Advertisement

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

12:58 PM Mar 15, 2024 | Team Udayavani |

ಭಾರತದ ಮಣಿ ಮುಕುಟವೆಂದೇ ಖ್ಯಾತಿ ಪಡೆದ ನಿಸಗ೯ದ ಸ್ವಗ೯ವೆಂದೇ ವಿಶ್ವ ವಿಖ್ಯಾತಿಯಾದ ಭಾರತದ ಭೂ ಶಿಖರ ವೆಂದೇ ಕರೆಯಿಸಿ ಕೊಳ್ಳುವ ಹೆಮ್ಮೆಯ ಸಮೃದ್ಧಿಯನಾಡು ಕಾಶ್ಮೀರ .ಇಂತಹ ಕಾಶ್ಮೀರದ ಕುರಿತಾಗಿ ನಾವು ಪಾಠ ಕೇಳಿದ್ದೇವೆ ಪಾಠ ಹೇಳಿದ್ದೇವೆ.ಆದರೆ ಈ ನೆಲದ ಸೌಂದರ್ಯತೆಯನ್ನು ಪ್ರತ್ಯಕ್ಷ ವಾಗಿ ನೇೂಡಿ ಕಣ್ಣು ತುಂಬಿಸಿ ಕೊಳ್ಳ ಬೇಕಾದರೆ ಇಷ್ಟು ವರುಷಗಳ ಕಾಲ ಕಾಯ ಬೇಕಾಯಿತು.ಎಲ್ಲದಕ್ಕೂ ಕಾಲಕೂಡಿ ಬರ ಬೇಕೆನ್ನುವ ಮಾತು ನೆನಪಾಯಿತು..

Advertisement

ಕಾಶ್ಮೀರಕ್ಕೆ ಹೇೂಗುವುದೆಂದರೆ ಹತ್ತು ಹಲವು ಪ್ರಶ್ನೆಗಳು ಸ್ವಾಭಾವಿಕವಾಗಿ ಮನಸ್ಸಿನಲ್ಲಿ ಮೂಡುವುದು ಸಹಜವೇ?ಮನದಲ್ಲಿ ಮೂಡುವ ಮೆಾದಲ ಪ್ರಶ್ನೆ ಅಂದರೆ ಜೀವ ರಕ್ಷಣೆಯ ಭಯದ ಸ್ಥಿತಿ.ಭಯೇೂತ್ಪಾಕರು ಬಂದು ಬಿಟ್ಟರೆ? ಬಾಂಬು ಸಿಡಿಸಿ ಬಿಟ್ಟರೆ? ;ಪ್ರಾಣ ಹೇೂಗಿ ಬಿಟ್ಟರೆ ..?;ಹಾಗಾಗಿ ಹೆಚ್ಚಿನವರಿಗೆ ಕಾಶ್ಮೀರವೆಂದರೆ ಇಂತಹ ಹತ್ತು ಹಲವು ಭಯದ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುವುದು ಸಹಜ.

ಆದರೆ ಈಗ ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣ ವಾಗಿ ಬದಲಾಗಿದೆ; ಜನರು ಸ್ವಚ್ಛಂದವಾಗಿ ಯಾವುದೇ ಭಯ ಭೀತಿ ಇಲ್ಲದೆ ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ತಮ್ಮ ಬದುಕನ್ನು ಕಟ್ಟಿ ಕೊಳ್ಳುವ ಭರವಸೆಯಲ್ಲಿ ನಿಂತಿದ್ದಾರೆ.ತಮ್ಮ ನಾಡಿಗೆ ಬಂದ ಪ್ರವಾಸಿಗರನ್ನು ಪ್ರೀತಿ ವಿಶ್ವಾಸದಿಂದ ಬರ ಮಾಡಿಕೊಳ್ಳುವ ಮನ ಸ್ಥಿತಿಯ ಬದಲಾವಣೆಯನ್ನು ಕಾಶ್ಮೀರದ ಜನರಲ್ಲಿ ನಾವು ಪ್ರತ್ಯಕ್ಷವಾಗಿ ಕಾಣ ಬಹುದಾಗಿದೆ.ಪ್ರಕೃತಿಯ ಪ್ರಶಾಂತವಾದ ಕಾಶ್ಮೀರದ ಹಿಮದ ನೆಲದಲ್ಲಿ ಆರಾಮವಾಗಿ ಹೊಸ ಬದುಕನ್ನು ಕಟ್ಟಿ ಕೊಳ್ಳುವ ಸಂಕಲ್ಪ ಅಲ್ಲಿನ ಜನರಲ್ಲಿ ಕಾಣುವ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ.

Advertisement

ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ ರದ್ದತಿಯ ಅನಂತರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೇೂದಿ ನೀಡಿದ ಭರವಸೆ ಅಂದರೆ “ಕಾಶ್ಮೀರವನ್ನು ಸ್ವಿಟ್ಜರ್ಲ್ಯಾಂಡ್ ಸೌಂದರ್ಯತೆಗೂ ಮೀರಿ ಅಭಿವೃದ್ಧಿ ಪಡಿಸ ಬಹುದು ಅನ್ನುವ ಮಾತಿನ ಭರವಸೆಗೆ ಇನ್ನಷ್ಟು ಪೂರಕವಾಗಿ ಸ್ಪಂದಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತು ಕೆಲಸವನ್ನು ನಿವ೯ಹಿಸುತ್ತಿರುವವರಲ್ಲಿ ನಮ್ಮ ಉಡುಪಿ ಸಮೀಪದ ಹಿರಿಯಡಕದ ಪುಟ್ಟ ಹಳ್ಳಿ ಬೊಮ್ಮಾರ ಬೆಟ್ಟಿನಲ್ಲಿ ಹುಟ್ಟಿ ಬೆಳೆದು ಇಂದು ಜಮ್ಮು ಕಾಶ್ಮೀರ ಸರಕಾರದ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದಶಿ೯ಗಳಾದ ಹಿರಿಯಡಕ ರಾಜೇಶ್ ಪ್ರಸಾದ್ ಹಿರಿಯ ಐ.ಎ.ಎಸ್..ಅಧಿಕಾರಿ ಅನ್ನುವುದನ್ನು ನಾವು ನೆನಪಿಸಲೇ ಬೇಕು.ಇದು ನಮಗೆ ಹೆಮ್ಮೆಯ ಸುದ್ದಿಯೂ ಹೌದು.

|ಪ್ರವಾಸೋದ್ಯಮವೇ ಕಾಶ್ಮೀರಿ ಜನರ ಜೀವನಾಡಿ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಬೇರೆ ರಾಜ್ಯ ರಾಷ್ಟ್ರಗಳಿಂದ ಪ್ರವಾಸಿಗರು ಬರುತ್ತಿದ್ದಾರೆ ಅನ್ನುವುದು ಅಲ್ಲಿನ ಜನರ ಬಿಚ್ಚು ಮನಸ್ಸಿನ ಸ್ಪೂರ್ತಿಯ ಮಾತು. ನಮ್ಮ ಏಳು ದಿನಗಳ ಅಧ್ಯಯನದ ಪ್ರವಾಸದಲ್ಲಿ ಕಾಶ್ಮೀರದ ಒಟ್ಟು ಹತ್ತು ಜಿಲ್ಲೆಗಳಲ್ಲಿ ಏಳು ಪ್ರಮುಖ ಜಿಲ್ಲಾ ಕೇಂದ್ರ ಮತ್ತುಪ್ರಮುಖ ಪ್ರಕೃತಿ ತಾಣದಸೌಂದರ್ಯತೆಯನ್ನು ಕಣ್ಣ ಮನ ತುಂಬಿಸಿಕೊಳ್ಳುವ ಸೌಭಾಗ್ಯ ನಮ್ಮದಾಗಿತ್ತು..ಜೀವ ಮಾನದಲ್ಲಿ ಒಮ್ಮೆಯಾದರೂ ಕಾಶ್ಮೀರ ನೇೂಡಿ ಬಾ ಅನ್ನುವ ಮಾತು ಕಾಶ್ಮೀರವನ್ನು ನೇೂಡಿದ ಪ್ರತಿಯೊಬ್ಬರ ಮನದಲ್ಲಿ ಮೂಡುವ ಭಾವನೆಯೂ ಹೌದು.

(ಮುಂದುವರೆಯುವುದು)

ಲೇಖಕರು:ಪ್ರತ್ಯಕ್ಷ ದಶಿ೯:ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next