ಶ್ರೀನಗರ: ಕುಲ್‌ಗಾಂನಲ್ಲಿ ಸಿಆರ್‌ಪಿಎಫ್ ಯೋಧರು ಮತ್ತು ಪೊಲೀಸರು ಶನಿವಾರ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ.
Advertisement
ಹತ್ಯೆಗೀಡಾದ ಉಗ್ರರು ಝೀನತ್ ಉಲ್ ಇಸ್ಲಾಂ ಮತ್ತು ಶಕೀಲ್ ಅಹಮದ್ ದಾರ್ ಎನ್ನುವವರಾಗಿದ್ದಾರೆ. ಝೀನತ್ ಅಲ್ ಬದ್ರ್ ಸಂಘಟನೆಗೆ ಸೇರಿದವನಾಗಿದ್ದು, ಐಇಡಿ ಬಾಂಬ್ ತಯಾರಿಕೆಯಲ್ಲಿ ನುರಿತನಾಗಿದ್ದ ಎಂದು ತಿಳಿದು ಬಂದಿದೆ.
ಕಾಟೊಪೋರಾ ಪ್ರದೇಶದಲ್ಲಿ ಈ ಭಾರಿ ಕಾರ್ಯಾಚರಣೆ ನಡೆಸಲಾಗಿತ್ತು. ಉಗ್ರರು ಹತ್ಯೆಗೀಡಾದ ಸ್ಥಳದಿಂದ ಅಪಾರ ಜಿಹಾದಿ ಸಾಹಿತ್ಯ ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.