Advertisement
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಕಲಿ ಮರಣ ಪ್ರಮಾಣ ಪತ್ರ ಸಲ್ಲಿಸಿ ಖಾತೆಗಳನ್ನು ಮಾಡಿರುವ ಬಗ್ಗೆ ದೂರುಗಳಿವೆ. ರಂಗಸಮುದ್ರದಲ್ಲಿ ಬೆಂಗಳೂರಿನ ನಿವಾಸಿಯೊಬ್ಬರು ಸತ್ತಿದ್ದಾರೆಂದು ನಕಲಿ ದಾಖಲೆಸೃಷ್ಟಿಸಿಖಾತೆಮಾಡಿಸಿರುವಬಗ್ಗೆಪ್ರಸ್ತಾಪಿಸಿದ ಅವರು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
Related Articles
Advertisement
ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ರೈತರ ಪೋಡುಗಳ ಬಗ್ಗೆ ಹೆಚ್ಚು ಸಮಸ್ಯೆ ಇದೆ. ಅದನ್ನು ತ್ವರಿತವಾಗಿ ಮಾಡಿಸುವ ನಿಟ್ಟಿನಲ್ಲಿ ಅಗತ್ಯ ಸೂಚನೆ ನೀಡುವಂತೆ ಹಾಗೂ ತಲಕಾಡು ಮತ್ತು ಬನ್ನೂರು ಆಸ್ಪತ್ರೆಗಳಲ್ಲಿ ವೈದ್ಯರ ನೇಮಕಾತಿಗೆಕ್ರಮ ವಹಿಸುವಂತೆ ಹೇಳಿದರು. ಸಭೆಯಲ್ಲಿ ಜಿಪಂ ಸಿಇಒ ಡಿ.ಭಾರತಿ,
ಉಪವಿಭಾಗಾಧಿಕಾರಿ ಡಾ.ವೆಂಕಟರಾಜು. ತಹಶೀಲ್ದಾರ್ ಡಿ. ನಾಗೇಶ್, ಪುರಸಭಾ ಮುಖ್ಯಾಧಿಕಾರಿ ಅಶೋಕ್, ಸಿಪಿಐ ಎಂ.ಆರ್.ಲವ, ಬಿಇಒ ಮರಿ ಸ್ವಾಮಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೃಷಿ ಅಧಿಕಾರಿ ಜಯರಾಮಯ್ಯ, ಕಂದಾಯಾಧಿಕಾರಿಗಳಾದ ಬಿ.ಸಿ. ಮಹದೇವನಾಯಕ, ಚೆಲುವರಾಜು ಇತರರಿದ್ದರು.