ಹೊಸದಿಲ್ಲಿ: ಭಾರತದ ಹೆಮ್ಮೆಯ ಟಾಟಾ ಗ್ರೂಪ್ ಸಂಸ್ಥೆಯ ಸಂಸ್ಥಾಪಕರಾದ ಜಮ್ಶೆಡ್‌ಜೀ ನುಸೀರ್‌ವಾನ್‌ಜಿà ಟಾಟಾ ಅವರು, ಕಳೆದೊಂದು ಶತಮಾನದಲ್ಲಿ ಸಾಮಾಜಿಕ ಸೇವೆಗಳಿಗಾಗಿ ಅತೀ ಹೆಚ್ಚು ದೇಣಿಗೆ ನೀಡಿದ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಡೆಲ್‌ಗಿವ್ ಹುರುನ್ ಎಂಬ ಸಂಸ್ಥೆಯು, ಜಾಗತಿಕ ಮಟ್ಟದಲ್ಲಿ ನಾನಾ ಕ್ಷೇತ್ರಗಳಿಗೆ ಉದಾರ ದೇಣಿಗೆ ನೀಡಿದ ಉದ್ಯಮಿಗಳ ಹೆಸರುಗಳನ್ನು ಪಟ್ಟಿ ಮಾಡಿದ್ದು, 1892ರಿಂದ ಇಲ್ಲಿಯವರೆಗೆ 7.5 ಲಕ್ಷ ಕೋಟಿ ರೂ.(102 ಬಿಲಿ ಯನ್ ಡಾಲ ರ್) ದೇಣಿಗೆಯನ್ನು ನೀಡುವ ಮೂಲಕ ಜಮ್ಶೆಡ್‌ಜೀ ಟಾಟಾ ಅಗ್ರಸ್ಥಾನದಲ್ಲಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಇವರು ಹೆಚ್ಚು ದಾನ ಮಾಡಿರುವುದಾಗಿ ಹುರುನ್ ತಿಳಿಸಿದೆ.
ಹುರುನ್ ಸಂಸ್ಥೆ ಬಿಡುಗಡೆ ಮಾಡಿರುವ ಈ ಪಟ್ಟಿಯ ಟಾಪ್ 10ರಲ್ಲಿರುವ ಏಕೈಕ ಭಾರತೀಯ ಉದ್ಯಮಿಯೆಂದರೆ ಜಮ್ಶೆಡ್‌ಜೀ ಟಾಟಾ ಮಾತ್ರ. ಭಾರತದ ಇತರ ಉದ್ಯಮಿಗಳಾದ ಅಜೀಂ ಪ್ರೇಮ್‌ಜೀ (ವಿಪ್ರೋದ ಮಾಜಿ ಮುಖ್ಯಸ್ಥ) 12ನೇ ಸ್ಥಾನದಲ್ಲಿದ್ದಾರೆ. ಟಾಪ್ 5ರಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಉದ್ಯಮಿಗಳಾದ ಬಿಲ್ ಗೇಟ್ಸ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್, ಹೆನ್ರಿ ವೆಲ್‌ಕಂ, ಹೊವಾರ್ಡ್ ಹ್ಯೂಸ್ ಹಾಗೂ ವಾರೆನ್ ಬಫೆಟ್ ಇದ್ದಾರೆ.
ಜಮ್ಶೆಡ್‌ಜೀ ಟಾಟಾ ಬಗ್ಗೆ ಒಂದಿಷ್ಟು… :
ದಕ್ಷಿಣ ಗುಜರಾತ್‌ನ ನವ್‌ಸಾರಿಯಲ್ಲಿ ನುಸೀರ್‌ವಾನ್‌ಜಿà ಹಾಗೂ ಜೀವನ್‌ಬಾಯಿ ಎಂಬ ಪಾರ್ಸಿ ದಂಪತಿಯ ಮಗನಾಗಿ 1839ರ ಮಾ. 3ರಂದು ಜಮ್ಶೆಡ್‌ಜೀಟಾಟಾ ಜನಿಸಿದ್ದರು. ಅವರ ತಂದೆ ಭಾರತದಲ್ಲಿರುವ ಪಾರ್ಸಿ ಸಮುದಾಯದಲ್ಲೇ ಮೊದಲ ಉದ್ಯಮಿ ಎಂದೆನಿಸಿದ್ದರೂ ಕುಟುಂಬದ ಆರ್ಥಿಕ ಪರಿಸ್ಥಿತಿ ಕೆಳಮಟ್ಟದಲ್ಲೇ ಇತ್ತು. 1858ರಲ್ಲಿ ಮುಂಬಯಿ ಯ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಪದವಿ ಪಡೆದ ಅನಂತರ, ಉದ್ಯಮ ರಂಗಕ್ಕೆ ಕಾಲಿಟ್ಟರು. ಮೊದಲು, ಹತ್ತಿಯ ಮಿಲ್‌ಗಳನ್ನು ಸ್ಥಾಪಿಸಿದ ಅವರು ಆನಂತರ 1907ರಲ್ಲಿ ಜಾರ್ಖಂಡ್‌ನ ಈಗಿನ ಜಮ್ಶೆಡ್‌ಪುರದಲ್ಲಿ ಟಾಟಾ ಸ್ಟೀಲ್ಸ್ ಶುರು ಮಾಡಿದರು. ಬೃಹತ್ತಾಗಿ ಬೆಳೆದ ಆ ಕಾರ್ಖಾನೆಯ ಸುತ್ತಲೂ ಊರು ಬೆಳೆದಿದ್ದರಿಂದ ಈ ಊರಿಗೆ ಜೆಮೆÒಟ್‌ಪುರ ಎಂಬ ಹೆಸರು ಬಂದಿತ್ತು. ಕಾಲಾಂತರದಲ್ಲಿ ಅದು ಜಮ್ಶೆಡ್‌ಪುರವಾಗಿ, ಈಗ ಟಾಟಾ ಸಿಟಿ ಎಂದೂ ಕರೆಯಲ್ಪಡುತ್ತಿದೆ. ಜಮ್ಶೆಡ್‌ಜೀ ಅನಂತರ ಅವರ ಮಕ್ಕಳಾದ ಸರ್ ದೊರಾಬ್ಜಿ ಟಾಟಾ ಹಾಗೂ ರತನ್ ಟಾಟಾ ಅವರು ಸಂಸ್ಥೆಯನ್ನು ಮತ್ತಷ್ಟು ಬೆಳೆಸಿದರು. ಆದರೆ ದೊರಾಬ್ಜಿ 1932ರಲ್ಲೇ ನಿಧನ ಹೊಂದಿದ್ದು, ರತನ್ ಟಾಟಾ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಸಂಸ್ಥೆಯನ್ನಾಗಿಸುವ ಮಟ್ಟಕ್ಕೆ ಬೆಳೆಸಿದ್ದಾರೆ.
ಮಾನದಂಡ : ಉದ್ಯಮಿಗಳು ಅಥವಾ ಅವರು ಸ್ಥಾಪಿಸಿದ ಸಂಸ್ಥೆಗಳು ನೀಡಿರುವ ದೇಣಿಗೆಯ ಸಾಮಾಜಿಕ ಮೌಲ್ಯದ ಆಧಾರದ ಮೇಲೆ ಈ ರ್‍ಯಾಂಕಿಂಗ್ ನೀಡಲಾಗಿದೆ. ಹಣಕಾಸಿನ ನೆರವು ಮಾತ್ರವಲ್ಲದೆ, ವಿವಿಧ ಕ್ಷೇತ್ರಗಳಿಗೆ ಅವರು ನೀಡಿದ ಸಾಮಗ್ರಿಗಳು, ಇನ್ನಿತರ ನೆರವುಗಳನ್ನೂ ಇಲ್ಲಿ ಪರಿಗಣಿಸಲಾಗಿದೆ.
ಈಡೆಲ್‌ಗಿವ್ ಹುರುನ್ ಪಟ್ಟಿ:
ಟಾಪ್ 5 ಉದ್ಯಮಿಗಳು :
ಉದ್ಯಮಿ -ಸಂಸ್ಥೆ -ದೇಣಿಗೆ ಮೊತ್ತ (ರೂ.ಗಳಲ್ಲಿ)
ಜಮ್ಶೆಡ್‌ಜೀ ಟಾಟಾ-ಟಾಟಾ ಗ್ರೂಪ್-7.5 ಲ.ಕೋ.
ಬಿಲ್ ಗೇಟ್ಸ್ -ಫೌಂಡೇಶನ್ ಮೈಕ್ರೋಸಾಫ್ಟ್-5.5 ಲ.ಕೋ.
ಹೆನ್ರಿ ವೆಲ್‌ಕಮ್ -ವೆಲ್‌ಕಮ್-4.2 ಲ.ಕೋ.
ಹೊವಾರ್ಡ್ ಹ್ಯೂಸ್- ಹ್ಯೂಸ್ ಏರ್‌ಕ್ರಾಫ್ಟ್ -2.8 ಲ.ಕೋ.
ವಾರೆನ್ ಬಫೆಟ್ ಬರ್ಕ್‌ಶೈರ್ ಹಾತ್‌ವೇ-2.7 ಲ. ಕೋ.