Advertisement
ಅಪಸ್ವರ: ಮಾಹಿತಿ ಮತ್ತು ತಂತ್ರಾಜ್ಞಾನದ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಹ ಆನ್‌ಲೈನ್ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ಯೋಜನೆಗಳನ್ನು ಅರ್ಜಿ ಸಲ್ಲಿಸುವ ಜೊತೆಗೆ ದೂರು ದುಮ್ಮಾನಗಳು ಸಹ ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಸ್ವೀಕರಿಸಿ ಪರಿಹರಿಸುವ ಸಲುವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಜನಹಿತ ಆ್ಯಪ್ ಯೋಜನೆಯಡಿ ದಾಖಲಿಸುವ ದೂರುಗಳಿಗೆ ಪೂರಕವಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬ ಅಪಸ್ವರಕೇಳಿ ಬರುತ್ತಿದೆ.
Related Articles
Advertisement
ಇದೇ ಕಾರಣಕ್ಕಾಗಿ ಇಂದಿನ ಆಧುನಿಕ ಯುಗದಲ್ಲಿಹೆಚ್ಚಾಗಿ ಬಳಕೆಯಲ್ಲಿರುವ ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ಯಾರು ದೂರು ಸಲ್ಲಿಸುವ ಗೋಜಿಗೆ ಹೋಗಿಲ್ಲ.ಕುಂದುಕೊರತೆ ಆಲಿಸಲು ಇರುವ ವ್ಯವಸ್ಥೆ ಉತ್ತಮವಾಗಿದೆ. ಆದರೆ ಸೂಕ್ತ ರೀತಿಯ ಸ್ಪಂದನೆ ಇಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ದೂರು ದಾಖಲಿಸಲು ಹಿಂದೇಟು : ಆನ್‌ಲೈನ್ ಮೂಲಕ ಕುಂದುಕೊರತೆಗಳ ನಿರ್ವಹಣೆಗೆ ಸ್ವಯಂಚಾಲಿತ ತಂತ್ರಾಂಶ ಬಳಕೆ ಮಾಡಲಾಗಿದೆ. ದೂರು ನೀಡಿದಾಗ ಬಳಿಕ ಕೂಡಲೇ ಒಂದು ಸಂದೇಶ ಮೊಬೈಲ್‌ಗಳಿಗೆ ಬರುತ್ತದೆ. ತಾವು ನೀಡಿರುವ ದೂರು ದಾಖಲಿಸಿಕೊಂಡಿದ್ದೇವೆ. ನಿಮ್ಮ ಸಮಸ್ಯೆಯನ್ನು ಮೂರು ಅಥವಾ ನಾಲ್ಕು ದಿನಗಳಲ್ಲಿ ಪರಿಹರಿಸುತ್ತೇವೆ ಎಂದು ಸಿದ್ಧ ಉತ್ತರ ಬರುತ್ತದೆ. ಆದರೆ ಸ್ಪಂದನ ಮಾತ್ರ ಆಟಕ್ಕುಂಟು ಲೆಕಕ್ಕಿಲ್ಲದಂತಾಗಿದೆ. ಇದರಿಂದ ನಾಗರಿಕರುಕುಂದುಕೊರತೆಗಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.
ಜನಹಿತ ಮತ್ತು ಆನ್‌ಲೈನ್ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ತ್ವರಿತವಾಗಿಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನಾಗರಿಕರು ದೂರುದಾಖಲಿಸುವ ವೇಳೆಯಲ್ಲಿ ವಿಳಾಸ ಮತ್ತು ದೂರಿಗೆ ಸಂಬಂಧಿಸಿದ ಚಿತ್ರಗಳನ್ನು ಅಪ್‌ಲೋಡ್ ಮಾಡಿದರೆ ಸಮಸ್ಯೆಗಳು ಬಗೆಹರಿಸಿರುವ ಬಗ್ಗೆ ಖಾತ್ರಿಯಾಗುತ್ತದೆ. ದೂರುಗಳು ಪರಿಹರಿಸಲು ವಿಳಂಬ ಕುರಿತು ಪರಿಶೀಲನೆ ನಡೆಸುತ್ತೇನೆ. –ರೇಣುಕಾ, ಜಿಲ್ಲಾ ಯೋಜನಾ ನಿರ್ದೇಶಕಿ, ನಗರಾಭಿವೃದ್ಧಿ ಕೋಶ
ನಗರಸಭೆ ವ್ಯಾಪ್ತಿಯಲ್ಲಿ ಅನೇಕ ರೀತಿಯ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ಸಲುವಾಗಿ ವ್ಯವಸ್ಥೆಗಳಿದ್ದರೂ ಸಹಅಧಿಕಾರಿಗಳು ಸರ್ಕಾರದಯೋಜನೆಗಳ ಕುರಿತು ಪ್ರಚಾರ ಪಡಿಸುವುದಿಲ್ಲ. ನಾಗರಿಕರು ಸಲ್ಲಿಸುವ ದೂರುಗಳುಕೇವಲ ಸ್ವೀಕೃತಿಗೆ ಸೀಮಿತವಾಗಿದೆ. –ಸೋಮು ನಾಗರಿಕರ ಚಿಕ್ಕಬಳ್ಳಾಪುರ
–ಎಂ.ಎ.ತಮೀಮ್ ಪಾಷ