Advertisement

James Webb: ಬಹುದೂರದ ನಕ್ಷತ್ರ ಸೆರೆಹಿಡಿದ ಜೇಮ್ಸ್‌ ವೆಬ್‌ 

08:13 PM Aug 10, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ನಾಸಾ) ನಿರ್ಮಿಸಿರುವ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌, ಅತಿದೂರದ ನಕ್ಷತ್ರವೊಂದನ್ನು ಸೆರೆಹಿಡಿದಿದೆ. ಈ ನಕ್ಷತ್ರ ಸೂರ್ಯನಿಗಿಂತ 2 ಪಟ್ಟು ಹೆಚ್ಚು ಬಿಸಿಯಾಗಿದೆ ಎಂದು ತಿಳಿಸಿದೆ. ಸನ್‌ರೈಸ್‌ ಆರ್ಕ್‌ ಎನ್ನುವ ನಕ್ಷತ್ರಪುಂಜದಲ್ಲಿ ಪತ್ತೆಯಾಗಿರುವ ಈ ಆಕಾಶಕಾಯವನ್ನು ಎರೆಂಡಲ್‌ ಎಂದು ಜೇಮ್ಸ್‌ ವೆಬ್‌ ಗುರುತಿಸಿದ್ದು, ಇದಕ್ಕೂ ಮುನ್ನ ಹಬಲ್‌ ಸ್ಪೇಸ್‌ ಟೆಲಿಸ್ಕೋಪ್‌ ಇದನ್ನು ಪತ್ತೆಹಚ್ಚಿತ್ತು.

Advertisement

ನಭೋಮಂಡಲದ ಮಹಾಸ್ಫೋಟದ ನಂತರದ ಒಂದು ಶತಕೋಟಿ ವರ್ಷಗಳ ಅವಧಿಯಿಂದಲೂ ಈ ಆಕಾಶಕಾಯವಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಲ್ಲದೇ, ಬಿ ಪ್ರಕಾರದ ನಕ್ಷತ್ರ ಎನ್ನಲಾಗಿರುವ ಈ ಆಕಾಶಕಾಯ ಸೂರ್ಯನಿಗಿಂತ 2 ಪಟ್ಟು ಹೆಚ್ಚು ಬಿಸಿ ಮಾತ್ರವಲ್ಲದೇ, 1 ದಶಲಕ್ಷ ಪಟ್ಟು ಹೆಚ್ಚು ಪ್ರಕಾಶಮಾನವಾಗಿದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next