Advertisement

Jamakhandi; ಕೋಟ್ಯಂತರ ಮೌಲ್ಯದ ಸ್ವತ್ತು ಮರಳಿಸಿದ ಖಾಕಿ

05:27 PM Nov 23, 2023 | Team Udayavani |

ಜಮಖಂಡಿ: 2.48 ಕೋಟಿ ಮೌಲ್ಯದ ಚರಾಸ್ತಿಗಳಲ್ಲಿ 1.12 ಕೋಟಿ ಮೌಲ್ಯದ ಚರಾಸ್ತಿಗಳನ್ನು ಆರೋಪಿಗಳಿಂದ
ವಶಪಡಿಸಿಕೊಂಡು ಫಿರ್ಯಾದುದಾರರಿಗೆ ಹಿಂತಿರುಗಿಸುವ ಮೂಲಕ ಜಮಖಂಡಿ ಉಪ ವಿಭಾಗದ ಪೊಲೀಸರು ಸಾರ್ವಜನಿಕ ಮೆಚ್ಚುಗೆ ಗಳಿಸಿದ್ದಾರೆ.

Advertisement

ಉಪ ವಿಭಾಗದಲ್ಲಿ ಬರುವ ಎಂಟು ಪೊಲೀಸ್‌ ಠಾಣೆ ವ್ಯಾಪ್ತಿಯ ಫಿರ್ಯಾದುದಾರರು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದೊಂದು ವರ್ಷದ ಅವಧಿಯಲ್ಲಿ ಮುಧೋಳ, ರಬಕವಿ-ಬನಹಟ್ಟಿ, ಸಾವಳಗಿ, ಮಹಾಲಿಂಗಪುರ, ತೇರದಾಳ ಠಾಣೆಗಳಲ್ಲಿ ಅಂದಾಜು 2.48 ಕೋಟಿ ಮೌಲ್ಯದ ಒಟ್ಟು 157 ವಿವಿಧ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 1.12 ಕೋಟಿ ಮೌಲ್ಯದ 70 ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಜಮಖಂಡಿ ಉಪ ವಿಭಾಗ ಪೊಲೀಸ್‌ ಇಲಾಖೆ ಜಿಲ್ಲೆಗೆ ಪ್ರಥಮ
ಸ್ಥಾನದಲ್ಲಿದೆ.

ಉಪ ವಿಭಾಗದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ 1.06 ಲಕ್ಷ, ಸುಲಿಗೆ ಪ್ರಕರಣದಲ್ಲಿ 1.37 ಲಕ್ಷ, ರಾತ್ರಿ ಕಳ್ಳತನ ಪ್ರಕರಣದಲ್ಲಿ 3.66 ಲಕ್ಷ, ಹಗಲುಗಳ್ಳತನ 7.33 ಲಕ್ಷ, ಮನೆ ಕಳ್ಳತನ 1ಲಕ್ಷ, ಸಾದಾ ಕಳ್ಳತನದಲ್ಲಿ 2.93 ಲಕ್ಷ, ಜಾನುವಾರು ಕಳ್ಳತನದಲ್ಲಿ 13.19 ಲಕ್ಷ, ಮೋಟಾರ್‌ ವಾಹನ ಕಳ್ಳತನದಲ್ಲಿ 40.35 ಲಕ್ಷ, ಇತರೆ ಕಳ್ಳತನ ಪ್ರಕರಣದಲ್ಲಿ 3.03 ಲಕ್ಷ, ಸಿಆರ್‌ಪಿಸಿ 379 ಪ್ರಕರಣಗಳಲ್ಲಿ 3.55 ಲಕ್ಷ ಮತ್ತು ಅಟೆನ್ಶನ್‌ ಡೈವರ್ಷನ್‌ 1.54 ಲಕ್ಷ ಸೇರಿದಂತೆ ಒಟ್ಟು 1.12 ಕೋಟಿ ಮೌಲ್ಯದ ಚರಾಸ್ತಿ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಉಪ ವಿಭಾಗದ ಡಿಎಸ್‌ಪಿ ಶಾಂತವೀರ, ಸಿಪಿಐಗಳಾದ ಮಲ್ಲಪ್ಪ ಮಡ್ಡಿ (ಜಮಖಂಡಿ ವೃತ್ತ), ಎಸ್‌.ಎಸ್‌. ಬಳಿಗಾರ (ಬನಹಟ್ಟಿ ವೃತ್ತ), ಎಂ.ಎನ್‌. ಶಿರಹಟ್ಟಿ (ಮುಧೋಳ ವೃತ್ತ), ಪಿಎಸೈಗಳಾದ ಎನ್‌.ಬಿ. ಖಿಲಾರಿ (ಜಮಖಂಡಿ ಶಹರ), ಕೆ.ಟಿ. ಮಾನೆ(ಜಮಖಂಡಿ ಶಹರ), ಮಹೇಶ ಸಂಖ(ಜಮಖಂಡಿ ಗ್ರಾಮೀಣ), ಎಎಸೈ ಎಚ್‌.ಎಂ. ಹೊಸಮನಿ (ಜಮಖಂಡಿ ಗ್ರಾಮೀಣ), ಜಿ.ಎಂ.ಪೂಜಾರಿ (ಸಾವಳಗಿ ಠಾಣೆ), ಎನ್‌.ಎಲ್‌. ವಾಲೀಕಾರ (ಸಾವಳಗಿ ಠಾಣೆ),
ಪಿಎಸೈಗಳಾದ ಆರ್‌.ಎಸ್‌. ಖೋತ, ವಿಜಯ ಕಾಂಬಳೆ, ಪಿ.ಬಿ. ಪೂಜಾರಿ, ಪ್ರವೀಣ ಬೀಳಗಿ, ಎಲ್‌. ಮಧು, ಅಜೀತ ಹೊಸಮನಿ, ಕೆ.ಬಿ. ಮಾಂಗ, ಜೆ.ಪಿ. ಸಗರಿ, ಸಿದ್ದಪ್ಪ ಯಡಹಳ್ಳಿ ಸಹಿತ ಮೂರು ವೃತ್ತ ನಿರೀಕ್ಷಕರ ಮತ್ತು ಎಂಟು ಪೊಲೀಸ್‌ ಠಾಣೆಗಳ ಅಧಿಕಾರಿಗಳು, ಆರಕ್ಷಕರು ತನಿಖಾ ತಂಡದಲ್ಲಿ ಇದ್ದರು.

ಉಪ ವಿಭಾಗದಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ವ್ಯಾಪ್ತಿಯ ಪೊಲೀಸ್‌ ಠಾಣೆಗಳ ಅಧಿಕಾರಿಗಳಿಗೆ ಎಸ್‌ಪಿ ನಿರ್ದೇಶನದಂತೆ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಲಾಯಿತು. ಹೆಚ್ಚಿನ
ಪ್ರಮಾಣದಲ್ಲಿ ಪ್ರಕರಣ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ಅವರಿಂದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ವರ್ಷದ ಅವಧಿಯಲ್ಲಿ 157 ವಿವಿಧ ಪ್ರಕರಣಗಳಲ್ಲಿ 70 ಪತ್ತೆ ಹಚ್ಚಿ 1.12 ಕೋಟಿ ಮೌಲ್ಯದ ಚರಾಸ್ತಿ ವಶಪಡಿಸಿಕೊಳ್ಳಲಾಗಿದೆ.
ಈ. ಶಾಂತವೀರ, ಡಿವೈಎಸ್‌ಪಿ, ಉಪ ವಿಭಾಗ ಜಮಖಂಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next