Advertisement

ಅ.10ರಿಂದ ಕಾಶ್ಮೀರ ಪ್ರವಾಸಿಗರಿಗೆ ಮುಕ್ತ: ಎರಡು ತಿಂಗಳ ನಿಷೇಧ ತೆರವು

10:36 AM Oct 09, 2019 | keerthan |

ಶ್ರೀನಗರ: ಜಮ್ಮು ಕಾಶ್ಮೀರದ ವಿಶೇಷಾಧಿಕಾರ ತೆರವಿನ ನಂತರ ನಿಷೇಧದಲ್ಲಿದ್ದ ಕಾಶ್ಮೀರ ಪ್ರವಾಸ ಈಗ ಮುಕ್ತವಾಗಿದೆ. ಅಕ್ಟೊಬರ್ 10ರಿಂದ ಜಮ್ಮು ಕಾಶ್ಮೀರ ಪ್ರವಾಸಿಗರಿಗೆ ಮುಕ್ತವಾಗಲಿದೆ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಆದೇಶ ಹೊರಡಿಸಿದ್ದಾರೆ.

Advertisement

ಎರಡು ತಿಂಗಳ ಹಿಂದೆ ಅಂದರೆ ಆರ್ಟಿಕಲ್ 370 ತೆರವಿನ ವೇಳೆ ಭದ್ರತಾ ಕಾರಣದಿಂದ ಕಣಿವೆ ರಾಜ್ಯದಲ್ಲಿದ್ದ ಪ್ರವಾಸಿಗರನ್ನು ಹೊರಕ್ಕೆ ಕಳುಹಿಸಲಾಗಿತ್ತು. ಆದರೆ ಈಗ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನಲೆ ಈ ನಿರ್ಭಂಧವನ್ನು ಹಿಂಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next