Advertisement

ಕಾಂಗ್ರೆಸ್‌ನಿಂದ ಜನಧ್ವನಿ ಪಾದಯಾತ್ರೆಗೆ ಚಾಲನೆ

09:49 PM Feb 22, 2021 | Team Udayavani |

ಪಡುಬಿದ್ರಿ: ಕೇಂದ್ರ ಸರಕಾರದ ಜನವಿರೋಧಿ ನಿಲುವಿನ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರಸ್‌ ಸಮಿತಿ ಆಯೋಜಿಸಿದ ಹೆಜಮಾಡಿಯಿಂದ ಬೈಂದೂರು ತನಕ ಜನಧ್ವನಿ ಪಾದಯಾತ್ರೆಗೆ ರಾಜ್ಯಸಭೆ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಸೋಮವಾರದಂದು ವರ್ಚುವಲ್‌ ಚಾಲನೆಯನ್ನಿತ್ತರು.

Advertisement

ಫೆ. 27ರವರೆಗೆ ನಡೆಯುವ ಈ ಪಾದಯಾತ್ರೆಯು ಹೆಜಮಾಡಿ ಪೇಟೆಯಲ್ಲಿ ಉದ್ಘಾಟನೆಗೊಂಡಿತು. ಆಸ್ಕರ್‌ ಫೆರ್ನಾಂಡಿಸ್‌ ಉದ್ಘಾಟಿಸಿ ಮಾತನಾಡಿ ಕೇಂದ್ರದ ಜನವಿರೋಧಿ ನೀತಿಯನ್ನು ಜನ ಮನಗಂಡಿದ್ದಾರೆ. ಸದೃಢ, ಸುಖಕರ ಕಾಂಗ್ರೆಸ್‌ ಸರಕಾರ ಬರಲಿ ಎಂದು ಶುಭಹಾರೈಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮಾಜಿ ಶಾಸಕರಾದ ವಿನಯಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಗೋಪಾಲ ಪೂಜಾರಿ, ಎಂ. ಎ. ಗಫೂರ್‌, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಮುಖಂಡರಾದ ನವೀನ್‌ಚಂದ್ರ ಜೆ. ಶೆಟ್ಟಿ, ಎಂ. ಪಿ. ಮೊಯಿದಿನಬ್ಬ, ಧನಂಜಯ್‌ ಅಮೀನ್‌ ಮಟ್ಟು, ವೈ. ಸುಧೀರ್‌ಕುಮಾರ್‌, ರಾಜು ಪೂಜಾರಿ, ಗೀತಾ ವಾಗ್ಲೆ, ಹರೀಶ್‌ ಕಿಣಿ, ದೇವಿಪ್ರಸಾದ್‌ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ಜಿತೇಂದ್ರ ಫುರ್ಟಾಡೋ, ವೈ. ಸುಕುಮಾರ್‌, ವಸಂತ ಬೆರ್ನಾರ್ಡ್‌, ಯು. ಸಿ. ಶೇಖಬ್ಬ, ದಿನೇಶ್‌ ಕೋಟ್ಯಾನ್‌, ನವೀನ್‌ ಎನ್‌. ಶೆಟ್ಟಿ, ರಮೀಝ್ ಹುಸೈನ್‌, ಗಣೇಶ್‌ ಕೋಟ್ಯಾನ್‌, ಸುಧೀರ್‌ ಕರ್ಕೇರ, ಸರಸು, ಬಂಗೇರ, ಸನಾ ಇಬ್ರಾಹಿಂ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next