Advertisement

ಜಮ್ಮು ಕಣಿವೆ ಪ್ರದೇಶದಲ್ಲಿ ದಾಖಲಾಯಿತು ಕನಿಷ್ಠ ತಾಪಮಾನ

09:47 AM Dec 19, 2019 | mahesh |

ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರದಲ್ಲಿ ಶೀತ, ಚಳಿ ಗಾಳಿಯ ತೀವ್ರತೆ ಅಧಿಕವಾಗಿದ್ದು, ಕಣಿವೆ ಪ್ರದೇಶಲ್ಲಿ ಬುಧವಾರ ವರ್ಷದಲ್ಲೇ ದಾಖಲೆ ಮಟ್ಟದ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಬುಧವಾರ ಜಮ್ಮು ಪ್ರದೇಶದಲ್ಲಿ 4.1 ಸೆಲ್ಸಿಯಸ್‌ ಉಷ್ಣಾಂಶ ಕಂಡು ಬಂದಿದ್ದು, ಈ ವರ್ಷದಲ್ಲಿ ದಾಖಲಾದ ಕನಿಷ್ಠ ತಾಪಮಾನವಾಗಿದೆ.  ಶ್ರೀನಗರದಲ್ಲಿ ಸದ್ಯ ಮೈನಸ್‌ 3.7 ಡಿಗ್ರಿ ಸೆಲ್ಸಿಯಸ್‌ಗಿಂತ ಕನಿಷ್ಠ ತಾಪಾಮಾನವಿದ್ದು, ವರ್ಷದಲ್ಲಿ ದಾಖಲಾದ ಸರಾಸರಿ ಉಷ್ಣಾಂಶ –2.2 ಸೆಲ್ಸಿಯಸ್‌ ನಷ್ಟಿದೆ.

ಉತ್ತರ ಕಾಶ್ಮೀರದ ಗುಲ್ಮಾರ್ಗ್‌ನ ಪ್ರಸಿದ್ಧ ಸ್ಕೀ ರೆಸಾರ್ಟ್‌ ಕಣಿವೆಯಅತ್ಯಂತ ಶೀತ ಪ್ರದೇಶವಾಗಿದ್ದು, ಮೈನಸ್‌ 11.5 ಡಿಗ್ರಿ ಸೆಲ್ಸಿಯಸ್‌ ನಷ್ಟು ಉಷ್ಣಾಂಶಕ್ಕಿಂತ ಕಡಿಮೆ ಇದೆ ಎಂದು ಹವಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಪಹಲ್‌ಗ‌ಮ್‌ ಪ್ರದೇಶದಲ್ಲಿ ಮೈನಸ್‌ 10.3 ಡಿಗ್ರಿ ಸೆಲ್ಸಿಯಸ್‌, ಲಡಾಖ್‌ನ ಲೇಹ್‌ ಪ್ರದೇಶಗಳಲ್ಲಿ ಮೈನಸ್‌ 17.9 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಇಳಿದಿದೆ.

ದಿಲ್ಲಿಯಲ್ಲಿ ಕಳೆದ 22 ವರ್ಷಗಳಲ್ಲೇ ಅತಿ ಕನಿಷ್ಠ ತಾಪಮಾನ
ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ಚಳಿ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ತಾಪಮಾನ 12.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇದು ಕಳೆದ 22 ವರ್ಷಗಳಲ್ಲೇ ಅತಿ ಕನಿಷ್ಠ ತಾಪಮಾನವಾಗಿದೆ.

Advertisement

ಸ್ಕೈಮೆಟ್‌ ಹವಾಮಾನ ಸಂಸ್ಥೆ ಪ್ರಕಾರ, ಈ ಚಳಿಯ ವಾತಾವರಣವು ಗುರುವಾರದವರೆಗೆ ಮುಂದುವರಿಯುವ ನಿರೀಕ್ಷೆ ಇದೆ. ಪಶ್ಚಿಮ ಭಾಗದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಶೀತ ಮಾರುತಗಳು ಉತ್ತರದ ಕಡೆಗೆ ಬೀಸುತ್ತಿದ್ದು ಡಿ.19ರವರೆಗೆ ಮುಂದುವರಿಯುವ ನಿರೀಕ್ಷೆ ಇದೆ. ಮುಂದಿನ ಎರಡು ದಿನಗಳಲ್ಲಿ ಪಂಜಾಪ್‌, ಹರಿಯಾಣ, ಚಂಡೀಗಢ, ದಿಲ್ಲಿ, ಪೂರ್ವ ರಾಜಸ್ಥಾನಗಳಲ್ಲಿ ಅತಿ ಚಳಿಯ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next