2017-18ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಹೊಸ ತಾಲೂಕುಗಳನ್ನು ಘೋಷಿಸಲಾಗಿರುವಂತೆ ಹೆಬ್ರಿಯನ್ನೂ ಘೋಷಿಸಲಾಗಿದ್ದು, ಹೊಸ ತಾಲೂಕಾಗಿ ರಾಜ್ಯಪತ್ರ ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಜ.26ರಿಂದ ಹೆಬ್ರಿ ನೂತನ ತಾಲೂಕು ಕಚೇರಿ ಕಾರ್ಯಾರಂಭ ಮಾಡಲಿದೆ.
Advertisement
ಈ ಕುರಿತು ಡಿ. 28ರಂದು ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಮಾತನಾಡಿದ ಹೆಬ್ರಿ ತಾಲೂಕು ಹೋರಾಟ ಸಮಿತಿಯ ಗೌರವಾಧ್ಯಕ್ಷ ಎಚ್. ಗೋಪಾಲ ಭಂಡಾರಿ ಅವರು, ನಿರಂತರ ಹೋರಾಟ ಫಲಕೊಟ್ಟಿದೆ. ಹೆಬ್ರಿ ತಾಲೂಕು ಉಡುಪಿ ಜಿಲ್ಲೆಯ 7 ತಾಲೂಕುಗಳಲ್ಲಿ ಭೌಗೋಳಿಕ ವಿಸ್ತೀರ್ಣದಲ್ಲಿ ಕೊನೆ ಸ್ಥಾನದಲ್ಲಿದೆ ಎಂದರು. ಹೆಬ್ರಿ ತಾಲೂಕು ಘೋಷಣೆಯಲ್ಲಿ ಮಾಜಿ ಮುಖ್ಯಮಂತ್ರಿ ಡಾ| ವೀರಪ್ಪ ಮೊಯ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ಜನರ ನಿರಂತರ ಹೋರಾಟದಿಂದ ತಾಲೂಕಾಗಿ ಘೋಷಣೆಯಾಗಿದೆ. ಇದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೋರಾಟ ಸಮಿತಿಯ ಸಂಚಾಲಕ ನೀರೆ ಕೃಷ್ಣ ಶೆಟ್ಟಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಉಪಾಧ್ಯಕ್ಷ ಪ್ರವೀಣ್ ಬಲ್ಲಾಳ್ ಮೊದಲಾದವರಿದ್ದರು.
ಕಾರ್ಕಳ ತಾಲೂಕಿನಲ್ಲಿದ್ದ ಬೇಳಂಜೆ, ಕುಚ್ಚಾರು, ಹೆಬ್ರಿ, ಚಾರ, ಶಿವಪುರ, ಕೆರೆಬೆಟ್ಟು, ಮುದ್ರಾಡಿ, ಕಬ್ಬಿನಾಲೆ, ನಾಡಾ³ಲು, ವರಂಗ, ಪಡುಕುಡೂರು,ಅಂಡಾರು ಹಾಗೂ ಕುಂದಾಪುರ ತಾಲೂಕಿನಲ್ಲಿದ್ದ ಬೆಳ್ವೆ, ಅಲ್ಬಾಡಿ, ಶೇಡಿಮನೆ, ಮಡಾಮಕ್ಕಿ ಸೇರಿದಂತೆ 46,663 ಜನಸಂಖ್ಯೆ ಒಳಗೊಂಡ 16 ಗ್ರಾಮಗಳು ಸೇರಿವೆ. ಸುದೀರ್ಘ ಹೋರಾಟ
41 ವರ್ಷ ಹೆಬ್ರಿ ತಾಲೂಕಿಗೆ ಹೋರಾಟ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ 2012ರಲ್ಲಿ ತಾಲೂಕು ಪುನರ್ ರಚನಾ ರಾಜ್ಯ ಸಮಿತಿಯ ಅಧ್ಯಕ್ಷರಾಗಿದ್ದ ಎಮ್. ಬಿ ಪ್ರಕಾಶ್ ಉಡುಪಿ ಜಿಲ್ಲೆಯಲ್ಲಿ ಹೆಬ್ರಿ ತಾಲೂಕು ರಚನೆಗೆ ಸಾಕಷ್ಟು ಧನಾತ್ಮಕ ಅಂಶಗಳಿವೆ ಎಂದು ತಿಳಿಸಿದ್ದರು. ಬಳಿಕ ಬಜೆಟ್‌ನಲ್ಲಿ ಹೊಸ ತಾಲೂಕು ಘೋಷಣೆ ಮಾಡಿ ಮೂಲ ಸೌಕರ್ಯ ಒದಗಿಸಲು ಭರವಸೆ ನೀಡಿದ್ದರೂ ಅನುಷ್ಠಾನವಾಗಿರಲಿಲ್ಲ. ಈಗ ಅವಶ್ಯ ಕಾಮಗಾರಿಗಳಿಗೆ ಚಾಲನೆ ದೊರಕಿಸಿಕೊಡುವ ಜವಾಬ್ದಾರಿ ಸರಕಾರದ ಮೇಲಿದೆ. ಇನ್ನು ಹೆಬ್ರಿಗೆ ಹತ್ತಿರದ ಗ್ರಾಮಗಳಾದ ಸಂತೆಕಟ್ಟೆ , ಕಳ್ತೂರು, ಪೆರ್ಡೂರು, ಬೈರಂಪಳ್ಳಿ 15 ಕಿ.ಮೀ. ವ್ಯಾಪ್ತಿ ಒಳಗಿದ್ದು, ತಾಲೂಕಿಗೆ ಸೇರಿಸದೇ ಇರುವುದು ಅಚ್ಚರಿ ಮೂಡಿಸಿದೆ.