Advertisement

ಕಣಿವೆ ರಾಜ್ಯದಲ್ಲಿ ಮೇಘಸ್ಫೋಟಕ್ಕೆ 6 ಬಲಿ

05:10 AM Jul 21, 2017 | Team Udayavani |

ಜಮ್ಮು: ಜಮ್ಮು -ಕಾಶ್ಮೀರದ ದೋಡ ಜಿಲ್ಲೆಯಲ್ಲಿನ ತರ್ತಿ ಎಂಬಲ್ಲಿ ಸಂಭವಿಸಿದ ಮೇಘ ಸ್ಫೋಟ 6 ಮಂದಿಯನ್ನು ಬಲಿತೆಗೆದುಕೊಂಡಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಕೆಲವರು ಅವಶೇಷಗಳಡಿ ಸಿಲುಕಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆ. 6 ಮನೆಗಳು, 2 ಅಂಗಡಿ, ಒಂದು ಶಾಲೆಗೆ ಹಾನಿಯಾಗಿವೆ. ಮೇಘಸ್ಫೋಟದಿಂದ ಪ್ರವಾಹ ಉಂಟಾಗಿ ರಾಷ್ಟ್ರೀಯ ಹೆದ್ದಾರಿ ಸೇರಿ ಬಹಳಷ್ಟು ಪ್ರದೇಶಗಳು ಮುಳುಗಡೆಯಾಗಿವೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next