ಜಮಖಂಡಿ: ಕೋವಿಡ್ ವೈರಸ್ ಸಾಂಕ್ರಾಮಿಕ ರೋಗ ದೇಶದಿಂದ ಬೇಗನೆ ತೊಲಗಲಿ. ಪ್ರತಿನಿತ ಜನರು ನೆಮ್ಮದಿಯಿಂದ ಜೀವನ ಸಾಗಿಸಲಿ ಎಂದು ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ನಗರದ ಮುತ್ತಿನಕಂತಿಮಠದಲ್ಲಿ ಭಾರತ ಮಾತೆ ಮತ್ತು ಗೋವುಗಳಿಗೆ ದೀಪಪೂಜೆ, ವಿಶೇಷ ಪುಷ್ಪ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಶ್ರೀಗಳು, ವಿಶ್ವಕ್ಕೆ ಅಂಟಿಕೊಂಡಿರುವ ಕೊರೊನಾ ರೋಗದಿಂದ ಪ್ರತಿಯೊಬ್ಬರ ಜೀವನ ತೊಂದರೆಯಲ್ಲಿದೆ. ಅನಾದಿ ಕಾಲದಿಂದ ಸಂಕಷ್ಟಗಳನ್ನು ಎದುರಿಸುವ ಭಾರತ ದೇಶದ ಮಣ್ಣಿನಲ್ಲಿದೆ ಎಂದರು.
ಭಾರತ ದೇಶಕ್ಕೆ ಯಾವುದೇ ಗಂಡಾಂತರ ಬಂದರೂ ತಡೆಯುವ ಶಕ್ತಿಯಿದ್ದು, ಕೊರೊನಾ ವೈರಸ್ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಡೆಗಟ್ಟುವ ಸಲುವಾಗಿ ಅವಿರತವಾಗಿ ಶ್ರಮಿಸುತ್ತಿವೆ. ಎಲ್ಲರು ಮನೆಯಲ್ಲಿ ಇದ್ದುಕೊಂಡು ಕೊರೊನಾ ಹೊಡೆದೊಡಿಸಬೇಕಾಗಿದೆ. ದೇಶದ ಸೈನಿಕರು ಗಡಿರಕ್ಷಣೆ ಮಾಡಿದ ರೀತಿ ಯಲ್ಲಿ ಪ್ರಾಮಾಣಿಕರಾಗಿ ಮನೆಯಲ್ಲಿದ್ದುಕೊಂಡು ಸೈನಿಕರಂತೆ ಹೋರಾಡಿ ಕೊರೊನಾ ರೋಗ ನಿವಾರಣೆಗೆ ಶ್ರಮಿಸಬೇಕು ಎಂದರು.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಜನರಲ್ಲಿ ಭೀತಿ ಮೂಡಿಸಿದೆ. ಮನೆಯೆ ಮಂತ್ರಾಲಯವನ್ನು ಪಾಲಿಸಿದರೇ ಮಾತ್ರ ಮನುಷ್ಯ ಕುಲ ಉಳಿಯಲು ಸಾಧ್ಯ. ಬದ್ಧತೆ ತೋರಿಸುವಲ್ಲಿ ವಿಫಲರಾದರೇ ಕೊರೊನಾ ನಮ್ಮನ್ನು ಬಲಿಪಡೆಯಲಿದೆ. ಎಲ್ಲರೂ ಆತ್ಮಸಾಕ್ಷಿಯಾಗಿ ಪ್ರಾಮಾಣಿಕರಾಗಿ ಸರಕಾರ ನಿಗದಿ ಪಡಿಸಿದ ದಿನಗಳವರೆಗೆ ಮನೆಯಲ್ಲಿ ಇದ್ದುಕೊಂಡು ಕೊರೊನಾ ರೋಗದ ವಿರುದ್ದ ಜಯ ಗಳಿಸೋಣ ಎಂದರು. ಇದೇ ಸಂದರ್ಭದಲ್ಲಿ ಹತ್ತಾರು ಭಕ್ತರು ಇದ್ದರು.