Advertisement

ನಾಲ್ವರು ಸಹೋದರರ ಕೊಲೆ ಪ್ರಕರಣ|ಹತ್ಯೆಗೆ ಬಾಡಿಗೆ ಹಂತಕರ ಬಳಕೆ?

02:01 PM Aug 30, 2021 | Team Udayavani |

ಜಮಖಂಡಿ: ಮಧುರಖಂಡಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮುದರಡ್ಡಿ ಮನೆತನದ ನಾಲ್ವರು ನಾಲ್ವರು ಸಹೋದರರನ್ನು ಗ್ರಾಮದ ಸಣ್ಣೆರಿ ರಸ್ತೆ ತೋಟದ ಜಾಗದಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದು, ಹತ್ಯೆಗೆ ಬಾಡಿಗೆ ಹಂತಕರನ್ನು ಬಳಕೆ ಮಾಡಲಾಗಿದೆ.

Advertisement

ಗ್ರಾಮದ ಮುದರಡ್ಡಿ ಹಾಗೂ ಪುಟಾಣಿ ಎರಡು ಕುಟುಂಬದ ನಡುವೆ ಕೆಲವು ವರ್ಷಗಳಿಂದ ಖರೀದಿ ಆಸ್ತಿ ಕಲಹವಿದ್ದು,ಗ್ರಾಮದ ಹಿರಿಯರ ನಡುವೆ ಹಲವಾರು ಸಲ ಸಂಧಾನ ವಿಫಲಗೊಂಡ ಹಿನ್ನೆಲೆಯಲ್ಲಿ ವಿವಾದ ನಗರದ ಸಿವಿಲ್‌ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ಕುಟುಂಬಗಳ ನಡುವಿನ ವೈಮನಸು ವಿಕೋಪಕ್ಕೆ ತಲುಪಿದ ಹಿನ್ನೆಲೆಯಲ್ಲಿ ಮುದರಡ್ಡಿ ಕುಟುಂಬದ ನಾಲ್ವರನ್ನು ಪುಟಾಣಿ ಕುಟುಂಬದವರು ಕೊಲೆ ಮಾಡಿದ್ದಾರೆ ಮಾತುಗಳು ಕೇಳಿ ಬಂದಿವೆ.

ಮಾರಾಮಾರಿಯಲ್ಲಿ 9 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮಖಂಡಿ ಪೊಲೀಸ್‌ ಇಲಾಖೆಯ ವೃತ್ತ ನಿರೀಕ್ಷರ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.

ವಿವಾದಕ್ಕೆ ಮೂಲ ಕಾರಣ: ತಾಲೂಕಿನ ಮಧುರಖಂಡಿ ಗ್ರಾಮದ ಪುಟಾಣಿ ಕುಟುಂಬದ ಸದಸ್ಯರಿಂದ 2.25 ಎಕರೆ ಖರೀದಿ ಮಾಡಿಕೊಂಡಿದ್ದ ಮುದರಡ್ಡಿ ಕುಟುಂಬ ಹೆಚ್ಚುವರಿಯಾಗಿ 24 ಗುಂಟೆ ಜಮೀನು ಬಳಕೆ ಮಾಡಿಕೊಂಡಿದೆ. ಕಬಳಿಸಿರುವ ಜಾಗವನ್ನು ಬಿಟ್ಟುಕೊಡಬೇಕೆಂದು ಪುಟಾಣಿ ಕುಟುಂಬದವರು ಕೇಳಿದಾಗ ಖರೀದಿ ನೀಡಿದವರನ್ನು ಕೇಳಿ ನಮ್ಮನ್ನು ಕೇಳಬೇಡಿ ಎಂದಿದ್ದಾರೆ. ಮಾತಿಗೆ ಮಾತು ಬೆಳೆದು ಆರಂಭಗೊಂಡಿದ್ದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.

ಮುದರಡ್ಡಿ ಮತ್ತು ಪುಟಾಣಿ ಕುಬುಂಬದ ಸದಸ್ಯರ ನಡುವೆ ಜಗಳ ಕಳೆದ ಎರಡು ದಶಕಗಳಿಂದ ನಿರಂತವಾಗಿ ನಡೆಯುತ್ತಿದೆ. ಪೊಲೀಸ್‌ ಠಾಣೆಯಲ್ಲಿ ದೂರ ಕೂಡ ದಾಖಲಾಗಿ 2014ರಲ್ಲಿ ರಾಜಿ ಮಾಡಲಾಗಿತ್ತು. ಆದರೇ ರಾಜಿಗೆ ಒಪ್ಪದ ಎರಡು ಕುಟುಂಬಗಳು ಮತ್ತೇ ಹೊಡೆ‌ದಾಟದಲ್ಲಿ ತೊಡಗಿಕೊಳ್ಳುವ ಮೂಲಕ ಶನಿವಾರ ಕೊಲೆಯಲ್ಲಿ ಅಂತ್ಯವಾಗಿದೆ.

Advertisement

ಬಾಡಿಗೆ ಹಂತಕರ ಬಳಕೆ: ತಾಲೂಕಿನ ಮಧುರಖಂಡಿ ಗ್ರಾಮದ ಮುದರಡ್ಡಿ ಕುಟುಂಬದವರನ್ನು ಹತ್ಯೆ ಮಾಡಲು ಮಹಾರಾಷ್ಟ್ರದಿಂದ ಕೆಲವು ಬಾಡಿಗೆ ಹಂತಕರನ್ನು ಕರೆಸಿಕೊಂಡು ಬಂದಿದ್ದರು ಎನ್ನಲಾಗಿದೆ. ವಿವಿಧ ಮಾರಕಾಸ್ತ್ರ ಗಳೊಂದಿಗೆ ಆಗಮಿಸಿದ್ದ ಹಂತಕರು ಇಬ್ಬರು ಸಹೋದರರು ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಅವರೊಂದಿಗೆ ಗಲಾಟೆ ಮಾಡಿದ್ದಾರೆ. ಮುದರಡ್ಡಿ ಸಹೋದರರು ತಮ್ಮ ಇನ್ನಿಬ್ಬರ ಸಹೋದರರಿಗೆ ಫೋನ್‌ಮಾಡಿ ಕೂಡಲೇ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಆ ಇಬ್ಬರು ಸಹೋದರರು ಸ್ಥಳಕ್ಕೆ ಆಗಮಿಸುವ ಮುಂಚೆ ಬಾಡಿಗೆ ಹಂತಕರು ಈ ಇಬ್ಬರನ್ನು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಆಗಿಮಿಸಿದ ಮತ್ತೇ ಇಬ್ಬರು ಸಹೋದರರನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next