ವಾಷಿಂಗ್ಟನ್: ಬಾಹ್ಯಾಕಾಶದ ಅಧ್ಯಯನಕ್ಕೆ ತೆರಳಿರುವ ನಾಸಾದ ಜೇಮ್ಸ್ ವೆಬ್ ದೂರದರ್ಶಕವು ನಕ್ಷತ್ರಗಳ ರೂಪುಗೊಳ್ಳುವಿಕೆಗೆ ಸಂಬಂಧಿಸಿದ ಹೊಸ ಮಾಹಿತಿಯನ್ನು ರವಾನಿಸಿದೆ.
ಇತ್ತೀಚೆಗೆ ಈ ಟೆಲಿಸ್ಕೋಪ್ ಕಾರ್ಟ್‌ವ್ಹೀಲ್ ತಾರಾಪುಂಜ ಮತ್ತು ಅದರ ಅಕ್ಕಪಕ್ಕದಲ್ಲೇ ಇರುವ ಎರಡು ಸಣ್ಣ ನಕ್ಷತ್ರಪುಂಜಗಳ ಮನಮೋಹಕ ಚಿತ್ರಗಳನ್ನು ಸೆರೆಹಿಡಿದಿದೆ.
ಕೋಟ್ಯಂತರ ವರ್ಷಗಳಲ್ಲಿ ಗ್ಯಾಲಕ್ಸಿಗಳು ಹೇಗೆ ವಿಕಸನಗೊಂಡವು ಎಂಬುದನ್ನು ಅಧ್ಯಯನ ಮಾಡಲು ಈ ಚಿತ್ರಗಳು ನೆರವಾಗಲಿದೆ ಎಂದು ನಾಸಾ ತಿಳಿಸಿದೆ.
500 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಕಾರ್ಟ್‌ವ್ಹೀಲ್ ನಕ್ಷತ್ರಪುಂಜ ಹೇಗಿದೆ, ಅದರ ಸ್ವರೂಪವೇನು ಎಂಬ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದೂ ವಿಜ್ಞಾನಿಗಳು ಹೇಳಿದ್ದಾರೆ.
ಜೇಮ್ಸ್ ವೆಬ್ ರವಾನಿಸಿರುವ ಚಿತ್ರಗಳನ್ನು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ತನ್ನ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದೆ.