Advertisement

ಹವ್ಯಾಸಿ ಕಲಾವಿದರ ಜಾಂಬವತಿ ಕಲ್ಯಾಣ

06:00 AM Apr 27, 2018 | |

ಚೇಂಪಿಯ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠ ಶ್ರೀಸಂಯಮೀಂದ್ರ ತೀರ್ಥ ಶ್ರೀಪಾದರ ವಸಂತೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಎ.12ರಂದು ಜಿ.ಎಸ್‌.ಬಿ ಸಮಾಜ ಬಾಂಧವರ ಹಾಗೂ ಭಜನಾ ಮಂಡಳಿಯ ಸದಸ್ಯರ ಕೂಡುವಿಕೆಯಿಂದ “ಜಾಂಬವತಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.

Advertisement

ಕೋಟ ಸುಜಯೀಂದ್ರ ಹಂದೆಯವರ ನಿರ್ದೇಶನ ಹಾಗೂ ಭಾಗವತಿಕೆಯಲ್ಲಿ ನಡೆದ ಈ ಪ್ರದರ್ಶನದಲ್ಲಿ ದೇವದಾಸ ಕೂಡ್ಲಿಯವರು ಮದ್ದಳೆಯಲ್ಲಿ ಹಾಗೂ ಕ್ರಷ್ಣಾನಂದ ಶೆಣೈಯವರು ಚಂಡೆಯಲ್ಲಿ ಸಹಕರಿಸಿದರು. ಬಾಲಕೃಷ್ಣ ನಾಯಕ ಹಂದಾಡಿಯವರು ವೇಷಭೂಷಣದ ಉಸ್ತುವಾರಿ ವಹಿಸಿಕೊಂಡಿದ್ದರು.

ಮಂದಹಾಸಭರಿತ ಬಾಲಗೋಪಾಲನಾಗಿ ವರುಣ್‌ ಪೈ ,ಪೀಠಿಕಾ ಸ್ತ್ರೀಗಳಾಗಿ ಮೃದುಲಾ ಪೈ ಮತ್ತು ಶರಣ್ಯಾ ಭಟ್‌ ಮನಸೂರೆಗೊಂಡರು. ಅವಿನಾಶ್‌ ಶಾನಭಾಗ್‌ ಮತ್ತು ಆದಿತ್ಯ ಹೆಗ್ಡೆ ಇವರ ಒಡ್ಡೋಲಗ ಕುಣಿತ ಸುಂದರವಾಗಿ ಮೂಡಿಬಂತು. ಸತ್ರಾಜಿತ ರಾಜನಾಗಿ ನಿತ್ಯಾನಂದ ಶಾನಭಾಗ್‌ ಅವರ ಠೀವಿಯ ಅಭಿನಯ ಉತ್ತಮವಾಗಿತ್ತು.ಚಾರಕರಾಗಿ ವಿN°àಶ ಶಾನಭಾಗ್‌ ಮತ್ತು ಪ್ರಸಾದ ಶಾನಭಾಗ್‌ ಇವರ ಹಾಸ್ಯ ಮುದನೀಡಿತು.ಪ್ರಸೇನನಾಗಿ ರಾಘವೇಂದ್ರ ಶಾನುಭಾಗರ ಕುಣಿತ ಪ್ರೇಕ್ಷಕರ ಕರತಾಡನ ಪಡೆಯುವಲ್ಲಿ ಯಶಸ್ವಿಯಾಯಿತು. ಗಿಳಿಯಾರು ಗೋಪಾಲ ಪೈಯವರ ಸಿಂಹದ ವೇಷ ಉತ್ತಮವಾಗಿತ್ತು. ಬಲರಾಮನ ವೇಷ ಮಾಡಿದ ಚೇಂಪಿ ರಮಾನಂದ ಭಟ್‌ ತಂಡದ ಹಿರಿಯ ಕಲಾವಿದರಾಗಿದ್ದು, ಈ ಯಕ್ಷಗಾನ ಪ್ರದರ್ಶನದ ರೂವಾರಿಯಾಗಿದ್ದರು. ಕೃಷ್ಣನಾಗಿ ಸಾಸ್ತಾನ ಅನಂತ ನಾಯಕ್‌ ಅವರು ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿದ್ದರು. ಸಾತ್ಯಕಿಯಾಗಿ ಪುರಂದರ ಶಾನುಭಾಗ್‌ ಹಾಗೂ ಯಾದವನಾಗಿ ಅಭಯ ಶಾನುಭಾಗ್‌ ಪಾತ್ರ ನಿರ್ವಹಿಸಿದರು.ಜಾಂಬವಂತನಾಗಿ ವೆಂಕಟೇಶ ಭಟ್‌ ಇವರ ಅಭಿನಯ ಮತ್ತು ಕುಣಿತ ಉತ್ತಮವಾಗಿ ಮೂಡಿಬಂತು. ಜಾಂಬವತಿಯಾಗಿ ಕುಮಾರಿ ಶರಣ್ಯಾ ಭಟ್‌ ಮುದ್ದುಮುದ್ದಾಗಿ ಪಾತ್ರ ನಿರ್ವಹಿಸಿದರು.

ಹೀಗೆ ಹವ್ಯಾಸಿ ಕಲಾವಿದರಿಂದ ಮೂಡಿಬಂದ ಈ ಕಲಾಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಧರಿಸಿದ ವೇಷಭೂಷಣಕ್ಕೆ, ಕಿರೀಟದೊಂದಿಗೆ ಬಿಗಿದುಕಟ್ಟಿದ್ದ ದಾರಕ್ಕೆ ಅನನುಭವಿ ಪಾತ್ರಧಾರಿಗಳು ಸುಸ್ತಾಗಿದ್ದಂತೂ ಸತ್ಯ.ಒಂದಿಬ್ಬರನ್ನು ಹೊರತು ಉಳಿದವರು 30 ವರ್ಷಗಳ ನಂತರ ಬಣ್ಣ ಹಚ್ಚಿದವರಾದರೆ ಇನ್ನು ಕೆಲವರು ಮೊದಲ ಬಾರಿಗೆ ಬಣ್ಣ ಹಚ್ಚಿದವರು. ಐದನೇ ತರಗತಿ ಬಾಲಕನಿಂದ ಇಂಜಿನಿಯರಿಂಗ್‌ ಓದುತ್ತಿರುವ ವಿದ್ಯಾರ್ಥಿ, ತರುಣರು, ನಡುವಯಸ್ಸಿನವರು, ನಿವೃತ್ತ ಜೀವನ ನಡೆಸುತ್ತಿರುವವರು ಹೀಗೆ ಎಲ್ಲರೂ ಒಂದಾಗಿ ನೀಡಿದ ಈ ಪ್ರದರ್ಶನ ಸರ್ವತ್ರ ಪ್ರಶಂಸೆಗೆ ಪಾತ್ರವಾಯಿತು.                              

 ಶಾಂತಲಾ ಎನ್‌. ಹೆಗ್ಡೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next