ಗೌರಿಬಿದನೂರು: ರಾಜ್ಯ ಸರ್ಕಾರ ಮಹತ್ವಾ ಕಾಂಕ್ಷಿ ಜಲಾಮೃತ ಯೋಜನೆ ಜಾರಿಗೆ ಮುಂದಾಗಿದ್ದು, ತಾಲೂಕಿನ ಹೊಸೂರು ಹೋಬಳಿ ರಮಾಪುರ ಗ್ರಾಪಂ ವ್ಯಾಪ್ತಿಯ ಕುದುರೆಬ್ಯಾಲ್ಯ, ಹೊಸ ಉಪ್ಪಾರಹಳ್ಳಿ, ಕುಂದಿಹಳ್ಳಿ, ಜೋಡಿಬಿಸಲಹಳ್ಳಿ ಗ್ರಾಮಗಳಲ್ಲಿ “ನಮ್ಮ ಗ್ರಾಮ ವನ್ಯಧಾಮ’ ಪರಿಕಲ್ಪನೆಯಲ್ಲಿ ಕೆರೆ ಜೀರ್ಣೋದಾಟಛಿರ, ಕೆರೆ ಬದುಗಳಲ್ಲಿ ಅರಣ್ಯೀಕರಣ, ಜಲಮೂಲಗಳ ಪುನಶ್ಚೇತನ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ನೀರಿನ ಬಗ್ಗೆ ಜನಜಾಗೃತಿ: ನೀರಿನ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಗಿಡಮರ ಉಳಿಸಲು ಜಲಸಂರಕ್ಷಣೆ, ಜಲಸಾಕ್ಷರತೆ, ಜಲ ಪುನಶ್ಚೇತನ ಹಾಗೂ ಜಲಮೂಲಗಳ ಸೃಜಿಸುವಿಕೆ ಈ ನಾಲ್ಕು ವಿಷಯ ಗಳ ಮೂಲಕ ಜಾಗೃತಿ ಮೂಡಿಸಲು ಕೆರೆ ಯನ್ನು ಕರ್ನಾಟಕದ ಭೂಪಟದ ಮಾದರಿ ಯಲ್ಲಿ ಪುನಶ್ಚೇತನಗೊಳಿಸಲಾಗಿದ್ದು, ಹೂಳು ತೆಗೆಸಿ ಕೆರೆಯ ಬದುಗಳಲ್ಲಿ ಸಸಿಗಳನ್ನು ನೆಟ್ಟು ಹಸಿರೀಕರಣಗೊಳಿಸಲಾಗಿದೆ.
ಈ ಯೋಜನೆಗೆ 6.60 ಲಕ್ಷ ವೆಚ್ಚ ಮಾಡಲಾಗಿದ್ದು, ಜಲಾಮೃತ ಯೋಜನೆಯಿಂ ದ ಜೋಡಿ ಬಸಲಹಳ್ಳಿಯ ಕೆರೆ ಅಂಚಿ ನಲ್ಲಿ ಅರಳಿ, ಆಲ, ಅತ್ತಿ, ನೇರಳೆ, ಹೊಂಗೆ, ಹುಣಿಸೆ, ಹಲಸು, ಹೂವರಸಿ, ಮಹಾಗನಿ, ನಿಂಬೆಗಿಡ, ನಾಗಲಿಂಗಪುಷ್ಪ, ಪಾರಿಜಾತ, ಗಸಗಸೆ, ಬಸವನಪಾದ ಸೇರಿದಂತೆ 28 ಜಾತಿಯ 500 ವಿವಿಧ ಸಸಿಗಳನ್ನು ನೆಡಲಾಗಿದೆ. ಕುಂದಿಹಳ್ಳಿ ಕೆರೆಯ ಅಂಚಿನಲ್ಲಿ 500 ಸಸಿ,ಕುದುರೆಬ್ಯಾಲ್ಯ-ಹೊಸಉಪ್ಪಾರಹ ಳ್ಳಿ ಕೆರೆ ಅಂಚಿನಲ್ಲಿ ಒಟ್ಟು 950 ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದೆ.
ಜಿಪಂ ಅಭಿವೃದಿ ಅನುದಾನದಿಂದ 1.5 ಲಕ್ಷದಲ್ಲಿ ಸ್ವಾಗತ ಕಮಾನು ಬಯಲುಸೀಮೆ ಮಳೆ ನಾಡಾಗಲಿ, ನಮ್ಮ ಗ್ರಾಮ ವನ್ಯಗ್ರಾಮವಾಗಲಿ ಎಂಬಂತೆ ಚಿತ್ರಿಸಲಾಗಿದೆ. ಕೆಲ ದಿನ ಗಳ ಹಿಂದೆ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಜಿಪಂ ಸಿಇಒ ಫೌಝೀಯಾ ತರುನ್ನುಮ್, ತಾಪಂ ಇಒ ಮುನಿರಾಜು ಭೇಟಿ ನೀಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಲಾಮೃತ ಗ್ರಾಮೀಣ ಪ್ರದೇಶದ ಕೆರೆ, ಕುಂಟೆ, ವನ ಇವುಗಳನ್ನು ಸಂರಕ್ಷಿಸಿ ಬೆಳೆಸಲು ಕಳೆದ ಜೂನ್ 5, 2019ರಲ್ಲಿ ವಿಶ್ವ ಪರಿಸರ ದಿನಾಚರಣೆಯಂದು ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಜೂನ್ 5, 2020ರ ವಿಶ್ವ ಪರಿಸರ ದಿನದಂದು ಉದ್ಘಾಟನೆಗೊಳ್ಳಲಿದೆ. ಜಿಪಂ, ಅಧ್ಯಕ್ಷರು, ಸಿಇಒ, ತಾಪಂ, ಇಒ ಸಹಕಾರದಿಂದ ಜಲಾಮೃತ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ.
-ಶ್ರೀನಿವಾಸ್, ರಮಾಪುರ ಗ್ರಾಪಂ ಪಿಡಿಒ
* ವಿ.ಡಿ.ಗಣೇಶ್, ಗೌರಿಬಿದನೂರು