Advertisement

ಜಮಖಂಡಿ: ಅಯೋಧ್ಯೆ-ಕನ್ಯಾಕುಮಾರಿವರೆಗೆ ಸೈಕಲ್‌ ಯಾತ್ರೆ

06:00 PM Jul 13, 2023 | Team Udayavani |

ಜಮಖಂಡಿ: ರಾಮನು ಅಂದು ವನವಾಸದಲ್ಲಿ ಸಂಚರಿಸಿದ ವನದ ದಾರಿಯಲ್ಲಿ ಸೈಕಲ್‌ ಮೂಲಕ ಉತ್ತರಪ್ರದೇಶದ
ಯುವಕನೊಬ್ಬ ಅಯೋಧ್ಯೆಯಿಂದ ಕನ್ಯಾಕುಮಾರಿವರೆಗೆ ಸುದೀರ್ಘ‌ ಯಾತ್ರೆ ಕೈಗೊಂಡಿದ್ದು, ಜಮಖಂಡಿ ನಗರಕ್ಕೆ ಆಗಮಿಸುವ ಮೂಲಕ ರಾಮತೀರ್ಥದಲ್ಲಿರುವ ರಾಮನ ಪಾದುಕೆ ಸ್ಥಳಕ್ಕೆ ಭೇಟಿ ನೀಡಿ ದರ್ಶನ ಪಡೆದರು.

Advertisement

ಉತ್ತರಪ್ರದೇಶದ ಅಯೋಧ್ಯೆ ನಗರದ ನಿವಾಸಿ ಅಭಿಷೇಕ ಸಾವಂತ ಶ್ರೀವಾತ್ಸವ್‌ ವೃತ್ತಿಯಲ್ಲಿ ಪಂಜಾಬ್‌ ಕೇಸರಿ ಪತ್ರಿಕೆ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ರಜೆಯೊಂದಿಗೆ ಸೈಕಲ್‌ ಯಾತ್ರೆ ಕೈಗೊಂಡಿದ್ದಾರೆ. ಅಯೋಧ್ಯೆ ಡೈರಿ ಟೂರಿಸ್ಟ್‌ ವೆಲ್ಪೇರ್‌ ಅಸೋಸಿಯೇಷನ್‌ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.

ಏ.6ರಂದು ಆರಂಭಿಸಿರುವ ಸೈಕಲ್‌ ಯಾತ್ರೆ ಮೂಲಕ 93 ದಿನದಲ್ಲಿ ಈಗಾಗಲೇ 6 ಸಾವಿರ ಕಿ.ಮೀ ಯಾತ್ರೆ ಸಂಚರಿಸಿದ್ದು ಇನ್ನೂ 2.5 ಸಾವಿರ ಕಿ.ಮೀ ಸಂಚರಿಸಬೇಕಿದೆ. ರಾಮನ 12 ವರ್ಷದ ವನವಾಸದಲ್ಲಿ ಸಂಚರಿಸಿದ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡುವ ಗುರಿ ಹೊಂದಿದ್ದಾರೆ. ಶ್ರೀರಾಮ ಅಯೋಧ್ಯೆಯಿಂದ ಕನ್ಯಾಕುಮಾರಿವರೆಗೆ ಕಾಡು, ನಾಡು, ಬೆಟ್ಟ-ಗುಡ್ಡಗಳ ನಡುವೆ ಸಂಚರಿಸಿದ
ದಾರಿಯಲ್ಲಿ ನಿಮಾರ್ಣಗೊಂಡಿರುವ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿರುವ ಮಹಿಮೆ ಅರಿಯುವ ಮೂಲಕ ರಾಮನ ಮಹಿಮೆ ಬಣ್ಣಿಸುತ್ತ ಸಾಗುತ್ತಿರುವುದು ವಿಷೇಷವಾಗಿದೆ.

ಸ್ಪರ್ಧಾತ್ಮಕ ಯುಗದಲ್ಲಿ ರಾಮನ ಮಹಿಮೆ ಇಂದಿನ ಯುವಕರಿಗೆ ಅವಶ್ಯಕತೆ ಪರಿಕಲ್ಪನೆಯಲ್ಲಿ ಯಾತ್ರೆ ಕೈಗೊಂಡಿದ್ದಾರೆ. ಯುವ ಪೀಳಿಗೆ ರಾಮ ಸಂಚರಿಸಿದ ಸ್ಥಳಗಳ ಪರಿಚಯ ಜೊತೆಗೆ ರಾಮನ ಬಗ್ಗೆ ಜನರಲ್ಲಿರುವ ತಪ್ಪು ಸಂದೇಶ ದೂರ ಮಾಡಲು ಕ್ಷೇತ್ರಗಳಿಗೆ ಸಂಚರಿಸುತ್ತಿದ್ದೇನೆ ಎನ್ನುತ್ತಾರೆ ಅಭಿಷೇಕ. ಯಾತ್ರೆ ಕೈಗೊಂಡಿರುವ ಅಭಿಷೇಕಗೆ ಎಲ್ಲ ರೀತಿಯ ಸಹಾಯ, ಸಹಕಾರ ಲಭಿಸುತ್ತಿದ್ದು, ಬರಿಗೈಯಲ್ಲಿ ಆರಭಿಸಿದ ಯಾತ್ರೆಗೆ ಜನಸ್ಪಂದನೆ ಸಿಕ್ಕಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಆರ್ಥಿಕ ಸಹಾಯ, ವಸತಿ, ಊಟ, ಉಪಹಾರ ನೀಡುವ ಮೂಲಕ ಅಂದಾಜು 35 ಸಾವಿರ ವಂತಿಕೆ ಸಂಗ್ರಹವಾಗಿದೆ.

ಉತ್ತರಪ್ರದೇಶ ಮೂಲಕ ಆರಂಭಿಸಿದ ಯಾತ್ರೆ ಮಧ್ಯಪ್ರದೇಶ, ಛತ್ತೀಸಗಡ, ತೆಲಂಗಾಣ, ಮಹಾರಾಷ್ಟ್ರ ಮೂಲಕ ಕರ್ನಾಟಕಕ್ಕೆ
ಆಗಮಿಸಿದ್ದಾರೆ.ಈ ಸಂದರ್ಭದಲ್ಲಿ ಅಜಯ ಕಡಪಟ್ಟಿ, ಶೈಲೇಶ ಆಪ್ಟೆ, ಶಂಕರ ಕಾಳೆ, ವಿನಾಯಕ ಗೌವಳಿ, ಸಿದ್ದು ನ್ಯಾಮಗೌಡ,
ಶ್ರೀಧರ್‌ ಕಂಬಿ, ವೀರೇಶ ಕಲೂತಿ, ಶ್ರೀಶೈಲ ಗಡಾದ, ಪ್ರಭೂಜಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next