Advertisement

ಭಾರತದ “ಮುಕುಟಮಣಿ”ಇಂದಿನಿಂದ ಕೇಂದ್ರಾಡಳಿತ

09:59 AM Nov 01, 2019 | mahesh |

ಹೊಸದಿಲ್ಲಿ: ಗುರುವಾರದ ಸೂರ್ಯೋದಯ ಈ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಲಿದೆ. 1947ರಿಂದ ಅಸ್ತಿತ್ವದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಎಂಬ ರಾಜ್ಯ ಆಡಳಿತಾತ್ಮಕವಾಗಿ ಮಾಯವಾಗಲಿದ್ದು, ಅದರ ಬದಲು “ಜಮ್ಮು- ಕಾಶ್ಮೀರ’ ಮತ್ತು “ಲಡಾಖ್‌’ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರಲಿವೆ. ದೇಶದ ಮೊದಲ ಗೃಹ ಸಚಿವ ಹಾಗೂ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲರ ಜನ್ಮ ದಿನ ವಾದ “ಏಕತಾ ದಿನ’ದಂದೇ ಈ ಎರಡೂ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರುತ್ತಿರುವುದು ವಿಶೇಷ.

Advertisement

ಆ. 5ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಅದನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶ ಗಳನ್ನಾಗಿಸುವ ಸರಕಾರದ ನಿರ್ಧಾರವನ್ನು ಸಂಸತ್ತಿನಲ್ಲಿ ಪ್ರಕಟಿಸಿದ್ದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶವಾದರೆ, ಲಡಾಖ್‌ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆಯಾಗಲಿದೆ.ಲೆ| ಗವರ್ನರ್‌ಗಳಿಗೆ ಇಂದೇ ಪ್ರತಿಜ್ಞಾವಿಧಿ
ಎರಡೂ ಕೇಂದ್ರಾಡಳಿತ ಪ್ರದೇಶಗಳ ನೂತನ ಲೆಫ್ಟಿನೆಂಟ್‌ ಗವರ್ನರ್‌ಗಳಿಗೆ ಜಮ್ಮು-ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ ಗೀತಾ ಮಿತ್ತಲ್‌ ಅವರು ಪ್ರತ್ಯೇಕವಾಗಿ ಪ್ರಮಾಣ ವಚನ ಬೋಧಿಸಲಿದ್ದಾರೆ.  ಬೆಳಗ್ಗೆ 7.15ಕ್ಕೆ ಲಡಾಖ್‌ನ ಮೊತ್ತಮೊದಲ ಲೆಫ್ಟಿನೆಂಟ್‌ ಗವರ್ನರ್‌ ರಾಧಾಕೃಷ್ಣ ಮಾಥುರ್‌ಅವರಿಗೆ ಪ್ರಮಾಣವಚನ ಬೋಧಿಸಲಿರುವ ಅವರು, ಅಲ್ಲಿಂದ ವಿಶೇಷ ವಿಮಾನದಲ್ಲಿ ಶ್ರೀನಗರಕ್ಕೆ ಆಗಮಿಸಿ, ಅಲ್ಲಿ ಮಧ್ಯಾಹ್ನ 12.45ರ ಸುಮಾರಿಗೆ ಗಿರೀಶ್‌ಚಂದ್ರ ಮುರ್ಮು ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಎರಡೂ ಸಮಾರಂಭಗಳನ್ನು ಸರಳವಾಗಿ ನಡೆಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

200 ವರ್ಷಗಳ ಇತಿಹಾಸವಿದ್ದ ಜಮ್ಮು-ಕಾಶ್ಮೀರ ರಾಜ್ಯ ಇಂದಿನಿಂದ ತೆರೆಮರೆಗೆ
72 ವರ್ಷಗಳ ಬಳಿಕ ರದ್ದಾಗಿದ್ದ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ
28 ಭಾರತದ ರಾಜ್ಯಗಳ ಸಂಖ್ಯೆ ಇಪ್ಪತ್ತೂಂಬತ್ತರಿಂದ ಇಪ್ಪತ್ತೆಂಟಕ್ಕೆ ಇಳಿಕೆ
07 ಭಾರತದಲ್ಲಿನ ಕೇಂದ್ರಾಡ ಳಿತ ಪ್ರದೇಶಗಳ ಸಂಖ್ಯೆ ಏಳಕ್ಕೇರಿಕೆ

Advertisement

Udayavani is now on Telegram. Click here to join our channel and stay updated with the latest news.

Next