Advertisement

Jammu-Kashmir: ಉಗ್ರರನ್ನು ಮಟ್ಟ ಹಾಕಿದ‌ ಭದ್ರತಾ ಪಡೆಗಳು

03:55 AM Dec 30, 2024 | Team Udayavani |

ಪ್ರಸಕ್ತ ವರ್ಷ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು 75 ಉಗ್ರರನ್ನು ಹೊಡೆ ದು ರುಳಿ ಸುವಲ್ಲಿ ಯಶಸ್ವಿಯಾಗಿವೆ. ಜಮ್ಮು-ಕಾಶ್ಮೀರವನ್ನು ಭಯೋತ್ಪಾದನೆ ಮುಕ್ತವಾಗಿಸಲು ಪಣತೊಟ್ಟಿರುವ ಕೇಂದ್ರ ಸರಕಾರದ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಿದ್ದು, ಉಗ್ರರನ್ನು ಸದೆಬಡಿಯುವ ಕಾರ್ಯದಲ್ಲಿ ನಿರತವಾಗಿವೆ.

Advertisement

ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ಭದ್ರತಾ ಪಡೆಗಳಿಂದ ಹತ್ಯೆಗೀಡಾದ ಉಗ್ರರ ಪೈಕಿ ಶೇ.60ರಷ್ಟು ಮಂದಿ ಪಾಕಿಸ್ಥಾನಿ ಮೂಲದವರಾಗಿದ್ದಾರೆ. ಈ ಮೂಲಕ ಪಾಕ್‌ ಪ್ರಚೋದಿತ ಉಗ್ರರು ರಾಜ್ಯದಲ್ಲಿ ಇನ್ನೂ ಸಕ್ರಿಯವಾಗಿರುವುದು ಸ್ಪಷ್ಟ ವಾಗಿದೆ. ಇದೇ ವೇಳೆ ಹಾಲಿ ವರ್ಷದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾ ಚರಣೆ ವೇಳೆ ಹತ್ಯೆಗೀಡಾದ ಸ್ಥಳೀಯ ಉಗ್ರರ ಸಂಖ್ಯೆ ತೀವ್ರ ಇಳಿಕೆ ಕಂಡಿರುವುದು ಸಮಾಧಾನಕರ ವಿಷಯವಾಗಿದ್ದು, ಸ್ಥಳೀಯ ಜನತೆ ಭಯೋತ್ಪಾದನೆ ಮತ್ತು ಭಯೋತ್ಪಾದನ ಕೃತ್ಯಗಳಿಂದ ರೋಸಿ ಹೋಗಿರುವುದನ್ನು ಈ ಅಂಕಿಅಂಶಗಳು ಪುಷ್ಟೀಕರಿಸಿವೆ.

ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣ ಪ್ರಕ್ರಿಯೆಯನ್ನು ಚುನಾವಣ ಆಯೋಗ ಕೈಗೆತ್ತಿಕೊಂಡ ಬಳಿಕ ಅಲ್ಲಿ ಉಗ್ರ ಕೃತ್ಯಗಳು ಹೆಚ್ಚುತ್ತಲೇ ಬಂದಿದ್ದವು. ಒಂದೆಡೆಯಿಂದ ಪಾಕ್‌ ಸೇನೆ ಗಡಿಯಲ್ಲಿ ಕದನವಿರಾಮವನ್ನು ಉಲ್ಲಂ ಸುವ ಮೂಲಕ ಭದ್ರತಾ ಪಡೆಗಳ ಗಮನವನ್ನು ಗಡಿಯತ್ತ ಸೆಳೆದು ಉಗ್ರರನ್ನು ಇನ್ನೊಂದೆಡೆಯಿಂದ ಒಳನುಸುಳಿಸುವ ಪ್ರಯತ್ನ ನಡೆಸುತ್ತಲೇ ಬಂದಿತ್ತು. ಹೀಗೆ ಒಳ ನುಸುಳಿದ ಉಗ್ರರು, ನಾಗರಿಕರು ಮತ್ತು ಯೋಧರನ್ನು ಗುರಿಯಾಗಿಸಿ ಪದೇ ಪದೆ ರಾಜ್ಯದ ವಿವಿಧೆಡೆ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಲೇ ಬಂದಿದ್ದರು.

ಈ ಎಲ್ಲ ಸವಾಲುಗಳನ್ನು ಭದ್ರತಾ ಪಡೆಗಳು ಯಶಸ್ವಿ ಯಾಗಿ ನಿಭಾಯಿಸಿದ್ದೇ ಅಲ್ಲದೆ ಭಯೋತ್ಪಾದನೆ ಕೃತ್ಯಗಳಲ್ಲಿ ನಿರತರಾಗಿದ್ದ ಉಗ್ರರ ಮಾರಣಹೋಮ ನಡೆಸುತ್ತಲೇ ಬಂದಿದ್ದವು. ಪ್ರಸಕ್ತ ವರ್ಷ ಉಗ್ರರು ಜಮ್ಮು- ಕಾಶ್ಮೀರದಲ್ಲಿ 60 ಭಯೋತ್ಪಾದಕ ದಾಳಿ ಗಳನ್ನು ನಡೆಸಿದ್ದು ಇವುಗಳಲ್ಲಿ 32 ನಾಗರಿಕರು ಮತ್ತು 26 ಮಂದಿ ಭದ್ರತಾ ಸಿಬಂದಿ ಸಹಿತ 120 ಮಂದಿ ಹತ ರಾಗಿದ್ದರು. ಭದ್ರತಾ ಪಡೆಗಳ ನಿರಂತರ ನಿಗಾದ ಹೊರತಾಗಿಯೂ ಉಗ್ರ ಸಂಘ ಟನೆಗಳು ಪದೇಪದೆ ತಮ್ಮ ಕಾರ್ಯ ತಂತ್ರಗಳನ್ನು ಬದಲಾಯಿಸಿಕೊಳ್ಳುವುದು ಮತ್ತು ಉಗ್ರ ಕೃತ್ಯಗಳಿಗೆ ತಂತ್ರ ಜ್ಞಾನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ರಾಜ್ಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಟ ನಡೆಸುತ್ತಲೇ ಬಂದಿದ್ದವು. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ಸೇನಾಧಿಕಾರಿ ಗಳ ಸಹಿತ ಹಲವು ಯೋಧರು ಹುತಾತ್ಮರಾದರೂ ದೇಶದ ಭದ್ರತಾ ಪಡೆಗಳು ತಮ್ಮ ಕೆಚ್ಚೆದೆಯನ್ನು ಪ್ರದರ್ಶಿಸಿ, ಉಗ್ರರನ್ನು ಯಶಸ್ವಿಯಾಗಿ ಮಟ್ಟ ಹಾಕಿವೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬಹುತೇಕ ಕಡಿವಾಣ ಹಾಕುವಲ್ಲಿ ಭದ್ರತಾ ಪಡೆಗಳು ಸಫ‌ಲವಾಗಿವೆ. ಇದೇ ವೇಳೆ ಪಾಕ್‌ ಪ್ರೇರಿತ ಉಗ್ರ ಸಂಘಟನೆಗಳು ಸ್ಥಳೀಯ ಯುವಕರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದರೂ ಇತ್ತೀಚಿನ ದಿನಗಳಲ್ಲಿ ಸ್ಥಳೀಯರೂ ಭಯೋತ್ಪಾದನೆಯಿಂದ ದೂರ ವುಳಿಯುವ ದೃಢ ತೀರ್ಮಾನ ಕೈಗೊಂಡಿರುವುದು ಸರಕಾರ ಮತ್ತು ಸೇನಾ ಪಡೆಗಳ ಪಾಲಿಗೆ ಬಲುದೊಡ್ಡ ಯಶಸ್ಸೇ ಸರಿ.

Advertisement

ಕಾಶ್ಮೀರ ಕಣಿವೆಯಲ್ಲಿ ತಮ್ಮ ಚಟು ವಟಿಕೆಗಳು ಕ್ಷೀಣವಾಗುತ್ತಿರುವಂತೆಯೇ ಜಮ್ಮು ಪ್ರದೇಶದಲ್ಲೂ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಉಗ್ರ ಸಂಘಟನೆಗಳು ಪ್ರಯತ್ನ ನಡೆಸಿವೆಯಾದರೂ ಈ ಕುತಂತ್ರಕ್ಕೂ ಭದ್ರತಾ ಪಡೆಗಳು ಸೂಕ್ತ ತಿರುಗೇಟು ನೀಡುವ ಮೂಲಕ ಉಗ್ರರು ಬಾಲ ಬಿಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜಮ್ಮು-ಕಾಶ್ಮೀರದ ಶಾಂತಿ ಯನ್ನು ಕದಡುವ ಪಾಕಿಸ್ಥಾನ ಮತ್ತು ಉಗ್ರ ಸಂಘಟನೆಗಳ ಸತತ ಪ್ರಯತ್ನಗಳ ಹೊರತಾಗಿಯೂ ಅವೆಲ್ಲವನ್ನೂ ಅತ್ಯಂತ ಸಮರ್ಥವಾಗಿ ಎದುರಿಸಿ, ಜಮ್ಮು- ಕಾಶ್ಮೀರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಸರಕಾರಕ್ಕೆ ಭದ್ರತಾ ಪಡೆಗಳು ಸಾಥ್‌ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next