Advertisement

2 ದಿನ ಬಳಿಕ ಜಮ್ಮು-ಶ್ರೀನಗರ ಹೆದ್ದಾರಿ ಲಘು ವಾಹನಗಳಿಗೆ ತೆರವು

12:19 PM Sep 13, 2017 | udayavani editorial |

ಜಮ್ಮು : ಭಾರೀ ಭೂಕುಸಿತದಿಂದಾಗಿ ಎರಡು ದಿನಗಳ ಕಾಲ ಬಂದ್‌ ಆಗಿದ್ದ 300 ಕಿ.ಮೀ. ಉದ್ದದ ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿನ್ನು ಇಂದು ಲಘು ಮೋಟಾರು ವಾಹನಗಳಿಗೆ ತೆರವುಗೊಳಿಸಲಾಗಿದೆ.

Advertisement

ನಗ್ರೋತಾ ದಿಂದ ಶ್ರೀನಗರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ವಿಭಾಗವನ್ನು ಇಂದು ಬೆಳಗ್ಗೆ 5ರಿಂದ 10ರ ವರೆಗೆ ಮತ್ತು ಲೆವೋದ್ರಾದಿಂದ ಕಾಜಿಗುಂದ್‌ ಕಡೆಗೆ ಹೋಗುವ ಹೆದ್ದಾರಿಯನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗಿನ ಅವಧಿಗೆ ತೆರವುಗೊಳಿಸಲಾಗಿದೆ. ಜಮ್ಮುವನ್ನು ಕಾಶ್ಮೀರದೊಂದಿಗೆ ಜೋಡಿಸುವ ಜವಾಹರ್‌ ಸುರಂಗವನ್ನು ಮಧ್ಯಾಹ್ನ 3 ಗಂಟೆಗೆ ಮುನ್ನ ಹಾದು ಹೋಗುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ ಎಂದು ಹಿರಿಯ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ. 

ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಜೋಡಿಸುವ ಏಕೈಕ ಸರ್ವಋತು ಹೆದ್ದಾರಿಯನ್ನು ಕಳೆದ ಸೆ.11ರಂದು ಉಧಾಂಪುರ ಜಿಲ್ಲೆಯ ಮೋರ್‌ ಪಸ್ಸೀ ಎಂಬಲ್ಲಿ ಸಂಭವಿಸಿದ ಭಾರೀ ಭೂಕುಸಿತದ ಪರಿಣಾಮವಾಗಿ ಮತ್ತು ಮುಖ್ಯ ಸೇತುವೆ ಹಾನಿ ಉಂಟಾದ ಕಾರಣ ವಾಹನ ಸಂಚಾರಕ್ಕೆ ಬಂದ್‌ ಮಾಡಲಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next