Advertisement

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಟ್ರಬಲ್‌

09:38 PM Nov 17, 2021 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್‌ನ 20 ಹಿರಿಯ ನಾಯಕರು ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರಲ್ಲಿ ಅನೇಕರು ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾಗಿದ್ದಾರೆ ಎಂದು ತಿಳಿಸಲಾಗಿದೆ.

Advertisement

ರಾಜೀನಾಮೆ ನೀಡಿರುವ ಎಲ್ಲ ನಾಯಕರು ರಾಜ್ಯದಲ್ಲಿನ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಾಧ್ಯಕ್ಷ ಜಿ.ಎ. ಮಿರ್‌ ಅವರನ್ನು 3 ವರ್ಷಗಳ ಅವಧಿಗೆ ನೇಮಿಸಿದ್ದಾಗಿ ಹೇಳಲಾಗಿತ್ತು. ಆದರೆ ಇದೀಗ 7 ವರ್ಷಗಳಾಗಿವೆ. ಅವರ ನಾಯಕತ್ವದಲ್ಲಿ ಪಕ್ಷ ವಿನಾಶಕಾರಿಯಾಗಿ ಮುನ್ನೆಡೆಯುತ್ತಿದೆ.

ಯಾವುದೇ ಚಟುವಟಿಕೆಗಳಿಗೆ ನಮ್ಮ ಸಲಹೆ ಸ್ವೀಕರಿಸಲಾಗುತ್ತಿಲ್ಲ. ಕೇಂದ್ರದ ನಾಯಕರೊಂದಿಗೆ ಮಾತನಾಡುವುದಕ್ಕೂ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಕೋಲಾರ ಬಂದ್‌ನಲ್ಲಿ ಪಾಲ್ಗೊಳ್ಳದಂತೆ ನೋಟಿಸ್ : ಮುತಾಲಿಕ್ ಕಿಡಿ

ಪಕ್ಷ ತ್ಯಜಿಸಿದವರಲ್ಲಿ, ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರ ಸ್ನೇಹವೃಂದದಲ್ಲಿರುವ ಮಾಜಿ ಸಚಿವರಾಗಿರುವ ಜಿ.ಎಂ.ಸರೋರಿ, ಜುಗಾಲ್‌ ಕಿಶೋರ್‌, ವಿಕಾರ್‌ ರಸೂಲ್‌ ಮತ್ತು ಡಾ.ಮನೋಹರ ಲಾಲ್‌ ಕೂಡ ಸೇರಿದ್ದಾರೆ.

Advertisement

ರಾಜೀನಾಮೆ ಪತ್ರವನ್ನು ಪಕ್ಷದ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್‌ ಕಾರ್ಯದರ್ಶಿಗೆ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next