Advertisement
“ಕೇಳಿರಿ ನಿಮಗೆ ಕೊಡಲಾಗುವುದು’ ಎಂಬ ವಿಷಯದೊಂದಿಗೆ ನಡೆಯುವ 6 ದಿನಗಳ ಈ ಉತ್ಸವದಲ್ಲಿ ಕೊಂಕಣಿ ಭಾಷೆಯಲ್ಲಿ 45, ಕನ್ನಡದಲ್ಲಿ 3 ಸೇರಿದಂತೆ ಒಟ್ಟು 48 ಬಲಿ ಪೂಜೆಗಳು ನಡೆಯಲಿವೆ. ಜ. 21ರ ಸಂಜೆ 4.30ಕ್ಕೆ (ಕೊಂಕಣಿ) ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ, ಜ. 22ರಂದು ಸಂಜೆ 6ಕ್ಕೆ (ಕನ್ನಡ) ಶಿವಮೊಗ್ಗದ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್ ಸೆರಾವೊ, ಜ. 23ರಂದು ಸಂಜೆ 5.30ಕ್ಕೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್, ಜ. 24ರ ಬೆಳಗ್ಗೆ 10ಕ್ಕೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ, ಜ. 25ರ ಬೆಳಗ್ಗೆ 10 (ಕೊಂಕಣಿ) ಮಂಗಳೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್É ಸಲ್ಡಾನ್ಹಾ ನೆರವೇರಿಸುವರು. ಜ. 26ರಂದು ಬೆಳಗ್ಗೆ 10ಕ್ಕೆ ಅಸ್ವಸ್ಥರು ಹಾಗೂ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಬಳಿಕ ಬೆಳ್ತಂಗಡಿ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಪ್ರಧಾನ ಯಾಜಕರಾಗಿ ಪ್ರಮುಖ ಬಲಿಪೂಜೆ (ಕನ್ನಡ) ನೆರವೇರಿಸಲಿರುವರು.
ಆರಂಭದಲ್ಲಿ 3 ದಿನ ಬಲಿಪೂಜೆ ನಡೆಯುತ್ತಿತ್ತು. ಬಳಿಕ 4ರಿಂದ 5ಕ್ಕೆ ಹೆಚ್ಚಿಸುತ್ತ ಬರಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಒತ್ತಡ ನಿರ್ವಹಣೆ ದೃಷ್ಟಿಯಿಂದ ಈ ಬಾರಿ 6 ದಿನ ಬಲಿಪೂಜೆ ನಡೆಸಲಾಗುತ್ತಿದೆ. ಜ. 14ರಂದು ವಿಶೇಷ ಪೂಜೆ ಮೆರವಣಿಗೆ ನಡೆಯಲಿದೆ. ಶಾಸಕ ಸುನಿಲ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡುವರು. ಜ. 20ರಂದು ಮೆರವಣಿಗೆ, ವಿಶೇಷ ಬಲಿಪೂಜೆ ನಡೆಯಲಿದೆ. 2025 ಅನ್ನು ಪ್ರಾರ್ಥನ ವರ್ಷವಾಗಿ ಆಚರಿಸಲಾಗುತ್ತಿದೆ ಎಂದು ಧರ್ಮಗುರುಗಳು ಹೇಳಿದರು.