Advertisement

ಬಂಡಿಪೋರಾ : ಇಬ್ಬರು ಉಗ್ರರ ಹತ್ಯೆ

09:40 AM Nov 13, 2019 | Hari Prasad |

ಶ್ರೀನಗರ: ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಶ್ರೀನಗರದ ಲಾಡಾರಾ ಗ್ರಾಮದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಹತನಾದರೆ, ಮತ್ತೂಬ್ಬ ಉಗ್ರ ಬಂಡಿಪೋರಾದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ, ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಎಲ್‌ಒಸಿಯಲ್ಲಿ ಪಾಕ್‌ ಪಡೆ ಹಾರಿಸಿದ ನಾಲ್ಕು ಸಜೀವ ಮೋರ್ಟಾರ್‌ ಶೆಲ್‌ಗ‌ಳನ್ನು ಸೇನೆ ನಿಷ್ಕ್ರಿಯಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next