Advertisement
ಪ್ರತ್ಯೇಕತಾವಾದಿಗಳನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಕೈಗೊಂಡಿದ್ದ ಅನೇಕ ಕ್ರಮಗಳು ಅಲ್ಲಿನ ಜನರ ಮೇಲೆ ಮೋದಿ ಸರ್ಕಾರದ ವಿರುದ್ಧ ದ್ವೇಷದ ಭಾವ ತಂದಿಲ್ಲ ಎಂಬುದು ಈ ಫಲಿತಾಂಶದಿಂದ ಮನದಟ್ಟಾಗಿದೆ. ಪ್ರತ್ಯೇಕತಾ ವಾದಿಗಳ ಮೇಲೆ ಮುಗಿಬಿದ್ದಿದ್ದ ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿರುವ ಸಂವಿಧಾನದ 377ನೇ ಕಲಂ ಅನ್ನು ರದ್ದುಗೊಳಿಸುವ ಕುರಿತಂತೆ ಚಿಂತನೆ ನಡೆಸಿದ್ದು ಅಲ್ಲಿನ ಸ್ಥಳೀಯ ರಾಜಕಾರಣಿಗಳನ್ನು ಕೆರಳಿಸಿತ್ತು. ಹಲವಾರು ಗಣ್ಯರು ಕೇಂದ್ರಕ್ಕೆ ಬಹಿರಂಗ ಎಚ್ಚರಿಕೆ ನೀಡಿದ್ದರು. ಆದರೂ, ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿಯ ವರ್ಚಸ್ಸು ಕುಂದಿಲ್ಲ ಎಂಬುದು ಈಗ ಸಾಬೀತಾಗಿದೆ.
ಫಾರೂಕ್ ಅಬ್ದುಲ್ಲಾ (ಎನ್‌ಸಿ), ಶ್ರೀನಗರ
ಡಾ. ಜಿತೇಂದ್ರ ಸಿಂಗ್ (ಬಿಜೆಪಿ), ಉಧಮ್‌ಪುರ ಸೋತ ಪ್ರಮುಖರು
ಮೆಹಬೂಬಾ ಮುಫ್ತಿ (ಪಿಡಿಪಿ), ಅನಂತನಾಗ್
ರಮಣ್ ಭಲ್ಲಾ (ಕಾಂಗ್ರೆಸ್), ಜಮ್ಮು