Advertisement

ಭಾರತದೊಳಗೆ ಜೆಎಂಬಿ ಲಗ್ಗೆ

01:02 AM Jun 01, 2019 | Team Udayavani |

ಹೊಸದಿಲ್ಲಿ: ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಬಾಂಗ್ಲಾದೇಶದ ಉಗ್ರ ಸಂಘಟನೆ ಸಂಘಟನೆ “ಜಮ್ಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ’ (ಜೆಎಂಬಿ), ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ತ್ರಿಪುರಾಗಳ ಗಡಿಭಾಗಗಳಲ್ಲಿ ತನ್ನ ಶಾಶ್ವತ ನೆಲೆಗಳನ್ನು ಸ್ಥಾಪಿಸಲು ಮುಂದಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಭಾರತ-ಬಾಂಗ್ಲಾ ಗಡಿ ಪ್ರದೇಶದಿಂದ ಭಾರತದೊಳಗೆ ಸುಮಾರು 10 ಕಿ.ಮೀ. ದೂರದಲ್ಲಿ ಈ ನೆಲೆಗಳನ್ನು ಸ್ಥಾಪಿಸಲು ಅವುಗಳು ಹವಣಿಸುತ್ತಿವೆ. ಜೆಎಂಬಿಯ ಮುಖ್ಯಸ್ಥ ಸಲೌದ್ದೀನ್‌ ಸಲೇಹಿನ್‌, ಪಾಕಿಸ್ತಾನದ ಲಷ್ಕರ್‌-ಎ-ತೊಯ್ಯಬಾ ಜತೆಗೆ ಕೈ ಜೋಡಿಸಿದ್ದಾನೆ ಎಂದು “ದ ಹಿಂದುಸ್ಥಾನ್‌ ಟೈಮ್ಸ್‌’ ವರದಿ ಮಾಡಿದೆ. ಬಾಂಗ್ಲಾದಲ್ಲಿ ಆ ಸಂಘಟನೆ 2005ರಲ್ಲೇ ನಿಷೇಧಿಸ್ಪಟ್ಟಿದೆ.

Advertisement

ಶಂಕಿತ ಹೇಳಿದ ಸತ್ಯ: 2018ರ ಬೌದ್ಧ ಗಯಾದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ 12 ಶಂಕಿತರ ಮುಖ್ಯಸ್ಥ ಜಹೀದುಲ್‌ ಇಸ್ಲಾಂ, ವಿಚಾರಣೆ ವೇಳೆ ಈ ವಿಚಾರ ಬಾಯಿಬಿಟ್ಟಿದ್ದ. ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯ ಮುಸ್ಲಿಮರ ಮೇಲಿನ ದೌರ್ಜನ್ಯಗಳಿಗೆ ಪ್ರತೀಕಾರವಾಗಿ ಬೌದ್ಧ ನೆಲೆಗಳ ಮೇಲೆ ದಾಳಿ ನಡೆಸಲು ಜೆಎಂಬಿ ನಿರ್ಧರಿಸಿದೆ ಎಂದು ಆತ ಹೇಳಿದ್ದ ಎನ್ನಲಾಗಿದೆ.

ಶಾಶ್ವತ ನೆಲೆಗಳ ಸ್ಥಾಪನೆಗೂ ಮುನ್ನ, ಪಶ್ಚಿಮ ಬಂಗಾಳದ ಬುರ್ದವಾನ್‌, ಮುರ್ಶಿ ದಾಬಾದ್‌, ಅಸ್ಸಾಂನ ಡಾರಂಗ್‌ನ ಲಾರ್ಕುಚಿ, ಜೋಗಿಪರಾ, ಬಾಪೆìಟಾದ ಪಂಪಾರಾ ದಲ್ಲಿರುವ ಮಸೀದಿಗಳಲ್ಲಿ ವಿಧ್ವಂಸಕ ಕೃತ್ಯಗಳ ಬಗ್ಗೆ ಕೋರ್ಸ್‌ಗಳನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next