Advertisement

Jammu Kashmir Election: ಮೂರು ಕುಟುಂಬಗಳಿಂದ ಕಾಶ್ಮೀರ ನಾಶ: ಪ್ರಧಾನಿ ಮೋದಿ

05:46 PM Sep 15, 2024 | Team Udayavani |

ಜಮ್ಮು: ಜಮ್ಮು- ಕಾಶ್ಮೀರದಲ್ಲಿ ನಾಯಕತ್ವಕ್ಕಾಗಿ ಪಿಡಿಪಿ, ಕಾಂಗ್ರೆಸ್‌ ಮತ್ತು ನ್ಯಾಶನಲ್‌ ಕಾನ್ಫರೆನ್ಸ್‌ ನಡುವೆ ತಿಕ್ಕಾಟ ನಡೆಯುತ್ತಿದೆ. ಈ 3 ಮನೆತನಗಳು ಸೇರಿಕೊಂಡು ಜಮ್ಮು-ಕಾಶ್ಮೀರವನ್ನು ನಾಶ ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಾಗ್ಧಾಳಿ ನಡೆಸಿದ್ದಾರೆ.

Advertisement

ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೋಡಾದಲ್ಲಿ ಪ್ರಚಾರ ರ್ಯಾಲಿಯ­ನ್ನುದ್ದೇ ಶಿಸಿ ಮಾತನಾಡಿದ ಅವರು, ಈ 3 ಕುಟುಂಬಗಳು ಅವರ ಮನೆಯ ಮಕ್ಕಳಿಗೆ ಮಾತ್ರ ಅವಕಾಶ ನೀಡುತ್ತಿ ದ್ದಾರೆ. ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊ­ಳ್ಳುವುದ ಕ್ಕಾಗಿ ಪರ್ಯಾಯ ನಾಯಕತ್ವ ಬೆಳೆಯಲು ಅವರು ಅವಕಾಶ ನೀಡಿಲ್ಲ ಎಂದು ಗುಡುಗಿದ್ದಾರೆ. ಅಲ್ಲದೇ ಎನ್‌ಸಿ, ಪಿಡಿಪಿ, ಕಾಂಗ್ರೆಸ್‌ 370ನೇ ವಿಧಿಯನ್ನು ಮರಳಿ ತರಲು ಯತ್ನಿಸುತ್ತಿವೆ. ಅವರು ಮೀಸ­ಲಾತಿಯನ್ನು ಕಿತ್ತುಕೊಂಡು, ಹಿಂದಿನ ಭಯದ ವಾತಾ­ವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ನೀವು ಇದಕ್ಕೆ ಅವಕಾಶ ಕೊಡುತ್ತೀರಾ ಎಂದು ಜನರನ್ನು ಪ್ರಶ್ನಿಸಿದ್ದು, ಇದಕ್ಕೆ ಅವಕಾಶ ಕೊಡಬೇಡಿ ಎಂದು ಹೇಳಿದ್ದಾರೆ.

ಭಯೋತ್ಪಾದನೆ ಅಂತಿಮ ಹಂತದಲ್ಲಿದೆ
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯ ಉಸಿರಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಭಯೋತ್ಪಾದನೆಯನ್ನು ನಿಗ್ರಹಿಸಲು ಸಕಲ ಕ್ರಮ ಕೈಗೊಳ್ಳಲಾಗುತ್ತದೆ. ಈ ಮೊದಲು ಆಡಳಿತ ನಡೆಸಿದ ಪಕ್ಷಗಳು, ಜನರ ಹಾದಿ ತಪ್ಪಿಸಿ ಅಧಿಕಾರವನ್ನು ಅನುಭವಿಸಿದ್ದಾರೆ ಎಂದು ಆರೋಪಿಸಿದರು.

42 ವರ್ಷ ಬಳಿಕ ಮೊದಲ ಬಾರಿಗೆ ಪ್ರಧಾನಿ ಭೇಟಿ
ದೋಡಾ ಜಿಲ್ಲೆಗೆ 1982ರಲ್ಲಿ ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಭೇಟಿ ನೀಡಿದ್ದರು. ಆ ಬಳಿಕ ಯಾವ ಪ್ರಧಾನಿಯೂ ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಚುನಾವಣ ಪ್ರಚಾರಕ್ಕಾಗಿ ಮೋದಿ ಯವರು ಶನಿವಾರ ಭೇಟಿ ನೀಡಿದ್ದಾರೆ. ಹೀಗಾಗಿ 42 ವರ್ಷಗಳ ಬಳಿಕ ಅಲ್ಲಿಗೆ ಪ್ರಧಾನಿ ಭೇಟಿ ನೀಡಿದ್ದಾರೆ.

ಯುವಕರಿಗೆ ಅವಕಾಶ
ಬಿಜೆಪಿ ಅಧಿಕಾರಕ್ಕೆ ಬಂದರೆ ಯುವಕರಿಗೆ ನಾಯಕ­ತ್ವದ ಜವಾಬ್ದಾರಿ ನೀಡಲಿದೆ. ಕಾಶ್ಮೀ­ರದಲ್ಲಿ ಈವರೆಗೆ ಆಡಳಿತ ನಡೆಸಿರುವ ಕುಟುಂಬಗಳು ಯುವಕರಿಗೆ ಹೆಚ್ಚಿನ ಅವಕಾಶ ನೀಡಿಲ್ಲ. ತಮ್ಮ ಮನೆ ಮಕ್ಕಳನ್ನು ಮಾತ್ರ ಬೆಳೆಸಿದ್ದಾರೆ. ಇದರಿಂದಾಗಿ ರಾಜ್ಯದ ಬಹುತೇಕ ಯುವಕರಿಗೆ ಮೋಸವಾಗಿದೆ ಎಂದರು.

Advertisement

“ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಭದ್ರತೆ  ಕುಗ್ಗಿಸಿದೆ. ಹೀಗಾಗಿಯೇ ಉಗ್ರ ದಾಳಿಗಳು ನಡೆಯುತ್ತಿವೆ. 370ನೇ ವಿಧಿ ತೆಗೆದು 5 ವರ್ಷವಾದರೂ ದಾಳಿ ನಡೆಯುತ್ತಿವೆ.” – ಒಮರ್‌ ಅಬ್ದುಲ್ಲಾ, ಎನ್‌ಸಿ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next