೂಜಾ ಕುಣಿತಸೇರಿದಂತೆ ಜನಪದ ಕಾರ್ಯಕ್ರಮಗಳು ನೋಡುಗರ ಮೆಚ್ಚುಗೆಗೆ ಪಾತ್ರವಾದವು.

Advertisement

Udayavani is now on Telegram. Click here to join our channel and stay updated with the latest news.

Next