Advertisement

ಜಮ್ಮು ಕಾಶ್ಮೀರದಲ್ಲಿ ನಡೆಯಬೇಕಿದ್ದ ಹೂಡಿಕೆದಾರರ ಸಭೆ 2020ಕ್ಕೆ ಮುಂದೂಡಿಕೆ

09:33 AM Sep 21, 2019 | keerthan |

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮುಂದಿನ ತಿಂಗಳು ಅಕ್ಚೋಬರ್‌ 12 ರಿಂದ 14ರವರೆಗೆ ನಡೆಯಬೇಕಿದ್ದ ಹೂಡಿಕೆದಾರರ ಸಮಾವೇಶ 2020ಕ್ಕೆ ಮುಂದೂಡಲಾಗಿದೆ. ರಾಜ್ಯದ ಆಡಳಿತ ಮಂಡಳಿ ಮತ್ತು ರಾಜ್ಯಪಾಲ ಸತ್ಯಪಾಲ ಮಲಿಕ್‌  ಸಮಾವೇಶವನ್ನು ನಡೆಸಲು ಸಿದ್ಧತೆಯನ್ನು ಪರಿಶೀಲಿಸಿದ ನಂತರ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ 2020 ಕ್ಕೆ ಮರು ನಿಗದಿಪಡಿಸಬೇಕು ಎಂದು ನಿರ್ಧರಿಸಿದ್ದಾರೆ.

Advertisement

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದ ಹೊರಗಿನ ಉದ್ಯಮಿಗಳಿಗೆ ಹೂಡಿಕೆ ಮಾಡಲು ಅವಕಾಶ ನೀಡಲಾಗಿತ್ತು. ಹೀಗಾಗಿ ಹೂಡಿಕೆದಾರರನ್ನು ಆಕರ್ಷಿಸಲು ಸಮಾವೇಶ ನಡೆಸಲು ಸರಕಾರ ನಿರ್ಧರಿಸಿದೆ.

ಈಗ ಸಮಾವೇಶ ಮುಂದೂಡಿಕೆ ಮಾಡಿರುವುದರಿಂದ ಸಮಾವೇಶಕ್ಕೆ ಸಿದ್ದತೆಗೊಳಿಸಲು ಇನ್ನಷ್ಟು ಸಮಯ ಸಿಗಲಿದೆ. ಹೀಗಾಗಿ ಹೂಡಿಕೆದಾರರ ಸಮಾವೇಶವನ್ನು ಪರಿಣಾಮಕಾರಿಯಾಗಿ ನಡೆಸಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next