Advertisement

2021ರೊಳಗೆ ಜಮ್ಮು- ಕಾಶ್ಮೀರದ ಚುನಾವಣ ಕ್ಷೇತ್ರಗಳ ಪುನಾರಚನೆ

02:05 AM Aug 27, 2020 | Hari Prasad |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭವಾಗುತ್ತಿದ್ದಂತೆ, 2021ರ ವೇಳೆಗೆ ನೂತನ ಕೇಂದ್ರಾಡಳಿತ ಪ್ರದೇಶ ಮತ್ತು ಈಶಾನ್ಯದ 4 ರಾಜ್ಯಗಳಿಗೆ ಚುನಾವಣಾ ಕ್ಷೇತ್ರಗಳ ಪುನರ್ರಚನೆಗೆ ವೇಗ ಹೆಚ್ಚಿಸಲು ಭಾರತೀಯ ವಿಂಗಡಣಾ ಆಯೋಗ (ಡಿಸಿಐ) ಮುಂದಾಗಿದೆ.

Advertisement

ಆಯೋಗದ ಮತದಾನ ಸಮಿತಿಯ ಪ್ರತಿನಿಧಿ ಆಗಿರುವ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ, ‘ಕ್ಷೇತ್ರಗಳ ಪುನರ್ರಚನೆಗೆ ಈಗಾಗಲೇ ಕೆಲಸಗಳು ಆರಂಭಗೊಂಡಿವೆ. ಕೇಂದ್ರ ಸರಕಾರ ನಮಗೆ 2020ರ ಮಾರ್ಚ್‌ನಿಂದ ಒಂದು ವರ್ಷದ ಕಾಲ ಮಿತಿಯನ್ನು ನೀಡಿದೆ. ನಿಗದಿತ ಸಮಯದೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಪ್ರತಿಯೊಬ್ಬರ ಅಭಿಪ್ರಾಯವನ್ನೂ ದಾಖಲಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಕೇಂದ್ರ ಸರಕಾರ ಬದ್ಧ’ ಎಂದು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಇದಕ್ಕೆ ಪೂರಕವಾಗಿ ಕಾಶ್ಮೀರದಲ್ಲಿ ನಿಯೋಜಿಸಲ್ಪಟ್ಟ ಸೈನಿಕರ ಸಂಖ್ಯೆಯನ್ನೂ ಇಳಿಸಲಾಗುತ್ತಿದೆ.

ಎಲ್ಲೆಲ್ಲಿ ಪುನಾರಚನೆ?
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು, ಕಾಶ್ಮೀರ, ಲಡಾಖ್‌ ಅಲ್ಲದೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌.

Advertisement

Udayavani is now on Telegram. Click here to join our channel and stay updated with the latest news.

Next