Advertisement

ನಿಷೇಧಿತ ಜಮಾತ್‌ ಎ ಇಸ್ಲಾಮಿಗೆ ಪಾಕ್‌, ಐಎಸ್‌ಐ ಜತೆ ಪ್ರಬಲ ಸಂಪರ್ಕ

07:06 AM Mar 09, 2019 | udayavani editorial |

ಹೊಸದಿಲ್ಲಿ : ಕೇಂದ್ರ ಸರಕಾರ ಈಚೆಗೆ ನಿಷೇಧಿಸಿರುವ ಜಮ್ಮು ಕಾಶ್ಮೀರದ ಜಮಾತ್‌ ಎ ಇಸ್ಲಾಮಿ ಸಂಘಟನೆಯು ಪಾಕಿಸ್ಥಾನದ ಐಎಸ್‌ಐ ಮತ್ತು ಹೊಸದಿಲ್ಲಿಯಲ್ಲಿನ ಪಾಕ್‌ ಹೈಕಮಿಶನ್‌ ಗೆ ಬಲವಾದ ನಂಟು ಹೊಂದಿದ್ದು, ರಾಜ್ಯದಲ್ಲಿನ ಪ್ರತ್ಯೇಕತಾವಾದವನ್ನು ಪ್ರೋತ್ಸಾಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಮ್ಮು ಕಾಶ್ಮೀರದಲ್ಲಿನ ಜಮಾತ್‌ ಎ ಇಸ್ಲಾಮಿ ಸಂಘಟನೆಯ ಅತ್ಯಂತ ಪ್ರಮುಖ ಸದಸ್ಯ ಸಂಸ್ಥೆ ಹುರಿಯತ್‌ ಕಾನ್ಫರೆನ್ಸ್‌ ಆಗಿದೆ. ಇದರ ಮುಖ್ಯಸ್ಥ ಸೈಯದ್‌ ಅಲಿ ಶಾ ಗೀಲಾನಿಯನ್ನು ನಿಷೇಧಿತ ಜೆಇಐ, ಒಂದು ಹಂತದಲ್ಲಿ ಜಮ್ಮು ಕಾಶ್ಮೀರದ ಆಮೀರ್‌ ಎ ಜಿಹಾದ್‌ (ಜಿಹಾದ್‌ ಮುಖ್ಯಸ್ಥ) ಎಂದು ಹೆಸರಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಶ್ಮೀರಿ ತರುಣರಿಗೆ ಶಸ್ತ್ರಾಸ್ತ್ರ ಪೂರೈಸುವುದಕ್ಕೆ ಸಾರಿಗೆ ಸೌಕರ್ಯ ಕಲ್ಪಿಸುವುದು, ತರಬೇತಿ ನೀಡುವುದು ಮತ್ತು ಶಸ್ತ್ರಾಸ್ತ್ರ ಪೂರೈಸುವುದು, ಪಾಕ್‌ ಐಎಸ್‌ಐ ಜತೆಗೆ ನಿರಂತರ ಮತ್ತು ಪ್ರಬಲ ಸಂಪರ್ಕ ಹೊಂದಿರುವುದು ಇವೇ ಮೊದಲಾದ ಕೃತ್ಯಗಳಲ್ಲಿ ಜಮಾತ್‌ ಎ ಇಸ್ಲಾಮಿ ಸಂಘಟನೆ ತೊಡಗಿತ್ತು; ಜತೆಗೆ ಪ್ರತ್ಯೇಕತಾವಾದಿ ನಾಯಕರು ದಿಲ್ಲಿಯನಲ್ಲಿನ ಪಾಕ್‌ ಹೈಕಮಿಶನ್‌ ಜತೆಗೆ ನಿರಂತರ ಸಂಪರ್ಕ ಹೊಂದುವುದಕ್ಕೆ ಅನುಕೂಲ ಮಾಡಿಕೊಡುವುದರಲ್ಲಿ ಸಂಘಟನೆ ತೊಡಗಿತ್ತು ಎಂದು ಹಿರಿಯ ಸರಕಾರಿ ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next