Advertisement

ಭಗತ್‌ಸಿಂಗ್‌ ಉಗ್ರ ಎಂದ ಪ್ರೊಫೆಸರ್‌

06:00 AM Dec 01, 2018 | Team Udayavani |

ಜಮ್ಮು: ಭಗತ್‌ ಸಿಂಗ್‌ ಉಗ್ರಗಾಮಿ ಎಂದು ಜಮ್ಮು ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರೊ. ಮೊಹಮ್ಮದ್‌ ತಾಜುದ್ದೀನ್‌ ಹೇಳಿರುವುದು ಈಗ ವಿವಾದಕ್ಕೀಡಾಗಿದೆ. ಈ ಸಂಬಂಧ ತನಿಖೆಗೆ ವಿವಿ ಆದೇಶಿಸಿದೆ. ಗುರುವಾರ ರಾಜ್ಯ ಶಾಸ್ತ್ರದ ಬಗ್ಗೆ ಉಪನ್ಯಾಸ ನೀಡು ತ್ತಿದ್ದ ವೇಳೆ ತಾಜುದ್ದೀನ್‌ ಈ ರೀತಿ ಹೇಳಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

Advertisement

ಈ ಬಗ್ಗೆ ದಾಖಲೆಯಾಗಿ ಸಿಡಿಯನ್ನು ಕುಲಪತಿ ಡಾ. ವಿನಯ್‌ ಥುಸೂ ಅವರಿಗೆ ಸಲ್ಲಿಸಲಾಗಿದೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡ ಕುಲಪತಿ ಡಾ. ವಿನಯ್‌ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದು, 7 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ,  ತಾಜುದ್ದೀನ್‌ ತರಗತಿಗೆ ಹಾಜರಾಗದಂತೆ ಸೂಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಜುದ್ದೀನ್‌, ನನ್ನ 2 ಗಂಟೆ ಉಪನ್ಯಾಸದಲ್ಲಿ ಕೇವಲ 25 ಸೆಕೆಂಡುಗಳ ವಿಡಿಯೋ ತೆಗೆದು ಕೊಂಡು ವಿವಾದ ಮಾಡಿದ್ದಾರೆ. ಆ 25 ಸೆಕೆಂಡಲ್ಲಿ ಉಗ್ರ ಎಂಬ ಪದ ಬಳಕೆಯಾಗಿದೆ. ಯಾರಿಗಾದರೂ ಇದರಿಂದ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next