ಹೊಸದಿಲ್ಲಿ: ಜಮ್ಮು- ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಎಲ್ಲ ನಿರೀಕ್ಷೆ ಮೀರಿ ಗೆಲುವು ಸಾಧಿಸಿದ್ದು, 10 ವರ್ಷಗಳ ಬಳಿಕ ಸರ್ಕಾರ ರಚಿಸಲಿದೆ. ಇತ್ತ, ಸಾಕಷ್ಟು ಗೆಲುವಿನ ನಿರೀಕ್ಷೆಯನ್ನು ಹೊಂದಿದ್ದ ಬಿಜೆಪಿ, ಜಮ್ಮು ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆಯಾದರೂ ಸರ್ಕಾರ ರಚಿಸಲು ಬೇಕಾಗುವಷ್ಟು(46) ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಈಗ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಏರಿರುವುದರಿಂದ ಕಾಶ್ಮೀರದಲ್ಲಿ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚೆಯಾಗುತ್ತಿದೆ.
1 ರಾಜ್ಯ ಸ್ಥಾನಮಾನ ಬೇಡಿಕೆ: ಎನ್‌ಸಿ-ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದಕಾಶ್ಮೀರಕ್ಕೆ ರಾಜ್ಯಸ್ಥಾನಮಾನ ಬೇಡಿಕೆಗೆ ಹೆಚ್ಚು ಬಲಬರಲಿದೆ. ಕಾಂಗ್ರೆಸ್ ಮೈತ್ರಿ ಕೂಟ ಚುನಾವಣೆಯಲ್ಲಿ ಈ ಭರವಸೆಯನ್ನೂ ನೀಡಿತ್ತು.
2 ಪಾಕಿಸ್ತಾನ ಜತೆ ಮಾತುಕತೆ: ನ್ಯಾಷನಲ್ ಕಾನ್ಫರೆನ್ಸ್ ಮೊದಲಿ ನಿಂದಲೂ ಪಾಕಿಸ್ತಾನ ಜತೆ ಮಾತು ಕತೆ ನಡೆಸಬೇಕು ಎಂದು ಒತ್ತಾಯಿ ಸುತ್ತಿದೆ. ಈಗ ಈ ಬೇಡಿಕೆಗೆ ಇನ್ನಷ್ಟು ಬಲ ಬರಬಹುದು. ಕೇಂದ್ರದ ಮೇಲೆ ಒತ್ತಡ ಹೇರಬಹುದು.
3
ಪ್ರತ್ಯೇಕತಾವಾದಿಗಳು: ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರತ್ಯೇಕತಾವಾದಿಗಳು ಚಿಗುರಿಕೊಳ್ಳಲಾರರು. ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ರುವು ದರಿಂದ ಗಂಭೀರ ಕಾನೂನು ಸುವ್ಯ ವಸ್ಥೆ ಮೇಲೆ ಕೇಂದ್ರ ಪ್ರಭಾವ ಸಹಜ.
4
ಪ್ರವಾಸೋದ್ಯಮಕ್ಕೆ ಬಲ: ಕಾಶ್ಮೀರದಲ್ಲಿ ಪ್ರವಾ ಸೋದ್ಯ ಮಕ್ಕೆ ಸಾಕಷ್ಟು ಅವಕಾಶಗಳಿವೆ. ಕೇಂದ್ರ ಸರ್ಕಾರವು ಸಾಕಷ್ಟು ಹೂಡಿಕೆ ಮಾಡುತ್ತಿರುವುದರಿಂದ ಈ ನಿಟ್ಟಿನಲ್ಲಿ ಇನ್ನಷ್ಟು ಚಟುವಟಿ ಕೆಗಳು ಹೆಚ್ಚಾಗಬಹುದು.
5 ಉಗ್ರ ನಿಗ್ರಹ: ಭಯೋತ್ಪಾದನೆ ನಿಗ್ರಹವೂ ಎಂದಿನಂತೆ ಮುಂದುವರಿಯಲಿದೆ. ಈ ವಿಷ ಯದಲ್ಲಿ ಯಾವುದೇ ಪಕ್ಷ ರಾಜಿ ಮಾಡಿಕೊಳ್ಳಲು ತಯಾರಿಲ್ಲ. ಈ ವಿಷಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು.